ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಢೀರ್ ರಾಜಕೀಯ ಬೆಳವಣಿಗೆ: ರಷ್ಯಾ ಸರ್ಕಾರವನ್ನೇ ಕೆಳಗಿಳಿಸಿದ ಪುತಿನ್!

|
Google Oneindia Kannada News

ಮಾಸ್ಕೋ, ಜನವರಿ 15: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬುಧವಾರ ರಷ್ಯಾದ ಪ್ರಧಾನಿ ಡಿಮಿರ್ಟಿ ಮೆಡ್ವೆಡೇವ್ ಅವರು ಹಠಾತ್ತನೆ ರಾಜೀನಾಮೆ ನೀಡಿದರು. ಆ ಮೂಲಕ ರಷ್ಯಾ ಸರ್ಕಾರವು ಪತನಗೊಂಡಿತು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಸಂವಿಧಾನಕ್ಕೆ ಕೆಲವು ಮಹತ್ವದ ಬದಲಾವಣೆಗಳನ್ನು ತರಬೇಕಾಗಿದೆ ಎಂಬ ಹೇಳಿಕೆ ಕೊಟ್ಟ ನಂತರ ಪ್ರಧಾನಿ ಸ್ಥಾನಕ್ಕೆ ಡಿಮಿರ್ಟಿ ಮೆಡ್ವೆಡೇವ್ ರಾಜೀನಾಮೆ ನೀಡಿದ್ದರು.

ಈಗಾಗಲೇ ರಷ್ಯಾ ರಾಜಕಾರಣದ ಮೇಲೆ ದಶಕಕಗಳಿಂದ ಬಿಗಿ ಹಿಡಿತ ಸಾಧಿಸಿರುವ ಪುತಿನ್ ಸಂವಿಧಾನಕ್ಕೆ ಬದಲಾವಣೆ ತಂದು ತನ್ನ ಹಿಡಿತವನ್ನು ಇನ್ನಷ್ಟು ಗಟ್ಟಿಗಳಿಸಿಕೊಳ್ಳುವ ಮತ್ತು ಸರ್ವಾಧಿಕಾರಿ ಸ್ಥಾನವನ್ನು ಅಲಂಕರಿಸುವ ಇಚ್ಛೆಯಿಂದಲೇ ಸಂವಿಧಾನಕ್ಕೆ ಬದಲಾವಣೆ ತರಲು ಬಯಸಿದ್ದು, ಅದರ ಮೊದಲ ಹೆಜ್ಜೆಯಾಗಿಯೇ ಸರ್ಕಾರವನ್ನು ಪತನಗೊಳಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Russia Political Development: PM Resigns Putin Appoints New PM

ಪ್ರಧಾನಿ ಸ್ಥಾನಕ್ಕೆ ಡಿಮಿರ್ಟಿ ಮೆಡ್ವೆಡೇವ್ ರಾಜೀನಾಮೆ ನೀಡಿದ ಕೂಡಲೇ ಮಿಶಿಲ್ ಮಿಶುಸ್ತಿನ್ ಅವರನ್ನು ರಷ್ಯಾದ ಪ್ರಧಾನಿಯನ್ನಾಗಿ ಪುತಿನ್ ಆಯ್ಕೆ ಮಾಡಿದ್ದಾರೆ.

ಸರ್ಕಾರವೇ ಪತನವಾಗಿರುವ ಕಾರಣ ಅಧ್ಯಕ್ಷ ಪುತಿನ್ ಅವರ ಕೈಯಲ್ಲಿ ಸರ್ವಾಡಳಿತ ದೊರೆತಿದ್ದು, ಪುತಿನ್ ಬಯಸಿದಂತೆ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದಾಗಿದೆ. 'ಅಧಿಕಾರದ ಸಮತೋಲನೆ ಕುರಿತಂತೆ ಸಂವಿಧಾನಕ್ಕೆ ಕೆಲವು ಬದಲಾವಣೆ ಮಾಡಬೇಕಿದೆ' ಎಂದು ಕೆಲವು ದಿನಗಳ ಹಿಂದಷ್ಟೆ ಪುತಿನ್ ಹೇಳಿದ್ದರು.

English summary
Russia prime minister resigns after Vlademir Putin pitches constitutional changes. Putin appointed new PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X