• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಕೇಸ್: ಚೀನಾವನ್ನು ಹಿಂದಿಕ್ಕಿದ ಮತ್ತೊಂದು ಪವರ್‌ಪುಲ್ ದೇಶ

|

ಮಾಸ್ಕೋ, ಏಪ್ರಿಲ್ 28: ಜಗತ್ತಿನ ಪವರ್‌ಪುಲ್ ದೇಶ ರಷ್ಯಾ, ಅಮೆರಿಕ, ಸ್ಪೇನ್, ಇಟಲಿ ಹಾಗೂ ಬ್ರಿಟನ್ ನಂತರ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದೆ. ವಿಸ್ತಿರ್ಣದಲ್ಲಿ ಅತಿ ದೊಡ್ಡ ದೇಶವಾದ ರಷ್ಯಾದಲ್ಲಿ ಇಲ್ಲಿಯವರೆಗೆ 93,558 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 867 ಜನರು ಮೃತಪಟ್ಟಿದ್ದಾರೆ.

   Nostradamus predicted that year 2020 will be very violent | 2020 | WORLWAR III | ONEINDIA KANNADA

   ಕೊರೊನಾ ವೈರಸ್ ಹುಟ್ಟಿಗೆ ಕಾರಣವಾದ ಚೀನಾದಲ್ಲಿ ಸದ್ಯ ಕೊರೊನಾ ಹಾವಳಿ ಸಂಪೂರ್ಣ ನಿಂತಿದೆ ಎಂದು ಹೇಳಲಾಗುತ್ತಿದ್ದು, ಅಲ್ಲಿ, 82 ಸಾವಿರ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು 6 ಸಾವಿರ ಜನ ಮೃತಪಟ್ಟಿದ್ದಾರೆ.

   ಕೊರೊನಾ ಯುದ್ಧ ಗೆದ್ದ ನ್ಯೂಜಿಲ್ಯಾಂಡ್ ಕೈಗೊಂಡ ಶಿಸ್ತು ಕ್ರಮಗಳೇನು?

   ಆದರೆ, ರಷ್ಯಾ ಆರಂಭದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿತ್ತು. ಆದರೆ, ಕಳೆದ ಎರಡು ವಾರದಿಂದ ಏರುಗತಿಯಲ್ಲಿ ಸಾಗುತ್ತಿರುವ ಪಾಸಿಟಿವ್ ಪ್ರಕರಣಗಳು ಲಕ್ಷದ ಸನೀಹಕ್ಕೆ ಬಂದಿದೆ. ಇದರಿಂದ ರಷ್ಯಾ ಅಧ್ಯಕ್ಷ ವಾಡ್ಲಿಮೀರ್ ಪುಟಿನ್ ತೀವ್ರ ಕಂಗಾಲಾಗಿದ್ದಾರೆ.

   ಮೇ 12 ವರೆಗೆ ಲಾಕ್‌ಡೌನ್

   ಮೇ 12 ವರೆಗೆ ಲಾಕ್‌ಡೌನ್

   ರಷ್ಯಾ ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ. ಆದರೆ, ಕಳೆದ 15 ದಿನಗಳಿಂದ ಸೋಂಕು ಪ್ರಮಾಣ ಹೆಚ್ಚಳವಾಗುತ್ತಿದೆ. ಸದ್ಯ ಏಪ್ರಿಲ್ 30 ರವರೆಗೆ ಸಂಪೂರ್ಣ ಲಾಕ್‌ಡೌನ್ ಹೇರಲಾಗಿತ್ತು. ಆದರೆ, ಅಲ್ಲಿನ ವಿರೊಧ ಪಕ್ಷಗಳು ವಿಸ್ತರಿಸುವಂತೆ ಅಂದರೆ ಮೇ 12 ವರೆಗೆ ವಿಸ್ತರಿಸುವಂತೆ ಮನವಿ ಮಾಡಿವೆ ಎಂದು ತಿಳಿದು ಬಂದಿದೆ.

   ತಾವು ದಿವಾಳಿಯಾಗುವ ಅಪಾಯವಿದೆ

   ತಾವು ದಿವಾಳಿಯಾಗುವ ಅಪಾಯವಿದೆ

   ಹಿಂದಿನ ಪ್ರಧಾನಿ ಮಿಖಾಯಿಲ್ ಮಿಶುಶಿನ್ ಅವರು, ಆರ್ಥಿಕ ಹಿತ ದೃಷ್ಟಿಯಿಂದ ವ್ಯವಹಾರಗಳ ಮೇಲಿನ ಕೆಲವು ನಿರ್ಬಂಧಗಳನ್ನು ಸರಾಗಗೊಳಿಸುವಂತೆ ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಲಾಕ್‌ಡೌನ್ ಮುಂದುವರಿದರೆ ತಾವು ದಿವಾಳಿಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದು, ಕಂಪೆನಿಗಳು ಸಾವಿರಾರು ಕಾರ್ಮಿಕರನ್ನು ವಜಾಗೊಳಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಈ ನಿರ್ಧಾರವನ್ನು ಪುಟಿನ್ ತಳ್ಳಿ ಹಾಕಿದ್ದಾರೆ.

   ಕೊರೊನಾ ಕಾರಣ: ಆ ದೇಶದಲ್ಲಿ ಮಲೇರಿಯಾ ಸೋಂಕಿತರು ಡಬಲ್!

   ಸೋಂಕು ಇನ್ನೂ ಹೆಚ್ಚಳವಾಗುವ ಸೂಚನೆ

   ಸೋಂಕು ಇನ್ನೂ ಹೆಚ್ಚಳವಾಗುವ ಸೂಚನೆ

   ರಕ್ಷಣಾ ಸಚಿವಾಲಯದ ಪೇಟ್ರಿಯಾಟ್ ಮ್ಯೂಸಿಯಂ ಮತ್ತು ಅದ್ದೂರಿ ಸಂಗೀತ ಕಚೇರಿಗಳಿಗೆ ತಾಣವಾಗಿದ್ದ ಕ್ರೋಕಸ್ ಪ್ರದರ್ಶನ ಕೇಂದ್ರದಲ್ಲಿ ತಲಾ 1,500 ಹಾಸಿಗೆಗಳನ್ನು ಹೊಂದಿರುವ ಎರಡು ಹೊಸ ಆಸ್ಪತ್ರೆಗಳನ್ನು ತೆರೆಯಲು ಮಾಸ್ಕೋ ಸ್ಥಳೀಯಾಡಳಿತ ಯೋಜಿಸಿದೆ. ಕೊರೊನಾ ಸೋಂಕು ಇನ್ನೂ ಹೆಚ್ಚಳವಾಗುವ ಸೂಚನೆಯನ್ನು ಇದು ನೀಡಿದೆ.

   900 ಯೋಧರಲ್ಲಿ ಕೊರೊನಾ‌ ಸೋಂಕು!

   900 ಯೋಧರಲ್ಲಿ ಕೊರೊನಾ‌ ಸೋಂಕು!

   ರಷ್ಯಾ ಸೇನೆಯ 900 ಯೋಧರಲ್ಲಿ ಕೊರೊನಾ‌ ಸೋಂಕು ಇರುವುದು ದೃಢಪಟ್ಟಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. 390 ಸೈನಿಕರು ಮನೆಯಲ್ಲಿಯೇ ಪ್ರತ್ಯೇಕ ವಾಸವಿದ್ದಾರೆ. ಉಳಿದವರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಯೋಧರ ಸ್ಥಿತಿ ಗಂಭೀರವಾಗಿದ್ದು, ಒಬ್ಬರಿಗೆ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ರಷ್ಯಾ ಸೇನೆ ಮಾಹಿತಿ ನೀಡಿದೆ.

   ಓಹ್.. ಜುಲೈನಲ್ಲಿ 'ಕೊರೊನಾ-ದಿ ಎಂಡ್': ಸಂಶೋಧಕರ ಈ ಮಾತು ನಿಜವಾಗಲಿ!

   English summary
   Russia Overtakes China With Coronavirus Cases. nearly 1 lakh positive cases in Russia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more