ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಷಾಹಾರ ಸೇವನೆ: ಕೋಮಾಗೆ ಜಾರಿದ ರಷ್ಯಾ ವಿರೋಧ ಪಕ್ಷದ ನಾಯಕ

|
Google Oneindia Kannada News

ಮಾಸ್ಕೋ, ಆಗಸ್ಟ್ 20: ರಷ್ಯಾದ ವಿರೋಧ ಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರು ಕೋಮಾಗೆ ಜಾರಿದ್ದು ಸೈಬೇರಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಕರೆ ತರಲಾಗಿತ್ತು, ವಿಷಯುಕ್ತ ಟೀ ಸೇವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಕೋವಿಡ್-19 ಲಸಿಕೆಯಿಂದ ರಷ್ಯಾ ಅಧ್ಯಕ್ಷ ಪುಟಿನ್ ಮಗಳು ಮೃತಪಟ್ಟಿದ್ದು ನಿಜವೇ?ಕೋವಿಡ್-19 ಲಸಿಕೆಯಿಂದ ರಷ್ಯಾ ಅಧ್ಯಕ್ಷ ಪುಟಿನ್ ಮಗಳು ಮೃತಪಟ್ಟಿದ್ದು ನಿಜವೇ?

ನಾವಲ್ನಿ 44 ವರ್ಷದ ವಕೀಲರಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವವರೂ ಕೂಡ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧವೂ ಸಾಕಷ್ಟು ಆರೋಪಗಳನ್ನು ಮಾಡಿದ್ದರು.

Russia Opposition Leader In Coma

ಅವರು ವಿಮಾನದಲ್ಲಿರುವಾಗಲೇ ಕುಸಿದು ಬಿದ್ದ ಕಾರಣ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.ಸಾಕಷ್ಟು ಪರೀಕ್ಷೆಗಳು ನಡೆಯುತ್ತಿವೆ, ಅವರು ಕೋಮಾಗೆ ಜಾರಿದ್ದಾರೆ, ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.

ಅವರಿಗೆ ಹಾನಿ ಮಾಡುವ ದೃಷ್ಟಿಯಿಂದಲೇ ವಿಷ ನೀಡಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ.ಚಹಾದಲ್ಲಿ ವಿಷ ಬೆರೆಸಿ ನೀಡಲಾಗಿತ್ತು ಎಂಬುದು ನಮ್ಮ ಊಹೆ, ಅವರು ಬೆಳಗ್ಗೆ ಅದನ್ನು ಮಾತ್ರ ಸೇವಿಸಿದ್ದರು. ಬಿಸಿಯಾದ ದ್ರವದ ಮೂಲಕ ವಿಷ ಬಹುಬೇಗ ಹೀರಿಕೊಳ್ಳುತ್ತದೆ.

ಅಲೆಕ್ಸಿ ನವಲ್ನಿಗೆ ಈ ದಾಳಿ ಹೊಸದಲ್ಲ. ಈ ಹಿಂದೆಯೂ ಅವರ ಕೊಲೆಗೆ ಹಲವು ಯತ್ನಗಳು ನಡೆದಿದ್ದವು. ಕಳೆದ ವರ್ಷ ಜೈಲು ಶಿಕ್ಷೆಯಲ್ಲಿದ್ದಾಗ ಏಕಾಏಕಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೂ ಶಂಕಿತ ವಿಷಪ್ರಾಷನದ ಬಗ್ಗೆ ಅವರ ತಂಡ ಅನುಮಾನ ವ್ಯಕ್ತಪಡಿಸಿತ್ತು. ವೈದ್ಯರು ಇದೊಂದು ಅಲರ್ಜಿ ಎಂದು ಹೇಳಿ ಕೈತೊಳೆದುಕೊಂಡಿದ್ದರು.

2017ರಲ್ಲಿ ಪ್ರತಿಭಟನೆ ವೇಳೆ ಆಗಂತುಕರು ಅವರ ಮೇಲೆ ರಾಸಾಯನಿಕ ವಸ್ತುಗಳನ್ನು ಎರಚಿದ್ದರು. ಇದರಿಂದ ಅವರ ಕಣ್ಣಿಗೆ ಹಾನಿಯಾಗಿತ್ತು. ಅವರ ಮೇಲೆ ಹಲವು ಕ್ರಿಮಿನಲ್‌ ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಅವರ ಕಚೇರಿ ಮೇಲೆ ಪದೇ ಪದೇ ತನಿಖಾ ತಂಡಗಳು ಮತ್ತು ಪೊಲೀಸರು ದಾಳಿ ಮಾಡುತ್ತಲೇ ಇರುತ್ತಾರೆ.

ಅಲೆಕ್ಸಿ ನವಲ್ನಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಕಟು ವಿರೋಧಿಯಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ರಷ್ಯಾದಲ್ಲಿ ಕೈಗೊಂಡ ಸಾಂವಿಧಾನಿಕ ಸುಧಾರಣೆ ನಡೆಗಳನ್ನು ಅವರು ಕ್ಷಿಪ್ರಕ್ರಾಂತಿ ಮತ್ತು ಸಂವಿಧಾನ ವಿರೋಧಿ ನಡೆ ಎಂದು ಬಣ್ಣಿಸಿದ್ದರು. ಈ ತಿದ್ದುಪಡಿಗಳ ಮೂಲಕ ಇನ್ನೆರಡು ಅವಧಿಗೆ ರಷ್ಯಾದ ಅಧ್ಯಕ್ಷರಾಗಿ ಮುಂದುವರಿಯುವ ಅವಕಾಶ ಪುಟಿನ್‌ಗೆ ಸಿಕ್ಕಿದೆ.

English summary
The Russian opposition leader Alexei Navalny was in intensive care in a Siberian hospital on Thursday after he fell ill in what his spokeswoman said was a suspected poisoning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X