• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಷ್ಯಾದಲ್ಲಿ 'ಸ್ಪುಟ್ನಿಕ್ ಲೈಟ್' ಕೊರೊನಾ ಲಸಿಕೆ ಬಿಡುಗಡೆ

|
Google Oneindia Kannada News

ಮಾಸ್ಕೋ, ಜೂನ್ 25: ರಷ್ಯಾದಲ್ಲಿ 'ಸ್ಪುಟ್ನಿಕ್ ಲೈಟ್' ಕೊರೊನಾ ಲಸಿಕೆ ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಷ್ಯಾವು ಸ್ಪುಟ್ನಿಕ್ ಲೈಟ್ ಎನ್ನುವ ಕೋವಿಡ್ ಲಸಿಕೆಯ ಅವತರಿಣಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ, ಇದು ಸ್ಪುಟ್ನಿಕ್ V ಲಸಿಕೆಯ ಪರಿಷ್ಕೃತ ಲಸಿಕೆಯಾಗಿದೆ ಎಂದು ಕೊಮ್ಮರ್‌ಸಾಂಟ್ ದೈನಿಕ ಪತ್ರಿಕೆ ವರದಿ ಮಾಡಿದೆ.

ಭಾರತದಲ್ಲಿ ಕೊರೊನಾ ಇಳಿಕೆ, ಗುಣಮುಖರ ಏರಿಕೆ ಜೊತೆ ಲಸಿಕೆ ಕಥೆಭಾರತದಲ್ಲಿ ಕೊರೊನಾ ಇಳಿಕೆ, ಗುಣಮುಖರ ಏರಿಕೆ ಜೊತೆ ಲಸಿಕೆ ಕಥೆ

ರಷ್ಯಾದಲ್ಲಿ ಈ ಮೊದಲು ಬಿಡುಗಡೆ ಮಾಡಿರುವ ಸ್ಪುಟ್ನಿಕ್ V ಲಸಿಕೆಯ ಮೊದಲ ಡೋಸ್‌ನ ಪರಿಷ್ಕೃತ ಲಸಿಕೆ ಇದಾಗಿದ್ದು, 21 ದಿನಗಳ ಅಂತರದಲ್ಲಿ ಲಸಿಕೆ ನೀಡಲಾಗುತ್ತದೆ.

ಸುಮಾರು ಆರು ತಿಂಗಳುಗಳ ಹಿಂದೆ ಸ್ಪುಟ್ನಿಕ್ V ಲಸಿಕೆ ಹಾಕಿಸಿಕೊಂಡವರಿಗೆ ಸ್ಪುಟ್ನಿಕ್ ಲೈಟ್ ಲಸಿಕೆ ಬೂಸ್ಟರ್ ರೀತಿಯಲ್ಲಿ ಕೆಲಸ ಮಾಡಲಿದೆ.

ಸ್ಪುಟ್ನಿಕ್ V ಮೊದಲ ಡೋಸ್‌ನ ಉತ್ಪಾದನೆಯನ್ನು ಭಾರಿ ಪ್ರಮಾಣದಲ್ಲಿ ಮಾಡಲಾಗಿತ್ತು. ಆದರೆ ಆವಿಯಾಗುವ ಸ್ವಭಾವ ಲಸಿಕೆಯದ್ದಾದರಿಂದ ಎರಡನೇ ಡೋಸ್‌ ಅನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಲಾಗಿತ್ತು.

ಸ್ಪುಟ್ನಿಕ್ V ಡೋಸ್ ಪಡೆದುಕೊಂಡವರಿಗೆ ಎರಡನೇ ಡೋಸ್‌ನ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕೆ ಇದೀಗ ಸ್ಪುಟ್ನಿಕ್ ಲೈಟ್ ಲಸಿಕೆ ಅಭಿವೃದ್ಧಿಪಡಿಸಲಾಗಿದೆ.

ರಷ್ಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಡೆಲ್ಟಾ ರೂಪಾಂತರಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಲಸಿಕೆ ಅಭಿಯಾನವನ್ನು ತ್ವರಿತಗೊಳಿಸುವ ಒತ್ತಡದಲ್ಲಿದೆ. ಹೀಗಾಗಿ ಸ್ಪುಟ್ನಿಕ್ ಲೈಟ್ ಇಡೀ ದೇಶಕ್ಕೇ ವರದಾನವಾಗಿ ದೊರೆತಿದೆ. ಹೊಸದಾಗಿ ಸ್ಪುಟ್ನಿಕ್ ಲೈಟ್ ಪಡೆದುಕೊಂಡವರಿಗೆ ಇನ್ನೊಂದು ಡೋಸ್‌ನ ಅಗತ್ಯವಿರುವುದಿಲ್ಲ. ಭಾರತದಲ್ಲಿ ಈಗಾಗಲೇ ಮೂರು ಕೊರೊನಾ ಲಸಿಕೆಗಳಿಗೆ ಅನುಮತಿ ನೀಡಲಾಗಿದ್ದು, ಅದರಲ್ಲಿ ಸ್ಪುಟ್ನಿಕ್ V ಕೂಡಾ ಒಂದಾಗಿದೆ, ಕೋವ್ಯಾಕ್ಸಿನ್, ಕೋವಿಶೀಲ್ಡ್‌ಗೆ ಅನುಮತಿ ನೀಡಲಾಗಿದೆ.

English summary
Russia on Friday launched into circulation its fourth vaccine against COVID-19, the one-dose Sputnik Light, the Kommersant daily reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X