ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ರಷ್ಯಾ-ಚೀನಾ ಮಾತುಕತೆ: ಸಹಕಾರದ ಮಂತ್ರ

|
Google Oneindia Kannada News

ಮಾಸ್ಕೋ, ಸೆಪ್ಟೆಂಬರ್ 10: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಷ್ಯಾ ಸಚಿವ ಸರ್ಜೆ ಲಾವ್ರೊವ್ ಮತ್ತು ಚೀನಾ ಸಚಿವ ವಾಂಗ್ ವಿ ಅವರು ಮಾಸ್ಕೋದಲ್ಲಿ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು.

ರಷ್ಯಾ-ಭಾರತ-ಚೀನಾ ನಡುವಿನ ಸಹಕಾರವನ್ನು ವೃದ್ಧಿಸುವ ಬಗ್ಗೆ, ಜತೆಗೆ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಮಹತ್ವದ ಪ್ರಮುಖ ಸಂಗತಿಗಳಲ್ಲಿ ಪರಸ್ಪರ ಸಹಮತ, ಸ್ನೇಹ ಹಾಗೂ ನಂಬಿಕೆಯ ಆಧಾರದಲ್ಲಿ ಸಹಕಾರ ನೀಡುವ ಕುರಿತು ಚರ್ಚಿಸಿದರು. ಮೂರೂ ದೇಶಗಳು ಜಾಗತಿಕ ಬೆಳವಣಿಗೆ, ಶಾಂತಿ ಹಾಗೂ ಸ್ಥಿರತೆಯನ್ನು ಮೂಡಿಸುವ ವಿಚಾರದಲ್ಲಿ ಸಾಮಾನ್ಯ ಅಭಿವೃದ್ಧಿ ಹಾಗೂ ಸಹಕಾರದ ಅಗತ್ಯವನ್ನು ಸಭೆಯಲ್ಲಿ ಮನಗಾಣಲಾಯಿತು.

ರಷ್ಯಾ: ಭಾರತ-ಚೀನಾ ವಿದೇಶಾಂಗ ಸಚಿವರ ಮಾತುಕತೆ ಆರಂಭರಷ್ಯಾ: ಭಾರತ-ಚೀನಾ ವಿದೇಶಾಂಗ ಸಚಿವರ ಮಾತುಕತೆ ಆರಂಭ

ಎರಡನೆಯ ವಿಶ್ವಯುದ್ಧ ವಿಜಯದ 75ನೇ ವರ್ಷಾಚರಣೆ ಹಾಗೂ ವಿಶ್ವಸಂಸ್ಥೆ ಸ್ಥಾಪನೆಯ ದಿನದ ಅಂಗವಾಗಿ 2020ರ ಜೂನ್ 23ರಂದು ನಡೆಸಿದ ವಿಡಿಯೋ ಕಾನ್ಫರೆನ್ಸ್‌ಅನ್ನು ನೆನಪಿಸಿಕೊಂಡ ಸಚಿವರು, ಬಹುಪಕ್ಷೀಯ ಚಟುವಟಿಕೆಗಳು ಹಾಗೂ ಅಂತಾರಾಷ್ಟ್ರೀಯ ಕಾನೂನಿನ ತತ್ವಗಳಿಗೆ ಗೌರವ ನೀಡುವುದರಲ್ಲಿ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು.

ಚೀನಾಕ್ಕೆ ಪ್ರತ್ಯುತ್ತರ: ಪರ್ವತ ಪ್ರದೇಶ ಆಕ್ರಮಿಸಿದ ಭಾರತಚೀನಾಕ್ಕೆ ಪ್ರತ್ಯುತ್ತರ: ಪರ್ವತ ಪ್ರದೇಶ ಆಕ್ರಮಿಸಿದ ಭಾರತ

 Russia-India-China Foreign Ministers Meeting At Moscow

Recommended Video

Indo China Clash : ಇದು ಅಪ್ಪಟ ಸುಳ್ಳು, ಇಲ್ಲಿದೆ ಸತ್ಯವಾದ ಕಥೆ | Oneindia Kannada

2019ರ ಆಗಸ್ಟ್‌ನಲ್ಲಿ ಭಾರತದಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಸಮಸ್ಯೆಗಳ ಕುರಿತಾದ ಎರಡನೆಯ ಆರ್‌ಐಸಿ ಡಿಜಿ ಮಟ್ಟದ ಸಲಹಾ ಸಭೆ ಸೇರಿದಂತೆ ಆರ್‌ಐಸಿ (ರಷ್ಯಾ-ಭಾರತ-ಚೀನಾ) ಚೌಕಟ್ಟಿನಲ್ಲಿ ನಡೆಸಿದ ಜಂಟಿ ಚಟುವಟಿಕೆಗಳನ್ನು ಮುಂದುವರಿಸಲು ಒಪ್ಪಿಕೊಂಡರು. ಪ್ರಬಲ ವೈಜ್ಞಾನಿಕ ಮತ್ತು ಕೈಗಾರಿಕಾ ಸಾಮರ್ಥ್ಯದ ಮೂಲಕ ಕೊರೊನಾ ವೈರಸ್ ಪಿಡುಗಿನ ಪ್ರಭಾವವನ್ನು ತಗ್ಗಿಸಲು ಮಹತ್ವದ ಕೊಡುಗೆ ನೀಡುವ ಬಗ್ಗೆಯೂ ಪರಸ್ಪರ ಸಹಮತ ವ್ಯಕ್ತಪಡಿಸಿದರು.

English summary
India's external affairs minister S Jaishankar, Russia's Sergey Lavrov and China minister Wang Yi met in Moscow and discussed about the cooperation between three nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X