• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

3ನೇ ಮಹಾಯುದ್ಧ ಫಿಕ್ಸ್..? ಯುರೋಪ್‌ನಲ್ಲೇ ಮತ್ತೊಮ್ಮೆ ಸಿಕ್ಕಿದೆ ಮುನ್ಸೂಚನೆ..!

|
Google Oneindia Kannada News

ಜಗತ್ತು ಈಗಾಗಲೇ 2 ಮಹಾಯುದ್ಧ ಅಂದರೆ ವರ್ಲ್ಡ್ ವಾರ್ ಕಂಡಿದೆ. ಆದರೆ ಈಗ 3ನೇ ಮಹಾಯುದ್ಧದ ಮಾತು ಕೇಳಿ ಬರುತ್ತಿದೆ. ಅದಕ್ಕೆ ಕಾರಣವಾಗಿರುವುದು ಯುರೋಪ್‌ ರಾಷ್ಟ್ರ ಉಕ್ರೇನ್.
ಅಪಾರ ಪ್ರಮಾಣದ ಸೇನೆಯನ್ನ ರಷ್ಯಾ ಉಕ್ರೇನ್ ಗಡಿಯಲ್ಲಿ ನಿಯೋಜನೆ ಮಾಡಿದೆ. ಇದರಿಂದ ಇಡೀ ಯುರೋಪ್ ಒಕ್ಕೂಟ ಹಾಗೂ ರಷ್ಯಾ ಪಾಲಿನ ಪರಮ ಶತ್ರು ಅಮೆರಿಕ ಕೆರಳಿ ಕೆಂಡವಾಗಿದೆ. ಅಂದಹಾಗೆ ಇದೇ ಉಕ್ರೇನ್ ಈ ಹಿಂದೆ ಸೋವಿಯತ್ ರಷ್ಯಾ ಭಾಗವಾಗಿತ್ತು.

ಅಂದರೆ ರಷ್ಯಾ ವಿಭಜನೆ ಆಗುವುದಕ್ಕೂ ಮೊದಲು ರಷ್ಯಾದ ಭಾಗವಾಗಿ ಗುರುತಿಸಿಕೊಂಡಿತ್ತು. ಆದರೆ ಯಾವಾಗ ರಷ್ಯಾ ವಿಭಜನೆ ಆಯ್ತೋ ಆಗ ಉಕ್ರೇನ್ ಕೂಡ ಸ್ವತಂತ್ರ ರಾಷ್ಟ್ರವಾಗಿ ಜನ್ಮತಾಳಿದೆ.

ಆದರೆ ರಷ್ಯಾ ಮಾತ್ರ ತನ್ನ ಪ್ರಯತ್ನ ಬಿಡದೆ ಮತ್ತೆ ಉಕ್ರೇನ್ ಭೂಭಾಗ ಆಕ್ರಮಿಸಲು ಪ್ರಯತ್ನ ನಡೆಸುತ್ತಿದೆ ಎಂಬ ಆರೋಪವಿದೆ. ಇಂತಹ ಆರೋಪಗಳ ನಡುವೆ ರಷ್ಯಾ ಉಕ್ರೇನ್‌ನ ಗಡಿ ಭಾಗದಲ್ಲಿ ಭಾರಿ ಪ್ರಮಾಣದ ಸೇನೆ ನಿಯೋಜಿಸಿದೆ. ಇದು ಜರ್ಮನಿ ಸೇರಿದಂತೆ ಇಡೀ ಯುರೋಪ್ ಅನ್ನೇ ರೊಚ್ಚಿಗೇಳಿಸಿದೆ.

ಸೈನಿಕರ ಜೊತೆ ಟ್ಯಾಂಕರ್..!

ಸೈನಿಕರ ಜೊತೆ ಟ್ಯಾಂಕರ್..!

ಅಪಾರ ಪ್ರಮಾಣದ ಸೇನೆಯನ್ನ ಉಕ್ರೇನ್ ಗಡಿಯಲ್ಲಿ ನಿಯೋಜನೆ ಮಾಡಿರುವ ರಷ್ಯಾ, ಇವರ ಜೊತೆಯಲ್ಲಿ ಟ್ಯಾಂಕರ್‌ಗಳನ್ನೂ ಗಡಿಗೆ ಕೊಂಡೊಯ್ದಿದೆ. ಇದು ಸಹಜವಾಗಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ಈ ಬಗ್ಗೆ ಉಕ್ರೇನ್ ಆತಂಕ ಹೊರಹಾಕಿದೆ. ಗಡಿಯಲ್ಲಿ ರಷ್ಯಾ ನಡೆ ಭಯ ಹುಟ್ಟಿಸುತ್ತಿದೆ. ವಿವಾದವಿರುವ ಗಡಿ ಭಾಗದಲ್ಲೇ ಭಾರಿ ಪ್ರಮಾಣದ ಸೇನೆ ನಿಯೋಜನೆ ಮಾಡಿದೆ ಎಂದಿದೆ. ಇದು ಯುರೋಪ್ ಹಾಗೂ ಅಮೆರಿಕ ಮತ್ತಿತರ ರಾಷ್ಟ್ರಗಳ ನಿದ್ದೆ ಹಾರಿಹೋಗುವಂತೆ ಮಾಡಿದೆ. ಏಕೆಂದರೆ ಯುರೋಪ್‌ನಲ್ಲಿ ಯುದ್ಧ ಆರಂಭವಾದರೆ 3ನೇ ಮಹಾಯುದ್ಧ ಆರಂಭ ಆದಂತೆ ಎಂಬುದು ತಜ್ಞರ ಆತಂಕ.

ಅಮೆರಿಕದ ಸ್ನೇಹ ಮುಳುವಾಯ್ತಾ..?

ಅಮೆರಿಕದ ಸ್ನೇಹ ಮುಳುವಾಯ್ತಾ..?

ಉಕ್ರೇನ್ ರಷ್ಯಾದ ಆಪ್ತಮಿತ್ರ. ಆದರೆ ಇದು ಸಹಜವಾಗಿ ರಷ್ಯಾ ಕಣ್ಣು ಕೆಂಪಗಾಗುವಂತೆ ಮಾಡಿದೆ. ಇತ್ತೀಚೆಗೆ ಅಮೆರಿಕದ ವೆಪನ್‌ಗಳನ್ನ ಉಕ್ರೇನ್ ಖರೀದಿ ಮಾಡಿತ್ತು, ರಷ್ಯಾ ಈ ಒಪ್ಪಂದವನ್ನ ತೀವ್ರವಾಗಿ ವಿರೋಧಿಸಿತ್ತು. ಘಟನೆ ನಡೆದು ಕೆಲವೇ ದಿನಗಳಲ್ಲಿ ರಷ್ಯಾ ತನ್ನ ಅಪಾರ ಪ್ರಮಾಣದ ಸೇನೆ ಹಾಗೂ ಯುದ್ಧ ಟ್ಯಾಂಕರ್‌ಗಳನ್ನು ಉಕ್ರೇನ್ ಗಡಿಗೆ ತಂದು ಬಿಟ್ಟಿದೆ. ಇದು ಯುದ್ಧ ನಡೆಯುವ ಪರೋಕ್ಷ ಎಚ್ಚರಿಕೆ ಎಂಬುದು ತಜ್ಞರ ವಿಶ್ಲೇಷಣೆ. ಆದರೆ ರಷ್ಯಾ ಮಾತ್ರ ಹೆದರಬೇಡಿ, ನಾವು ಏನೂ ಮಾಡೋದಿಲ್ಲ ಅಂತಾ ಭರವಸೆ ನೀಡುತ್ತಿದೆ

ರಷ್ಯಾ ನೆನೆದು ನಡುಗಿದೆ ಜರ್ಮನಿ..!

ರಷ್ಯಾ ನೆನೆದು ನಡುಗಿದೆ ಜರ್ಮನಿ..!

ಯುರೋಪ್ ಮೇಲೆ ನಿಯಂತ್ರಣ ಸಾಧಿಸಲು ರಷ್ಯಾ ಕಾದು ಕುಳಿತಿದೆ ಎಂದು ಯುರೋಪ್ ಒಕ್ಕೂಟದ ಕೆಲ ಬಲಾಢ್ಯ ರಾಷ್ಟ್ರಗಳು ಆರೋಪ ಮಾಡುತ್ತಾ ಬಂದಿವೆ. ಹೀಗಾಗಿಯೇ ಅಮೆರಿಕದ ಜೊತೆ ಸಾಧ್ಯವಾದಷ್ಟು ಸ್ನೇಹ ಗಿಟ್ಟಿಸಿಕೊಂಡಿತ್ತು ಯುರೋಪ್. ಆದರೆ ಅದ್ಯಾವಾಗ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೋ ಅಂದಿನಿಂದ ಈ ಸಂಬಂಧ ಹಳಸುತ್ತಾ ಬಂದಿದೆ. ಅಮೆರಿಕ ಮತ್ತು ಯುರೋಪ್ ಸ್ನೇಹ ನಾಶವಾಗುವ ಹಂತಕ್ಕೆ ಬಂದಿದೆ. ಇದೇ ಸಂದರ್ಭವನ್ನ ರಷ್ಯಾ ಬಳಸಿಕೊಂಡು, ಯುದ್ಧ ಸಾರುವ ಆತಂಕ ಜರ್ಮನಿಗೆ ಕಾಡುತ್ತಿದೆ. 2ನೇ ಮಹಾಯುದ್ಧ ನಡೆದಾಗ ಜರ್ಮನಿಯನ್ನ ಧೂಳಿಪಟ ಮಾಡಿತ್ತು ರಷ್ಯಾ. ಎರಡೂ ರಾಷ್ಟ್ರಗಳ ಮಧ್ಯೆ ಆ ದ್ವೇಷ ಇನ್ನೂ ಆರಿಲ್ಲ.

ಸ್ನೇಹ ಗಿಟ್ಟಿಸಿಕೊಂಡಿತ್ತು ಯುರೋಪ್.

ಸ್ನೇಹ ಗಿಟ್ಟಿಸಿಕೊಂಡಿತ್ತು ಯುರೋಪ್.

ಆದರೆ ಅದ್ಯಾವಾಗ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೋ ಅಂದಿನಿಂದ ಈ ಸಂಬಂಧ ಹಳಸುತ್ತಾ ಬಂದಿದೆ. ಅಮೆರಿಕ ಮತ್ತು ಯುರೋಪ್ ಸ್ನೇಹ ನಾಶವಾಗುವ ಹಂತಕ್ಕೆ ಬಂದಿದೆ. ಇದೇ ಸಂದರ್ಭವನ್ನ ರಷ್ಯಾ ಬಳಸಿಕೊಂಡು, ಯುದ್ಧ ಸಾರುವ ಆತಂಕ ಜರ್ಮನಿಗೆ ಕಾಡುತ್ತಿದೆ. 2ನೇ ಮಹಾಯುದ್ಧ ನಡೆದಾಗ ಜರ್ಮನಿಯನ್ನ ಧೂಳಿಪಟ ಮಾಡಿತ್ತು ರಷ್ಯಾ. ಎರಡೂ ರಾಷ್ಟ್ರಗಳ ಮಧ್ಯೆ ಆ ದ್ವೇಷ ಇನ್ನೂ ಆರಿಲ್ಲ.

English summary
Russia deployed thousands of soldiers and war tankers near Ukraine border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X