ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಕೊವಿಡ್ ಲಸಿಕೆ ಸುರಕ್ಷಿತವಲ್ಲ ಎಂಬ ಆರೋಪ ಆಧಾರ ರಹಿತ

|
Google Oneindia Kannada News

ರಷ್ಯಾದ ಕೊವಿಡ್ ಲಸಿಕೆ ಸುರಕ್ಷಿತವಲ್ಲ ಎಂಬ ಆರೋಪಗಳು ಆಧಾರರಹಿತ ಮತ್ತು ಸ್ಪರ್ಧೆಯ ಕಾರಣದಿಂದ ಸೃಷ್ಟಿಯಾಗಿರುವ ವದಂತಿ ಎಂದು ರಷ್ಯಾ ಹೇಳಿದೆ.

ಇನ್ನೂ ಮೂರನೇ ಹಾಗೂ ಅಂತಿಮ ಹಂತದ ಪ್ರಯೋಗವನ್ನು ನಡೆಸಿಲ್ಲ ಅದಕ್ಕೂ ಮುನ್ನವೇ ನೋಂದಣಿ ಮಾಡಿಸಲಾಗಿದೆ. ಎರಡು ತಿಂಗಳು ಕೂಡ ಪ್ರಯೋಗ ನಡೆದಿಲ್ಲ ಎಂದು ಜರ್ಮನಿ ಆರೋಪಿಸಿತ್ತು.

'ಅಂತಿಮ ಪ್ರಯೋಗಕ್ಕೂ ಮುನ್ನವೇ ರಷ್ಯಾದ ಕೊರೊನಾ ಲಸಿಕೆಗೆ ಅನುಮೋದನೆ''ಅಂತಿಮ ಪ್ರಯೋಗಕ್ಕೂ ಮುನ್ನವೇ ರಷ್ಯಾದ ಕೊರೊನಾ ಲಸಿಕೆಗೆ ಅನುಮೋದನೆ'

ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಅಮರಿಕದ ವಿಜ್ಞಾನಿಗಳು ಎಚ್ಚರಿಕೆಯಿಂದಿರುವಂತೆ ಒತ್ತಾಯಿಸಿದ್ದಾರೆ. ವಿದೇಶಿ ಸಹೋದ್ಯೋಗಿಗಳು ರಷ್ಯಾದ ಲಸಿಕೆ ಕುರಿತು ನೀಡುತ್ತಿರುವ ಎಲ್ಲಾ ಹೇಳಿಕೆಗಳು ಆಧಾರರಹಿತವಾಗಿದೆ ಎಂದು ರಷ್ಯಾದ ಆರೋಗ್ಯ ಸಚಿವ ಮಿಖಾಯಲ್ ಮುರಾಷ್ಕೋ ತಿಳಿಸಿದ್ದಾರೆ. ಹಾಗೆಯೇ ಶೀಘ್ರ ಲಸಿಕೆ ಲಭ್ಯವಾಗುವುದಾಗಿ ತಿಳಿಸಿದ್ದಾರೆ.

Russia Calls International Concern Over Vaccine Groundless

ಲಸಿಕೆ ದೊರೆಯುತ್ತಿದೆ ಎಂಬುದು ಖುಷಿಯ ವಿಚಾರವೇ ಸರಿ, ರಷ್ಯಾದವರು ಲಸಿಕೆಯನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಸರಿಯಾದ ಅಧ್ಯಯನಗಳು ಮತ್ತು ಪರೀಕ್ಷೆಗಳನ್ನು ನಡೆಸುವುದು ಮತ್ತು ಜನರ ವಿಶ್ವಾಸವನ್ನು ಗಳಿಸುವುದು ಕೂಡ ಮುಖ್ಯವಾಗಿರುತ್ತೆ ಎಂದು ಜರ್ಮನಿ ಹೇಳಿತ್ತು.

ಮೊದಲ ಪ್ಯಾಕೇಜ್‌ಗಳನ್ನು ಮುಂದಿನ ಎರಡು ವಾರಗಳಲ್ಲಿ ವಿತರಿಸಲಾಗುತ್ತದೆ. ಅಕ್ಟೋಬರ್‌ನಲ್ಲಿ ಸಾಮೂಹಿಕವಾಗಿ ಲಸಿಕೆ ಹಾಕಲಾಗುತ್ತದೆ. ಸ್ಪುಟ್ನಿಕ್ ವಿ ಲಸಿಕೆಯ ಆರಂಭಿಕ ಹಂತದ ಪ್ರಯೋಗ ಮುಕ್ತಾಯವಾಗಿದ್ದು, ಉತ್ತಮ ಫಲಿತಾಂಶ ಲಭ್ಯವಾಗಿದೆ.

English summary
On Tuesday, it said a vaccine had been given regulatory approval after less than two months of testing on humans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X