ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿ ಆಯ್ತು: ಯಾರ ಮೇಲೆ ಮೊದಲ ಪ್ರಯೋಗ?

|
Google Oneindia Kannada News

ವಿಶ್ವದ ಮೊಟ್ಟ ಮೊದಲ ಕೊರೊನಾ ಲಸಿಕೆ ರಷ್ಯಾದಲ್ಲಿ ನೋಂದಣಿಯಾಗಿರುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.

Recommended Video

ಕೇಂದ್ರದ ಮುಂದೆ ಪರಿಹಾರ ಕೇಳೋಕೆ ಇವರಿಗೆ ಧಮ್ ಇಲ್ಲ | Oneindia Kannada

ರಷ್ಯಾ ಈಗ ಕೊರೊನಾ ವಿರುದ್ಧದ ಹೋರಾಟದಲ್ಲಿ ಮೇಲುಗೈ ಸಾಧಿಸಿದೆ. ಅಂದರೆ ಕೊರೊನಾ ವೈರಸ್‌ಗೆ ಮದ್ದು ಕಂಡುಹಿಡಿದು ಜನರಿಗೆ ತಲುಪಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ರಷ್ಯಾದ ರಕ್ಷಣಾ ಸಚಿವಾಲಯದ ನೇತೃತ್ವದಲ್ಲಿ ಗಮೇಲಿಯಾ ಸೈಂಟಿಫಿಕ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಾಲಜಿ ಆಂಡ್ ಮೈಕ್ರೋಬಯೋಲಜಿ ಅಭಿವೃದ್ಧಿ ಪಡಿಸಿರುವ ಗ್ಯಾಮ್ ಕೋವಿಡ್ ವ್ಯಾಕ್ ಲಿಯೋ ವ್ಯಾಕ್ಸಿನ್ ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಕೊರೊನಾ ಲಸಿಕೆ ಬಳಕೆಗೆ ಸಿದ್ಧವಿದೆ ಎಂದ ರಷ್ಯಾಕೊರೊನಾ ಲಸಿಕೆ ಬಳಕೆಗೆ ಸಿದ್ಧವಿದೆ ಎಂದ ರಷ್ಯಾ

ವ್ಲಾಡಿಮಿರ್ ಪುಟಿನ್ ಪುತ್ರಿ ಮೊದಲ ಲಸಿಕೆಯ ಪ್ರಯೋಗಕ್ಕೆ ಒಳಗಾಗಲಿದ್ದಾರೆ.

ರಷ್ಯಾದಿಂದ ಎರಡು ಲಸಿಕೆ

ರಷ್ಯಾದಿಂದ ಎರಡು ಲಸಿಕೆ

ರಷ್ಯಾದಲ್ಲಿ ಸಧ್ಯ ಎರಡು ಕೊವಿಡ್ 19 ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಗಮೇಲಿಯಾ ವ್ಯಾಕ್ಸಿನ್‌ನ್ನು ಇಂದು ಅಧಿಕೃತವಾಗಿ ನೋಂದಣಿ ಆಗಿದೆ.ಮತ್ತೊಂದು ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರಾಲಜಿ ಅಂಡ್ ರಿಜಿಸ್ಟರ್ ಆಗುವ ಗಮೇಲಿಯಾ ವ್ಯಾಕ್ಸಿನ್ ಅನ್ನು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕವಾಗಿ ಲಸಿಕೆ ಹಾಕಲು ಆರಂಭಿಸಲಾಗುತ್ತದೆ.

ರಷ್ಯಾದಲ್ಲಿ ಸಾರ್ವಜನಿಕರಿಗೆ ಉಚಿತ ಲಸಿಕೆ

ರಷ್ಯಾದಲ್ಲಿ ಸಾರ್ವಜನಿಕರಿಗೆ ಉಚಿತ ಲಸಿಕೆ

ಈ ಲಸಿಕೆಯನ್ನು ರಷ್ಯಾ ತನ್ನ ದೇಶದಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ನೀಡುತ್ತಿದ್ದು, ಮೊದಲ ಹಂತದಲ್ಲಿ ವೈದ್ಯರು ಮತ್ತು ಶಿಕ್ಷಕರಿಗೆ ನೀಡಲಾಗುತ್ತದೆ. ಈಗಿನ ಎರಡು ವ್ಯಾಕ್ಸಿನ್‌ಗಳಲ್ಲದೇ ರಷ್ಯಾ ಇನ್ನೂ 24 ಕೋವಿಡ್ 19 ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಆರು ಲಸಿಕೆಗಳು ಶೀಘ್ರದಲ್ಲಿಯೇ ಮಾನವನ ಮೇಲೆ ಪ್ರಯೋಗಕ್ಕೆ ರೆಡಿಯಾಗಲಿದೆ.

ಯಾವ್ಯಾವ ದೇಶಗಳಲ್ಲಿ ಲಸಿಕೆ ಉತ್ಪಾದನೆ

ಯಾವ್ಯಾವ ದೇಶಗಳಲ್ಲಿ ಲಸಿಕೆ ಉತ್ಪಾದನೆ

ಇನ್ನು ಭಾರತ ಮತ್ತು ಬ್ರೆಜಿಲ್ ಸೇರಿದಂತೆ ವಿಶ್ವದ 20 ರಾಷ್ಟ್ರಗಳು ರಷ್ಯಾದ ಈ ಲಸಿಕೆಯನ್ನು ತಮ್ಮ ದೇಶಗಳಲ್ಲಿ ಉತ್ಪಾದಿಸಲು ಮುಂದೆ ಬಂದಿವೆ ಎಂದು ರಷ್ಯಾ ಹೇಳಿದೆ. ಆದರೆ ಅಮೆರಿಕ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ರಷ್ಯಾದ ಸಲಿಕೆ ಬಗ್ಗೆ ಅಪಸ್ವರ ಎತ್ತಿದ್ದು, ಅದರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಆದರೆ ಏನೇ ಇರಲಿ ರಷ್ಯಾದ ಈ ಲಸಿಕೆ ಯಶಸ್ವಿಯಾಗಲಿ ಎನ್ನುವುದೇ ವಿಶ್ವದ ಜನರ ಹಾರೈಕೆಯಾಗಿದೆ.

ಮೊದಲು ಯಾರ ಮೇಲೆ ಲಸಿಕೆ ಪ್ರಯೋಗ

ಮೊದಲು ಯಾರ ಮೇಲೆ ಲಸಿಕೆ ಪ್ರಯೋಗ

ಮೊದಲು ವ್ಲಾಡಿಮಿರ್ ಪುಟಿನ್ ಅವರ ಮಗಳ ಮೇಲೆಯೇ ಲಸಿಕೆಯ ಮೊದಲ ಪ್ರಯೋಗ ನಡೆಸಲಾಗುತ್ತದೆ ಎಂದು ಖುದ್ದಾಗಿ ಪುಟಿನ್ ತಿಳಿಸಿದ್ದಾರೆ.

English summary
The first Covid 19 vaccine in the world has been registered by Russia on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X