ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಕೊರೊನಾ ವೈರಸ್ ಲಸಿಕೆಗೆ ರಷ್ಯಾ ಅನುಮತಿ

|
Google Oneindia Kannada News

ಮಾಸ್ಕೋ, ಅಕ್ಟೋಬರ್ 14: ಕೊರೊನಾ ವೈರಸ್ ವಿರುದ್ಧ ಜಗತ್ತಿನ ಮೊದಲ ಲಸಿಕೆಗೆ ಅನುಮತಿ ನೀಡಿದ್ದ ರಷ್ಯಾ, ಈಗ ಎರಡನೆಯ ಲಸಿಕೆಯನ್ನು ಕೂಡ ನೋಂದಾಯಿಸಿದೆ. ಆಗಸ್ಟ್ ತಿಂಗಳಲ್ಲಿ ತನ್ನ ಮೊದಲ ಸ್ಪುಟ್ನಿಕ್-V ಲಸಿಕೆಗೆ ರಷ್ಯಾ ಅನುಮತಿ ನೀಡಿತ್ತು. ಈಗ ಮತ್ತೊಂದು ಕೋವಿಡ್ 19 ಲಸಿಕೆ 'ಎಪಿವಾಕ್ ಕೊರೊನಾ'ಗೆ ಅನುಮೋದನೆ ನೀಡಿರುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.

ವೆಕ್ಟರ್ ಸ್ಟೇಟ್ ರೀಸರ್ಚ್ ಸೆಂಟರ್ ಫಾರ್ ವೈರಾಲಜಿ ಆಂಡ್ ಬಯೋಟೆಕ್ನಾಲಜಿ 'ಎಪಿವಾಕ್ ಕೊರೊನಾ' ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಅದಕ್ಕೆ ಸರ್ಕಾರವು ಅನುಮತಿ ನೀಡಿದೆ.

ಭಾರತದಲ್ಲಿ ಸ್ಪುಟ್ನಿಕ್-V ಲಸಿಕೆ ಪ್ರಯೋಗ: ರಷ್ಯಾಕ್ಕೆ ಹಿನ್ನಡೆಭಾರತದಲ್ಲಿ ಸ್ಪುಟ್ನಿಕ್-V ಲಸಿಕೆ ಪ್ರಯೋಗ: ರಷ್ಯಾಕ್ಕೆ ಹಿನ್ನಡೆ

ಆಗಸ್ಟ್ ತಿಂಗಳಲ್ಲಿ ಸ್ಪುಟ್ನಿಕ್ 5 ಲಸಿಕೆಗೆ ಅನುಮೋದನೆ ನೀಡುವ ಮೂಲಕ ಕೊರೊನಾ ವೈರಸ್ ಲಸಿಕೆಗೆ ನಿಯಂತ್ರಕ ಅನುಮತಿ ನೀಡಿದ ಜಗತ್ತಿನ ಮೊದಲ ದೇಶ ಎಂಬ ಕೀರ್ತಿಗೆ ರಷ್ಯಾ ಪಾತ್ರವಾಗಿತ್ತು. ಆದರೆ ದೊಡ್ಡ ಪ್ರಮಾಣದಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುವ ಮುನ್ನವೇ ಸ್ಪುಟ್ನಿಕ್ ಲಸಿಕೆಯನ್ನು ಅಧಿಕೃತವಾಗಿ ನೋಂದಾವಣೆ ಮಾಡಿದ್ದು ವೈಜ್ಞಾನಿಕ ಸಮುದಾಯದ ಟೀಕೆಗೆ ಒಳಗಾಗಿತ್ತು.

 Russia Approves Second Coronavirus Vaccine EpiVacCorona After Sputnik V

ರಷ್ಯಾದ ಚುಮಕೋವ್ ಕೇಂದ್ರ ಅಭಿವೃದ್ಧಿಪಡಿಸಿರುವ ಮೂರನೇ ಕೋವಿಡ್ ಲಸಿಕೆಯನ್ನು ಕೂಡ ಮುಂದಿನ ದಿನಗಳಲ್ಲಿ ನೋಂದಾಯಿಸಲಾಗುವುದು ಎಂದು ಪುಟಿನ್ ತಿಳಿಸಿದ್ದಾರೆ.

ರಷ್ಯಾದ ಉಪ ಪ್ರಧಾನಿ ತಾತ್ಯನಾ ಗೊಲಿಕೊವಾ ಸ್ವತಃ ತಾವು ಎಪಿವಾಕ್ ಕೊರೊನಾ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.

ರಷ್ಯಾ: 3 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಿಕೆರಷ್ಯಾ: 3 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಿಕೆ

ರಷ್ಯಾದ ವಿವಿಧ ಭಾಗಗಳಲ್ಲಿ ವೆಕ್ಟರ್ ಕೇಂದ್ರವು ನೋಂದಣಿ ನಂತರದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದೆ. ಇದರಲ್ಲಿ 40,000 ಸ್ವಯಂ ಸೇವಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

English summary
Russia has registered its second coronavirus vaccine EpiVacCorona after Sputnik V.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X