• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಕೊಡುವುದಿಲ್ಲ: ಭಾರತಕ್ಕೆ ರಷ್ಯಾ ಭರವಸೆ

|

ಮಾಸ್ಕೋ, ಸೆಪ್ಟೆಂಬರ್ 4: ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡದಿರುವ ತನ್ನ ನೀತಿಯನ್ನು ಮುಂದುವರಿಸುವುದಾಗಿ ರಷ್ಯಾ ಭರವಸೆ ನೀಡಿದ್ದು, ಭಾರತದ ಪ್ರಯತ್ನಕ್ಕೆ ಯಶ ಸಿಕ್ಕಿದೆ. ಗುರುವಾರ ಸಂಜೆ ಮಾಸ್ಕೋದಲ್ಲಿ ನಡೆದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಷ್ಯಾ ರಕ್ಷಣಾ ಸಚಿವ ಜನರಲ್ ಸೆರ್ಜೆ ಶೌಗು ನಡುವಿನ ಸಭೆ ವೇಳೆ ರಷ್ಯಾ ತನ್ನ ನೀತಿಯನ್ನು ಪುನರುಚ್ಚರಿಸಿದೆ.

   Pakistanದ ವಿರುದ್ಧ ಭಾರತದ ಜೊತೆ ಕೈಗೂಡಿಸಿದ Russia | Oneindia Kannada

   ಭಾರತದ ಮನವಿಯಂತೆ ರಷ್ಯಾವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದಿಲ್ಲ ಎಂಬ ತನ್ನ ನೀತಿಯನ್ನು ಪುನರುಚ್ಚರಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

   ಮಾಸ್ಕೋದಲ್ಲಿ ಭಾರತ- ಚೀನಾ ಮಾತುಕತೆ: ವಿದೇಶಾಂಗ ಸಚಿವ ಜೈಶಂಕರ್ ಮಾಹಿತಿ

   ರಷ್ಯಾದ ರಕ್ಷಣಾ ಸಚಿವಾಲಯದಲ್ಲಿ ನಡೆದ ರಾಜನಾಥ್ ಸಿಂಗ್ ಮತ್ತು ಶೌಗು ಅವರ ಮಾತುಕತೆ ಸುಮಾರು ಒಂದು ಗಂಟೆಯವರೆಗೆ ನಡೆಯಿತು ಎಂದು ಭಾರತದ ರಕ್ಷಣಾ ಸಚಿವಾಲಯ ತಿಳಿಸಿದೆ. ಉಭಯ ದೇಶಗಳ ಮಧ್ಯೆ ವಿವಿಧ ಕ್ಷೇತ್ರಗಳ ಸಹಕಾರದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಎರಡು ಸ್ನೇಹಿ ದೇಶಗಳ ನಡುವೆ ರಕ್ಷಣೆ ಹಾಗೂ ಯುದ್ಧತಂತ್ರ ಸಹಕಾರವನ್ನು ಬಲಪಡಿಸುವ ಸಂಬಂಧ ಮಾತುಕತೆ ನಡೆಸಿದರು.

   ರಷ್ಯಾ ರಕ್ಷಣಾ ಸಚಿವ ಜನರಲ್ ಸೆರ್ಜೆ ಶೌಗು ಅವರೊಂದಿಗೆ ಮಾಸ್ಕೋದಲ್ಲಿ ಇಂದು ಅದ್ಭುತ ಸಭೆ ನಡೆಯಿತು. ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದೆವು, ಮುಖ್ಯವಾಗಿ ಎರಡೂ ದೇಶಗಳ ಮಧ್ಯೆ ರಕ್ಷಣಾ ಹಾಗೂ ಯುದ್ಧತಂತ್ರ ಸಹಕಾರವನ್ನು ವೃದ್ಧಿಸುವುದು ಹೇಗೆಂದು ಸಮಾಲೋಚನೆ ನಡೆಸಲಾಯಿತು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

   SCO ಸಭೆ: ರಾಜನಾಥ್ ಸಿಂಗ್ ಭೇಟಿಗೆ ಚೀನಾ ಸಚಿವರ ದುಂಬಾಲು?

   ರಷ್ಯಾದಲ್ಲಿ ನಡೆಯುತ್ತಿರುವ ಮೂರು ದಿನಗಳ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಸಮಾವೇಶದಲ್ಲಿ ಚೀನಾ ರಕ್ಷಣಾ ಸಚಿವ ವೀ ಫೆಂಘಿ ಕೂಡ ಭಾಗವಹಿಸುತ್ತಿದ್ದು, ರಾಜನಾಥ್ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡುವ ಸಾಧ್ಯತೆ ಇದೆ. ಈ ಸಭೆಗಾಗಿ ಚೀನಾದ ರಾಯಭಾರ ಕಚೇರಿಯು, ಭಾರತದ ಕಚೇರಿಯನ್ನು ಸಂಪರ್ಕಿಸಿದೆ ಎಂದು ಹೇಳಲಾಗಿದೆ.

   English summary
   Russia reiterated its policy of no arms supply to Pakistan, following India's request.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X