ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ನಿಲ್ದಾಣದಲ್ಲಿ ವೇಗವಾಗಿ ಚಲಿಸಿದ ಎಸ್ಕಲೇಟರ್: 20 ಮಂದಿಗೆ ಗಾಯ

|
Google Oneindia Kannada News

ರೋಮ್ (ಇಟಲಿ), ಅಕ್ಟೋಬರ್ 24: ರೋಮ್‌ನ ಮೆಟ್ರೋ ನಿಲ್ದಾಣವೊಂದರಲ್ಲಿ ಎಸ್ಕಲೇಟರ್‌ನಲ್ಲಿ ತಾಂತ್ರಿಕ ದೋಷ ಸಂಭವಿಸಿ ಉಂಟಾದ ಅವಘಡದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಷ್ಯಾದ ಫುಟ್ಬಾಲ್ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಎಸ್ಕಲೇಟರ್, ಇದ್ದಕ್ಕಿದ್ದಂತೆ ವೇಗವಾಗಿ ಚಲಿಸಲು ಆರಂಭಿಸಿತು. ಇದರಿಂದ ಗಾಬರಿಗೊಂಡ ಜನರು ನಿಯಂತ್ರಣ ತಪ್ಪಿ ಉರುಳಿದರು. ಕೆಲವರು ಒಬ್ಬರ ಮೇಲೊಬ್ಬರು ಬಿದ್ದರು. ಕಿರುಚಾಟ ತಳ್ಳಾಟದ ನಡುವೆ ಒಬ್ಬರ ಕಾಲಿಗೆ ತೀವ್ರ ಪೆಟ್ಟಾಗಿದೆ.

ನೀರು ನೀಡಿದ ಹೋಟೆಲ್ ಸಪ್ಲೈಯರ್ ಗೆ 10 ಸಾವಿರ ಡಾಲರ್ ಭಕ್ಷೀಸು ನೀರು ನೀಡಿದ ಹೋಟೆಲ್ ಸಪ್ಲೈಯರ್ ಗೆ 10 ಸಾವಿರ ಡಾಲರ್ ಭಕ್ಷೀಸು

ಈ ಘಟನೆಯು ವಿಡಿಯೋದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

rome escalator collapsed russian football fans injured

ಪ್ರತ್ಯಕ್ಷದರ್ಶಿಗಳ ಪ್ರಕಾರ ಮದ್ಯಪಾನ ಮಾಡಿದಂತೆ ಕಾಣಿಸುತ್ತಿದ್ದ ಫುಟ್ಬಾಲ್ ಅಭಿಮಾನಿಗಳು ಎಸ್ಕಲೇಟರ್ ಮೇಲೆ ಕುಣಿಯುತ್ತಾ ಹಾರುತ್ತಿದ್ದರು. ಕೆಲಹೊತ್ತಿನಲ್ಲಿಯೇ ಎಸ್ಕಲೇಟರ್ ಕುಸಿಯಿತು. ಆದರೆ, ತಾವು ಆ ರೀತಿ ಮಾಡಿರಲಿಲ್ಲ ಎಂದು ಗಾಯಾಳುಗಳು ಹೇಳಿದ್ದಾರೆ.

ತೈವಾನ್ ನಲ್ಲಿ ಹಳಿ ತಪ್ಪಿದ ರೈಲು, ಕನಿಷ್ಠ 17 ಮಂದಿ ಸಾವು, 132 ಗಾಯಾಳುತೈವಾನ್ ನಲ್ಲಿ ಹಳಿ ತಪ್ಪಿದ ರೈಲು, ಕನಿಷ್ಠ 17 ಮಂದಿ ಸಾವು, 132 ಗಾಯಾಳು

ಇಟಲಿಯ ರೋಮಾ ಮತ್ತು ರಷ್ಯಾದ ಸಿಎಸ್‌ಕೆಎ ಮಾಸ್ಕೋ ಕ್ಲಬ್ ತಂಡಗಳ ನಡುವೆ ಚಾಂಪಿಯನ್ಸ್ ಲೀಗ್ ಆರಂಭವಾಗುವ ಒಂದು ಗಂಟೆ ಮುಂಚೆಯಷ್ಟೇ ಈ ಘಟನೆ ನಡೆದಿದೆ. ಸ್ಟೇಡಿಯಂಗೆ ಸಂಪರ್ಕ ಕಲ್ಪಿಸುವ ಮಾರ್ಗದ ಮೆಟ್ರೋವನ್ನು ಏರಲು ಈ ಅಭಿಮಾನಿಗಳ ತಂಡ ಹೊರಟಿತ್ತು.

ರಷ್ಯಾದ ಸುಮಾರು 1,500 ಬೆಂಬಲಿಗರು ಪಂದ್ಯವನ್ನು ವೀಕ್ಷಿಸಲು ಬರುತ್ತಿದ್ದು, ಅದರಲ್ಲಿ ಅನೇಕ ಪುಂಡರೂ ಇದ್ದಾರೆ ಎಂಬ ಕಾರಣಕ್ಕೆ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆ ಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆ

ರಷ್ಯಾದ ಒಬ್ಬ ಬೆಂಬಲಿಗನನ್ನು ವಿಮಾನ ನಿಲ್ದಾಣದಲ್ಲಿಯೇ ತಡೆಯಲಾಗಿತ್ತು. ಆದರೆ, ಈ ಭದ್ರತಾ ಕಾರ್ಯಗಳು ಹೊಡೆದಾಟವನ್ನು ತಡೆಯುವಲ್ಲಿ ವಿಫಲವಾಗಿವೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ. ಪಂದ್ಯದ ವೇಳೆ ಅಭಿಮಾನಿಗಳ ನಡುವೆ ನಡೆದ ಕಾದಾಟದಲ್ಲಿ ರಷ್ಯಾದ ಅಭಿಮಾನಿಯೊಬ್ಬನಿಗೆ ಚಾಕು ಇರಿಯಲಾಗಿದೆ. ಇನ್ನಿಬ್ಬರಿಗೆ ಕೂಡ ಹೊಡೆತಗಳು ಬಿದ್ದಿವೆ.

English summary
More than 20 injured when an escalator in a metro station in Rome collapsed after dramatically pick up speed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X