ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕ್ ರಾಜಧಾನಿ ಬಾಗ್ದಾದ್ ಮೇಲೆ ರಾಕೆಟ್ ದಾಳಿ

|
Google Oneindia Kannada News

Recommended Video

ರಾಕೆಟ್ ದಾಳಿಯನ್ನುಖಚಿತಪಡಿಸಿದ ಇರಾಕ್ ಸೇನೆ | US VS IRAQ | DONALDTRUMP | IRAQ

ಬಾಗ್ದಾದ್, ಜನವರಿ 09 : ಮಧ್ಯ ಪ್ರಾಚ್ಯದಲ್ಲಿನ ಬಿಕ್ಕಟ್ಟು ಮುಂದುವರೆದಿದೆ. ಇರಾಕ್ ರಾಜಧಾನಿ ಬಾಗ್ದಾದ್ ಮೇಲೆ ರಾಕೆಟ್ ದಾಳಿ ನಡೆಸಲಾಗಿದೆ. ಇರಾಕ್‌ನಲ್ಲಿನ ಅಮೆರಿಕ ವಾಯುನೆಲೆ ಮೇಲೆ ಬುಧವಾರ ಖಂಡಾಂತರ ಕ್ಷಿಪಣಿ ದಾಳಿ ನಡೆದಿತ್ತು.

ಗುರುವಾರ ಇರಾಕ್ ರಾಜಧಾನಿ ಬಾಗ್ದಾದ್‌ನ ಹಸಿರು ವಲಯಕ್ಕೆ ಎರಡು ರಾಕೆಟ್‌ಗಳು ಅಪ್ಪಳಿಸಿದೆ. ರಾಕೆಟ್ ದಾಳಿ ನಡೆದಿರುವುದನ್ನು ಇರಾಕ್ ಸೇನೆ ಖಚಿತಪಡಿಸಿದೆ. ಆದರೆ, ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದೆ.

ಖಾಸಿಂ ಸೋಲೆಮನಿ ಹತ್ಯೆ: ಅಮೆರಿಕಕ್ಕೆ ಸೆಡ್ಡು ಹೊಡೆದ ಇರಾನ್ ಮತ್ತು ಇರಾಕ್ಖಾಸಿಂ ಸೋಲೆಮನಿ ಹತ್ಯೆ: ಅಮೆರಿಕಕ್ಕೆ ಸೆಡ್ಡು ಹೊಡೆದ ಇರಾನ್ ಮತ್ತು ಇರಾಕ್

ಬುಧವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿ ನಡೆಸಿದ್ದರು. "ಇರಾನ್ ಭಯೋತ್ಪಾದನೆ ಪ್ರಾಯೋಜಕತ್ವದ ರಾಷ್ಟ್ರ. ಇರಾನ್ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ" ಎಂದು ಘೋಷಣೆ ಮಾಡಿದ್ದರು.

ಅಮೆರಿಕ ಕೊಂದ ಖಾಸಿಂ ಸೋಲೆಮಾನಿ ಯಾರು? ಟ್ರಂಪ್‌ಗೇಕೆ ಈತನ ಬಗ್ಗೆ ಭಯ?ಅಮೆರಿಕ ಕೊಂದ ಖಾಸಿಂ ಸೋಲೆಮಾನಿ ಯಾರು? ಟ್ರಂಪ್‌ಗೇಕೆ ಈತನ ಬಗ್ಗೆ ಭಯ?

ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಅಮೆರಿಕ ಸೇನೆ ದಾಳಿ ನಡೆಸಿ ಇರಾನ್ ಸೇನಾ ಕಮಾಂಡರ್ ಖಾಸಿಂ ಸುಲೇಮಾನಿಯನ್ನು ಹತ್ಯೆ ಮಾಡಿತ್ತು. ಈ ಘಟನೆ ಬಳಿ ಮಧ್ಯ ಪ್ರಾಚ್ಯದಲ್ಲಿನ ಬಿಕ್ಕಟ್ಟು ಉಂಟಾಗಿದೆ. ಇರಾನ್ ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇರಾಕ್‌ನ ಅಮೆರಿಕ ಸೇನಾ ನೆಲೆ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ಮಾಡಿತ್ತು.

ಡೊನಾಲ್ಡ್ ಟ್ರಂಪ್ ತಲೆಗೆ 576 ಕೋಟಿ ರು ಸುಪಾರಿ ಕೊಟ್ಟ ಇರಾನ್ಡೊನಾಲ್ಡ್ ಟ್ರಂಪ್ ತಲೆಗೆ 576 ಕೋಟಿ ರು ಸುಪಾರಿ ಕೊಟ್ಟ ಇರಾನ್

ಹಸಿರು ವಲಯದ ಮೇಲೆ ರಾಕೆಟ್ ದಾಳಿ

ಹಸಿರು ವಲಯದ ಮೇಲೆ ರಾಕೆಟ್ ದಾಳಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿ ಬಳಿಕ ಇರಾಕ್ ರಾಜಧಾನಿ ಬಾಗ್ದಾದ್‌ನ ಹಸಿರು ವಲಯದ ಮೇಲೆ ಎರಡು ರಾಕೆಟ್ ದಾಳಿಗಳನ್ನು ನಡೆಸಲಾಗಿದೆ. ರಾಕೆಟ್ ದಾಳಿ ನಡೆದಿರುವುದನ್ನು ಇರಾಕ್ ಸೇನೆ ಖಚಿತಪಡಿಸಿದೆ.

ಟ್ರಂಪ್ ಏನು ಹೇಳಿದ್ದರು?

ಟ್ರಂಪ್ ಏನು ಹೇಳಿದ್ದರು?

ಇರಾನ್ ಖಂಡಾಂತರ ಕ್ಷಿಪಣಿ ದಾಳಿ ಮಾಡಿದ ಬಳಿಕ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, "ದಾಳಿಯಲ್ಲಿ ಅಮೆರಿಕದ ಯಾವೊಬ್ಬ ಯೋಧರೂ ಮೃತಪಟ್ಟಿಲ್ಲ. ಇರಾನ್ ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರ. ಅಣ್ವಸ್ತ್ರ ಹೊಂದುವ ಪ್ರಯತ್ನದ ಮೂಲಕ ನಾಗರಿಕ ಸಮಾಜಕ್ಕೆ ಬೆದರಿಕೆಯೊಡ್ಡುತ್ತಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದರು.

ಆರ್ಥಿಕ ದಿಗ್ಭಂಧನ

ಆರ್ಥಿಕ ದಿಗ್ಭಂಧನ

ತಮ್ಮ ಪತ್ರಿಕಾಗೋಷ್ಠಿಯಲ್ಲಿ ಡೊನಾಲ್ಡ್ ಟ್ರಂಪ್, "ಇರಾನ್ ಸರ್ಕಾರದ ಮೇಲೆ ತಕ್ಷಣದಿಂದಲೇ ಆರ್ಥಿಕ ದಿಗ್ಭಂಧನ ಹೇರುವುದು ಸೇರಿದಂತೆ ವಿವಿಧ ಆಯ್ಕೆಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ" ಎಂದು ಎಚ್ಚರಿಕೆಯನ್ನು ನೀಡಿದ್ದರು.

ಇರಾಕ್‌ನಲ್ಲಿ ಸೇನಾ ನೆಲೆ

ಇರಾಕ್‌ನಲ್ಲಿ ಸೇನಾ ನೆಲೆ

ಇರಾಕ್‌ನಲ್ಲಿನ ಅಲ್ ಅಸದ್‌ನಲ್ಲಿ ವಾಯುನೆಲೆ, ಎರ್ಬಿಲ್‌ನಲ್ಲಿ ಸೇನಾ ನೆಲೆಯನ್ನು ಅಮೆರಿಕ ಹೊಂದಿದೆ. ಇರಾಕ್‌ನಲ್ಲಿ 5 ಸಾವಿರಕ್ಕೂ ಅಧಿಕ ಅಮೆರಿಕದ ಯೋಧರು ಇದ್ದಾರೆ. ಐಎಸ್‌ಐಎಸ್ ಉಗ್ರರ ವಿರುದ್ಧ ಹೋರಾಡಲು ಇರಾಕ್ ಸೈನಿಕರಿಗೆ ಅಮೆರಿಕದ ಪಡೆ ತರಬೇತಿಯನ್ನು ನೀಡುತ್ತಿದೆ.

English summary
Rocket fired and that hit the Baghdad green zone. Baghdad is the capital of Iraq and the second-largest city in the Arab world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X