ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ISIL ನಾಯಕ ಅಬು ಬಕರ್ ಅಲ್- ಬಗ್ದಾದಿ ಬೆಳೆದು ಬಂದ ಹಾದಿ

|
Google Oneindia Kannada News

ಅಮೆರಿಕ ಸೇನೆ ಕಾರ್ಯಾಚರಣೆ ವೇಳೆ ಶನಿವಾರ ರಾತ್ರಿ ಬಾಂಬ್ ಸ್ಫೋಟಿಸಿಕೊಂಡು ಮೃತಪಟ್ಟ ಅಬು ಬಕರ್ ಅಲ್- ಬಗ್ದಾದಿಯ ನಿಜವಾದ ಹೆಸರು ಇಬ್ರಾಹಿಂ ಅವಾದ್ ಇಬ್ರಾಹಿಂ ಅಲ್- ಬದ್ರಿ. ವಿಶ್ವದ ಮೋಸ್ಟ್ ವಾಂಟೆಡ್ ಆಗಿದ್ದ ಈತ ಸಂಘಟನಾ ಚತುರ ಮತ್ತು ರಣಭೂಮಿಯಲ್ಲಿ ಕ್ರೂರ ತಂತ್ರಗಳ ನಿಪುಣನಾಗಿದ್ದ.

1971ರಲ್ಲಿ ಉತ್ತರ ಬಾಗ್ದಾದ್ ನ ಸಮಾರದ ಬಳಿ ಜನಿಸಿದ ಬಗ್ದಾದಿ, ಅಮೆರಿಕವು 2003ರಲ್ಲಿ ಬಾಗ್ದಾದ್ ಮೇಲೆ ದಾಳಿ ನಡೆಸಿದಾಗ ನಗರದ ಮಸೀದಿಯಲ್ಲಿ ಮೌಲ್ವಿ ಆಗಿದ್ದ ಎಂದು ವರದಿಯಾಗಿದೆ.

ಐಎಸ್ ಐಎಲ್ ನಾಯಕ ಅಲ್ ಬಗ್ದಾದಿ ಕೊನೆ ಕ್ಷಣಗಳು ಹೇಗಿದ್ದವು?ಐಎಸ್ ಐಎಲ್ ನಾಯಕ ಅಲ್ ಬಗ್ದಾದಿ ಕೊನೆ ಕ್ಷಣಗಳು ಹೇಗಿದ್ದವು?

ಕೆಲವರು ಅಭಿಪ್ರಾಯ ಪಡುವ ಪ್ರಕಾರ, ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಅಧಿಕಾರ ನಡೆಸುವ ವೇಳೆಗಾಗಲೇ ಅವನು ಜಿಹಾದಿ ಆಗಿಬಿಟ್ಟಿದ್ದ. ಮತ್ತೆ ಕೆಲವರು ಹೇಳುವಂತೆ, ಬುಕ್ಕಾ ಶಿಬಿರದಲ್ಲಿ ಆತನನ್ನು ಅಮೆರಿಕವು ಇರಿಸಿತ್ತು. ಅಲ್ಲಿ ಅಲ್ ಕೈದಾ ಉಗ್ರ ಸಂಘಟನೆ ಕೆಲ ಕಮ್ಯಾಂಡರ್ ಗಳು ಸಹ ಇದ್ದರು. ಆ ಸಮಯದಲ್ಲಿ ಬಗ್ದಾದಿ ಕಟ್ಟರ್ ಮೂಲಭೂತವಾದಿಯಾಗಿ ರೂಪುಗೊಂಡ.

Abu Bakr Al Bagdadi

ಇರಾಕ್ ನಲ್ಲಿ ಅಲ್ ಕೈದಾ ಸೇರಿದಂತೆ ಇತರ ಉಗ್ರ ಸಂಘಟನೆಗಳ ಒಟ್ಟಾರೆ ಗುಂಪುಗಳ ಪಾಲಿಗೆ 2010ರಲ್ಲಿ ಬಗ್ದಾದಿ ನಾಯಕನಾದ. 2014ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಇರಾಕ್ ನ ಮೊಸುಲ್ ಅನ್ನು ವಶಪಡಿಸಿಕೊಂಡಾಗ ತುಂಬ ಮುಖ್ಯ ಸ್ಥಾನ ಗಳಿಸಿದ ಆತನನ್ನು 'ಖಲೀಫ' ಎಂದು ಘೋಷಿಸಿಕೊಂಡ. ಆಗ ಮಾತ್ರ ಬಗ್ದಾದಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ. ಆ ನಂತರ ಈ ವರ್ಷದ ಶುರುವಿನಲ್ಲಿ ಐಎಸ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಕಾಣಿಸಿಕೊಂಡ.

ಅಬು ಬಕರ್ ಅಲ್- ಬಗ್ದಾದಿ ಕಾರ್ಯಾಚರಣೆ ನಡೆದಿದ್ದು ಹೇಗೆ?ಅಬು ಬಕರ್ ಅಲ್- ಬಗ್ದಾದಿ ಕಾರ್ಯಾಚರಣೆ ನಡೆದಿದ್ದು ಹೇಗೆ?

ಅಕ್ಟೋಬರ್ 2011ರಲ್ಲಿ ಅಮೆರಿಕವು ಅಧಿಕೃತವಾಗಿ ಬಗ್ದಾದಿಯನ್ನು 'ಭಯೋತ್ಪಾದಕ' ಎಂದು ಘೋಷಿಸಿ, ಆತನ ಇರುವಿಕೆಯ ಮಾಹಿತಿ ನೀಡುವವರಿಗೆ 1 ಕೋಟಿ ಅಮೆರಿಕನ್ ಡಾಲರ್ ಬಹುಮಾನ ನೀಡುವುದಾಗಿ ಪ್ರಚಾರ ಮಾಡಿತು. 2017ನೇ ಇಸವಿ ಹೊತ್ತಿಗೆ ಬಹುಮಾನದ ಮೊತ್ತವನ್ನು 2.5 ಕೋಟಿ ಅಮೆರಿಕನ್ ಡಾಲರ್ ಗೆ ಏರಿಸಿತು.

English summary
During U.S. special troop attack Abu Bakr Al- Bagdadi killed himself. Here is the rise and fall of ISIL chief Abu Bakr Al- Bagdadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X