ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಸಾವಿರ ಅಡಿ ಎತ್ತರದಲ್ಲಿ ಸಾಹಸ: ಮಹಿಳೆಯ ಹುಚ್ಚಾಟದ ವೈರಲ್ ವಿಡಿಯೋ

|
Google Oneindia Kannada News

ರಿಯೊ ಡಿ ಜನೈರೊ, ಫೆಬ್ರವರಿ 19: ಪ್ರವಾಸದ ವೇಳೆ ಜಲಪಾತ, ಕಡಿದಾದ ಪರ್ವತಗಳ ಬಳಿ ನಿಂತು ಸಾಹಸದ ಹುಚ್ಚಾಟದಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ಎತ್ತರ ಪ್ರದೇಶದ ಅಪಾಯಕಾರಿ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ವಿಡಿಯೋ ಮಾಡುವುದು ಮುಂತಾದ ಸಾಹಸಗಳನ್ನು ಮಾಡುತ್ತಿರುತ್ತಾರೆ. ಅಂತಹ ಎದೆ ನಡುಗಿಸುವ ಹುಚ್ಚಾಟದಿಂದ ಯುವತಿಯೊಬ್ಬಳು ಸುದ್ದಿಯಾಗಿದ್ದಾಳೆ.

3,000 ಅಡಿ ಎತ್ತರದ ಬಂಡೆಯ ತುದಿಯಲ್ಲಿ ಕುಳಿತ ಪ್ರವಾಸಿ ಯುವತಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತುಸು ಜಾರಿದರೂ ಮೃತದೇಹ ಕೂಡ ಸಿಗುವುದು ಅನುಮಾನ ಎಂಬಂತಹ ಅತ್ಯಂತ ಅಪಾಯಕಾರಿ ಜಾಗದಲ್ಲಿ ಅತಿರೇಕದ ವರ್ತನೆ ತೋರಿದ ಆಕೆಯ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಬ್ರೆಜಿಲ್‌ನ ರಿಯೋ ಡಿ ಜನೈರೋ ಸಮೀಪದ ಪೆಡ್ರಾ ಡ ಗವಿಯಾ ಪರ್ವತದ ಕಡಿದಾದ ತುದಿಯ ಮೇಲೆ ಮಹಿಳೆಯೊಬ್ಬರು ತಮ್ಮ ಎರಡೂವರೆ ಗಂಟೆ ಚಾರಣದ ಅಂತ್ಯವನ್ನು ಸಂಭ್ರಮಿಸಿದ್ದರು. ಆ ವಿಡಿಯೋ ಇನ್‌ಸ್ಟಾ ಗ್ರಾಂನಲ್ಲಿ ವೈರಲ್ ಆಗಿದೆ. ಮಹಿಳೆಯ ಹೆಸರು ಬಹಿರಂಗವಾಗಿಲ್ಲ.

ಪರ್ವತದ ತುದಿಯಿಂದ ಸಾವಿರಾರು ಅಡಿ ಕೆಳಗೆ ಇರುವ ನಗರದ ಭವ್ಯ ಸೊಬಗನ್ನು ಸವಿಯಲು ಆ ಮಹಿಳೆ ಅಂಚಿಗೆ ಸಾಗಿ ಎರಡೂ ಕೈಗಳನ್ನು ಎತ್ತಿ ತಮ್ಮ ಖುಷಿ ಹಂಚಿಕೊಂಡಿದ್ದರು.

ನಯನ ಮನೋಹರ ದೃಶ್ಯ

ನಯನ ಮನೋಹರ ದೃಶ್ಯ

ಮಹಿಳೆ ಕುಳಿತಿರುವ ಬಂಡೆಯ ಕೆಳಭಾಗದಲ್ಲಿ ಸ್ಫಟಿಕದಷ್ಟು ಶುಭ್ರವಾದ ಸಮುದ್ರ, ಬೆಳ್ಳನೆ ಹರಡಿಕೊಂಡಿರುವ ಬೀಚ್ ಸೌಂದರ್ಯ ವಿಡಿಯೋದಲ್ಲಿ ಮನಮೋಹಕವಾಗಿ ಕಾಣಿಸುತ್ತದೆ. ಆಕೆಯ ಮತ್ತೊಂದೆಡೆ ಎತ್ತರದ ಮರಗಳು ಚುಕ್ಕಿಗಳಂತೆ ಗೋಚರಿಸುತ್ತವೆ. ನೋಡಲು ಅದ್ಭುತವಾಗಿ ಕಂಡರೂ ಅತ್ಯಂತ ಅಪಾಯಕಾರಿಯಾದ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಲೈಕ್‌ಗಳು!

ಮಹಿಳೆಯ ಅಜಾಗರೂಕತೆ ಮತ್ತು ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ 1,14,000 ಲೈಕ್‌ಗಳನ್ನು ಪಡೆದುಕೊಂಡಿದೆ. ಆದರೆ ಹೆಚ್ಚಿನವರು ಆಕೆಯ ವರ್ತನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜೀವಕ್ಕೆ ಎರವಾಗುವಂತಹ ಈ ರೀತಿಯ ಸಾಹಸಗಳು ಉಳಿದವರಿಗೂ ಪ್ರಚೋದನೆ ನೀಡುತ್ತದೆ. ಅದರಿಂದ ಅವರು ಪ್ರಾಣವನ್ನೇ ಕಳೆದುಕೊಂಡರೆ ಏನು ಮಾಡುವುದು? ಎಂದು ಆಕೆಯ ವಿರುದ್ಧದ ಕಿಡಿಕಾರಿದ್ದಾರೆ.

ಮಹಿಳೆಯ ಹುಚ್ಚಾಟಕ್ಕೆ ಟೀಕೆ

ಮಹಿಳೆಯ ಹುಚ್ಚಾಟಕ್ಕೆ ಟೀಕೆ

ಮಹಿಳೆಯ ಸಾಹಸ ನೋಡಿ ಜೀವವೇ ಬಾಯಿಗೆ ಬಂದಂತಾಗಿದೆ. ಅಷ್ಟು ತುದಿಗೆ ಬಂದ ಆಕೆ ಅದು ಹೇಗೆ ವಾಪಸ್ ಬಂದಳು? ಒಂದು ಫೋಟೊ ಅಥವಾ ವಿಡಿಯೋಕ್ಕಾಗಿ ಪ್ರಾಣಕ್ಕೇ ಸಂಚಕಾರ ತರುವಂತಹ ಕೆಲಸ ಮಾಡಬೇಕೇ? ಆಕೆ ಬಹುಶಃ ಸಾಯಲು ದೃಢವಾಗಿ ನಿರ್ಧರಿಸಿರಬೇಕು, ಇಲ್ಲವೇ ಹುಚ್ಚು ಹಿಡಿದಿರಬೇಕು ಎಂದು ಟೀಕಿಸಿದ್ದಾರೆ.

ಸೆಲ್ಫಿ ಹುಚ್ಚಾಟದಿಂದ ಸಾವು

ಸೆಲ್ಫಿ ಹುಚ್ಚಾಟದಿಂದ ಸಾವು

ರಿಯೋ ಡಿ ಜನೈರೋದ ಈ ಕಡಿದಾದ ಬಂಡೆಯಲ್ಲಿ ಜನರು ಪ್ರಾಣವನ್ನು ಪಣವಾಗಿಟ್ಟು ಫೋಟೊ ತೆಗೆಸಿಕೊಳ್ಳುವುದು ಹೊಸದೇನಲ್ಲ. ಬಂಡೆಯ ಅಂಚಿನಿಂದ ಅತ್ಯಾಕರ್ಷಕವಾಗಿ ಕಾಣುವ ನಗರವನ್ನು ವೀಕ್ಷಿಸಲು ಅದರ ತುದಿಗೆ ಹೋಗುತ್ತಾರೆ. ಈ ರೀತಿ ಸಾವಿರಾರು ಜನರು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

2011-2017ರ ಅವಧಿಯಲ್ಲಿ ಜಗತ್ತಿನಾದ್ಯಂತ ಈ ರೀತಿ ಅಪಾಯಕಾರಿ ಜಾಗಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ 259 ಮಂದಿ ಮೃತಪಟ್ಟಿದ್ದಾರೆ.

English summary
A video of a woman posing sitting of the edge on the 2,800 ft mountain in Rio De Janeiro goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X