ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ಆಗಸ್ಟ್‌ನಲ್ಲೇ ಕೊರೊನಾ ಸೋಂಕು: ಹಾಸ್ಯಾಸ್ಪದ ಎಂದ ಚೀನಾ

|
Google Oneindia Kannada News

ಲಂಡನ್, ಜೂನ್ 9: ಚೀನಾದ ವುಹಾನ್‌ನಲ್ಲಿ 2019ರ ಆಗಸ್ಟ್ ಆರಂಭದಲ್ಲೇ ಕೊರೊನಾ ವೈರಸ್ ಹರಡಲು ಆರಂಭವಾಗಿತ್ತು ಎಂಬ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ರಿಸರ್ಚ್ ನೀಡಿದ್ದ ವರದಿಯನ್ನು ಚೀನಾ ತಳ್ಳಿ ಹಾಕಿದೆ.

Recommended Video

Celebrities we lost during the Lockdown | Oneindia Kannada

ಈ ವರದಿ ಒಂದು ಹಾಸ್ಯಾಸ್ಪದ ಎಂದು ಹೇಳಿದೆ. ಸಂಶೋಧನೆಯಲ್ಲಿ ವುಹಾನ್ ನಗರದ ಆಸ್ಪತ್ರೆ ಪಾರ್ಕಿಂಗ್ ಪ್ರದೇಶದ ಸ್ಯಾಟಲೈಟ್ ಚಿತ್ರವನ್ನು ಬಳಸಿಕೊಳ್ಳಲಾಗಿತ್ತು.

ಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರ

ಆ ಸಂದರ್ಭದಲ್ಲಿ ಕಫ, ಶೀತದಿಂದಾಗಿ ಸಾಕಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನುವ ಮಾಹಿತಿಯೂ ಕೂಡ ಲಭ್ಯವಾಗಿದೆ. ಆದರೆ ಚೀನಾ ಮಾತ್ರ 2019ರ ಡಿಸೆಂಬರ್‌ನಲ್ಲಿ ವುಹಾನ್ ನಗರದಿಂದ ಕೊರೊನಾ ವೈರಸ್ ಹರಡಿತ್ತು ಎಂದು ಹೇಳಿದೆ.

Ridiculous China On Harvard Research Suggesting Virus Spread In August

ಆಗಸ್ಟ್‌ನಿಂದಲೇ ಚೀನಾದ ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶಗಳಲ್ಲಿ ನಿಲುಗಡೆಗೆ ಜಾಗವಿಲ್ಲದಷ್ಟು ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಅದೇ 2018ರ ಆಗಸ್ಟ್ ಸಂದರ್ಭದಲ್ಲಿ ಪರಿಸ್ಥಿತಿ ಹೀಗೆ ಇರಲಿಲ್ಲ, 2019ರಲ್ಲಿ ಅತಿಸಾರ, ಕೆಮ್ಮು, ಕಫ ಇರುವ ರೋಗಿಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿತ್ತು.

ಕೊರೊನಾ ವೈರಸ್‌ನಿಂ್ ವಿಶ್ವದಾದ್ಯಂತ 70 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ, 4 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಚಿನಾದ ವುಹಾನ್ ನಗರದ ಪ್ರಾಣಿಗಳ ಮಾರುಕಟ್ಟೆಯಿಂದಲೇ ವೈರಸ್ ಹರಡಿದೆ ಎನ್ನುವ ಆರೋಪವಿದೆ.

English summary
The coronavirus might have been spreading in China as early as August last year, according to Harvard Medical School research based on satellite images of hospital travel patterns and search engine data, but China dismissed the report as "ridiculous".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X