ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

136 ಅತ್ಯಾಚಾರವೆಸಗಿದ ಪಾಪಿಗೆ ಕೋರ್ಟ್ ಕೊಟ್ಟ ಶಿಕ್ಷೆ ಏನು?

|
Google Oneindia Kannada News

136 ಅತ್ಯಾಚಾರ, 48 ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ಸೇರಿ ಒಟ್ಟು 159 ಲೈಂಗಿಕ ಅಪರಾಧಗಳಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾದ ರೇನ್‌ಹಾರ್ಡ್ ಸಿನಗಾನಿಗೆ ಮ್ಯಾನ್‌ಚೆಸ್ಟರ್ ಕೋರ್ಟ್ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.

ಸಿನಗಾ(36) 190 ಜನರನ್ನು ಗುರಿಯಾಗಿಸಿಕೊಂಡಿದ್ದ. ಬ್ರಿಟಿಷ್ ಇತಿಹಾಸದಲ್ಲೇ ಈತ ಅತ್ಯಂತ ಕ್ರೂರಿ ಎನಿಸಿಕೊಂಡಿದ್ದಾನೆ. ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು ಕನಿಷ್ಠ 30 ವರ್ಷ ಜೈಲುವಾಸ ಅನುಭವಿಸಬೇಕಿದೆ.

ಸೋಮವಾರ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಲ್ಲಿ ನಡೆದ ಶಿಕ್ಷೆಯ ವಿಚಾರಣೆಯಲ್ಲಿ ಕೆಲವು ನಿರ್ಬಂಧಗಳನ್ನು ತೆಗೆದುಹಾಕಲಾಯಿತು.ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಯು ಈ ಹಿಂದೆ ಎರಡು ಅಪರಾಧಗಳಲ್ಲಿ ಶಿಕ್ಷೆಗೊಳಗಾಗಿದ್ದ.

Reynhard Sinaga Jailed For Life For 136 Rapes

ಈ ಇಂಡೋನೇಷ್ಯಾ ಪ್ರಜೆಯು ಒಟ್ಟು 48 ಪುರುಷರ ಮೇಲೆ ಲೈಂಗಿಕ ದೌರ್ಜನ್ಯ, 136 ಅತ್ಯಾಚಾರ, 14 ಲೈಂಗಿಕ ಪ್ರಕರಣಗಳಲ್ಲಿ ಆತ ತಪ್ಪಿತಸ್ಥನೆಂದು ಸಾಬೀತಾಗಿದೆ. ಆತ ಎಷ್ಟೋ ಜನರ ಜೀವನವನ್ನು ಕಸಿದುಕೊಂಡಿದ್ದಾನೆ.

ಆತ ಯಾವುದೇ ಕಾರಣಕ್ಕೂ ಜೈಲಿನಿಂದ ಹೊರಬರಬಾರದು ಎಂದು ಅತ್ಯಾಚಾರ ಸಂತ್ರಸ್ತರು ಪ್ರಾರ್ಥಿಸಿದ್ದಾರೆ.ಆತ 2017ರಲ್ಲಿ ಮೊದಲ ಬಾರಿಗೆ ಅತ್ಯಾಚಾರ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ, ಸಂತ್ರಸ್ತೆ ಪ್ರಜ್ಞೆ ಬಂದ ಬಳಿಕ ಆತನ ವಿರುದ್ಧ ದೂರು ನೀಡಿದ್ದಳು.

English summary
A man convicted of 159 sex offences, including 136 rapes, will "never be safe to be released",
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X