ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಹಿನೂರು ವಜ್ರ ಮೋದಿ ಕೈಗೆ ಕೊಟ್ಟು ಬಿಡಿ: ಯುಕೆ ಸಂಸದ

By Mahesh
|
Google Oneindia Kannada News

ಲಂಡನ್, ಜುಲೈ 29:ಐತಿಹಾಸಿಕ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸುವಂತೆ ಭಾರತೀಯ ಮೂಲದ ಬ್ರಿಟಿಷ್ ಸಂಸದ ಕೀತ್ ವಾಜ್ ಆಗ್ರಹಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ ತಿಂಗಳಿನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಅವರ ಕೈಗೆ ವಜ್ರವನ್ನು ಒಪ್ಪಿಸಿಬಿಡಿ ಎಂದಿದ್ದಾರೆ.

ಆಕ್ಸ್‌ಫರ್ಡ್ ಯೂನಿಯನ್‌ನಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಭಾಷಣ ಮಾಡಿ, ಸುಮಾರು 200 ವರ್ಷಗಳ ಅವಧಿಯ ವಸಾಹತು ಆಡಳಿತದ ಅವಧಿಯಲ್ಲಿ ಆಗಿರುವ ನಷ್ಟಗಳಿಗೆ ಬ್ರಿಟನ್ ಪರಿಹಾರ ನೀಡುವಂತೆ ಕರೆ ನೀಡಿದ್ದರು. [ಭಾರತ-ಪಾಕ್ ಮಧ್ಯೆ ಗಡಿ ರೇಖೆ ಎಳೆದವರು ಯಾರು?]

ಈ ಭಾಷಣವನ್ನು ಪ್ರಧಾನಿ ಮೋದಿ ಅವರು ಕೂಡಾ ಮೆಚ್ಚಿದ್ದರು. ಈಗ ತರೂರ್ ಅವರ ಭಾಷಣದ ನಂತರ ಯುಕೆ ಸಂಸದ ಈ ರೀತಿ ಕರೆ ನೀಡಿದ್ದಾರೆ. [ಚುನಾವಣೆ ಗೆದ್ದ ರಿಷಿ, ಮಾವ ಇನ್ಫಿ ಮೂರ್ತಿ ಖುಷ್!]

Return Kohinoor to India, says UK MP Keith Vaz

ತರೂರ್‌ರ ಭಾಷಣವನ್ನು ನಾನು ಕೇಳಿದ್ದೇನೆ. ನಿಜವಾದ ಕುಂದುಕೊರತೆಗಳಿಗೆ ಪರಿಹಾರ ನೀಡಬೇಕೆಂಬುದು ನನ್ನ ಅಭಿಪ್ರಾಯವೂ ಆಗಿದೆ. ಆರ್ಥಿಕ ಪರಿಹಾರ ನೀಡುವುದು ಸಂಕೀರ್ಣ ಹಾಗೂ ಸಮಯ ತೆಗೆದುಕೊಳ್ಳುತ್ತದೆ. [ಬ್ರಿಟಿಷರ ಆಡಳಿತ ವೈಖರಿ ಕಂಡು ಬೆರಗಾದ ಪ್ರಜ್ವಲ್ ರೇವಣ್ಣ]

ಆದರೆ, ಕೊಹಿನೂರ್ ವಜ್ರದಂಥ ಭಾರತದ ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸದಿದ್ದಲ್ಲಿ ಅದಕ್ಕೆ ಕ್ಷಮೆಯಿಲ್ಲ ಎಂದು ಕೀತ್ ವಾಝ್ ಹೇಳಿದ್ದಾರೆ.

ಮಧ್ಯಯುಗದ ಕಾಲದಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಲ್ಲಿ ದೊರೆತಿದ್ದ ಕೊಹಿನೂರ್ ವಜ್ರವು ಜಗತ್ತಿನ ಅತಿ ದೊಡ್ಡ ವಜ್ರ ಎಂದು ಪರಿಗಣಿಸಲಾಗಿತ್ತು. ದಾಳಿಕೋರರ ಪಾಲಾದ ಇದು ಬ್ರಿಟಿಷ್ ಆಡಳಿತ ಕಾಲದಲ್ಲಿ ಲಂಡನ್ ಸೇರಿ, ಸದ್ಯ ಅದು ರಾಣಿ ಎರಡನೇ ಎಲಿಝಬೆತ್ ಕಿರೀಟದಲ್ಲಿದೆ. [ನೇತಾಜಿ, ನೆಹರೂ ನಂಬಿಕಸ್ತ ನಂಬಿಯಾರ್ 'ಸ್ಪೈ']

ಕಾಕಾತೀಯ ಅರಸರ ಆರಾಧ್ಯ ದೇವತೆಯ ಕಣ್ಣಿನಂತೆ ಈ ಕೊಹಿನೂರು ವಜ್ರವನ್ನು ಭಕ್ತದಿಂದ ಕಾಣಲಾಗುತ್ತಿತ್ತು. ಬ್ರಿಟಿಷರು ವಜ್ರವನ್ನು ತೆಗೆದುಕೊಂಡು ಹೋದ ಮೇಲೆ ಮತ್ತೆ ಹಿಂತಿರುಗಿಸುವ ಪ್ರಯತ್ನ ಎಂದಿಗೂ ಮಾಡಿಲ್ಲ. ಈಗ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದ್ದು, ಬ್ರಿಟಿಷ್ ಪ್ರಧಾನಿ ಜೇಮ್ಸ್ ಕ್ಯಾಮರೂನ್ ಏನು ಪ್ರತಿಕ್ರಿಯೆ ನೀಡುತ್ತಾರೆ ಕಾದು ನೋಡಬೇಕಿದೆ. (ಪಿಟಿಐ)

English summary
British Indian MP Keith Vaz called for the world-famous 'Kohinoor' diamond to be returned to India during Prime Minister Narendra Modi's UK visit in November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X