ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ನಿಮಿಷದಲ್ಲೇ ಕೊರೊನಾ ಪರೀಕ್ಷೆ; ಅಮೆರಿಕದಲ್ಲಿ ಹೀಗೊಂದು ಪ್ರಯೋಗ...

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 09: ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ಸೋಂಕಿನ ನಿವಾರಣೆಗೆ ಎಲ್ಲೆಡೆ ಲಸಿಕೆ, ಔಷಧಿಯ ಪ್ರಯೋಗಗಳು ನಡೆಯುತ್ತಿವೆ. ಕೊರೊನಾ ಸೋಂಕನ್ನು ಪತ್ತೆ ಹಚ್ಚಬಲ್ಲ ಸುಲಭ ಸಾಧನಗಳ ಕುರಿತೂ ಸಂಶೋಧನೆಗಳು ನಡೆಯುತ್ತಿವೆ. ಈ ಪೈಕಿ ಅಮೆರಿಕದಲ್ಲೂ ಸಂಶೋಧನೆಯೊಂದು ನಡೆದಿದೆ.

ಭಾರತೀಯ ವಿಜ್ಞಾನಿ ನೇತೃತ್ವದ ತಂಡವೊಂದು ಕೇವಲ ಐದು ನಿಮಿಷದಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸಬಲ್ಲ ಸೆನ್ಸರ್ ಅನ್ನು ಅನ್ವೇಷಿಸಿದೆ. ಪೇಪರ್ ಅವಲಂಬಿತ ಎಲೆಕ್ಟ್ರೋ ಕೆಮಿಕಲ್ ಸೆನ್ಸರ್ ಇದಾಗಿದ್ದು, ಕೆಲವೇ ಕೆಲವು ನಿಮಿಷಗಳಲ್ಲಿ ನಿಮ್ಮಲ್ಲಿ ಕೊರೊನಾ ವೈರಸ್ ಇದೆಯೇ ಇಲ್ಲವೇ ಎಂಬುದನ್ನು ಕಂಡುಕೊಳ್ಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಕೊರೊನಾವೈರಸ್ ಹುಟ್ಟು ಅಧ್ಯಯನ ವುಹಾನ್‌ನಿಂದ ಆರಂಭ: WHOಕೊರೊನಾವೈರಸ್ ಹುಟ್ಟು ಅಧ್ಯಯನ ವುಹಾನ್‌ನಿಂದ ಆರಂಭ: WHO

ಅಮೆರಿಕದ ಇಲ್ಲಿನಾಯ್ಸ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಗ್ರಾಫೈನ್ ಆಧಾರಿತ ಬಯೋಸೆನ್ಸರ್ ಅಭಿವೃದ್ಧಿಪಡಿಸಿದ್ದು, ಇದರ ಮೂಲಕ sarc ಅಥವಾ ಕೊರೊನಾ ವೈರಸ್ ಪತ್ತೆ ಹಚ್ಚಬಹುದಾಗಿದೆ. ಎಸಿಎಸ್ ನ್ಯಾನೋ ನಿಯತಕಾಲಿಕೆಯಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಲಾಗಿದೆ. ಈ ಸೆನ್ಸರ್ ಕುರಿತು ಸಂಶೋಧಕರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

Research Of Paper Based Sensor Test To Detect Coronavirus

ಸಂಶೋಧಕ ಪ್ರೊ.ದೀಪಾಂಜನ್ ಸೆನ್ಸರ್ ರೂಪಿಸಲು ಫಿಲ್ಟರ್ ಪೇಪರ್ ಆಯ್ಕೆ ಮಾಡಿಕೊಂಡು ಅದಕ್ಕೆ ಗ್ರಾಫೈನ್ ನ್ಯಾನೋ ಪ್ಲೇಟ್ ಲೆಟ್ ಗಳ ಪದರವನ್ನು ಬಳಸಿದ್ದಾರೆ. ಚಿನ್ನದ ಎಲೆಕ್ಟ್ರೋಡ್ ಗಳನ್ನು ನಿರ್ದಿಷ್ಟವಾಗಿ ವಿನ್ಯಾಸ ಮಾಡಿ ಗ್ರಾಫೈನ್ ನ ಪದರದ ಮೇಲೆ ಬಳಸಿರುವುದು ವಿದ್ಯುತ್ ವಾಹಕಗಳಿಗೆ ನೆರವಾಗಲಿವೆ. ಗ್ರಾಫೈನ್ ಅತಿ ತೀಕ್ಷ್ಣ ವಾಹಕವಾಗಿದ್ದು, ವಿದ್ಯುತ್ ಸಂಕೇತಗಳಲ್ಲಿ ಬದಲಾವಣೆಯನ್ನು ನಿರ್ದಿಷ್ಟವಾಗಿ ಗುರುತಿಸಬಲ್ಲದಾಗಿದೆ.

ಸದ್ಯದಲ್ಲಿ ನಡೆಯುತ್ತಿರುವ ಆರ್ ಎನ್ ಎ ಅವಲಂಬಿತ ಕೊರೊನಾ ಪರೀಕ್ಷೆಯು ಎನ್ ಜೀನ್ (ನ್ಯೂಕ್ಲಿಯೋಕ್ಯಾಪ್ಸಿಡ್ ಫಾಸ್ಪೊಪ್ರೋಟೀನ್) sars ಹಾಗೂ ಕೊರೊನಾ ವೈರಸ್ ಪತ್ತೆ ಹಚ್ಚುತ್ತಿದ್ದು, ಆ ಮಾದರಿಯಲ್ಲಿ ಈ ಸೆನ್ಸರ್ ಕೂಡ ಕಾರ್ಯನಿರ್ವಹಿಸಲಿದೆ. ಈ ಸೆನ್ಸರ್ ನ ಕಾರ್ಯವೈಖರಿಯನ್ನು ಕೊರೊನಾ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಮಾದರಿಗಳನ್ನಿಟ್ಟುಕೊಂಡು ತಾಳೆ ಹಾಕಲಾಗಿದೆ.

Recommended Video

ಮಂಡ್ಯ: ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಜನಸಂಪರ್ಕ ಸಭೆ | Oneindia Kannada

ಸೆನ್ಸರ್ ಕೇವಲ ಐದೇ ನಿಮಿಷದ ಒಳಗೆ ಪಾಸಿಟಿವ್ ಇರುವ ಮಾದರಿಯನ್ನು ಪತ್ತೆಹಚ್ಚಿ, ವೈರಸ್ ಇರುವ ಸಂಕೇತವನ್ನು ಸೂಚಿಸಿದೆ. ಸೆನ್ಸರ್ ಅನ್ನು ಮೈಕ್ರೋ ಕಂಟ್ರೋಲರ್, ಎಲ್ ಇಡಿ ಸ್ಕ್ರೀನ್ ಅಥವಾ ಸ್ಮಾರ್ಟ್ ಫೋನ್ ಗಳಿಗೆ ಸಂಪರ್ಕಿಸಿ ಇನ್ನೂ ಇತರೆ ವೈರಸ್ ಗಳು ಇರುವುದನ್ನೂ ಪತ್ತೆ ಹಚ್ಚಬಹುದಾಗಿದೆ. ಈ ನಿಟ್ಟಿನಲ್ಲಿ ಸಾಧನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

English summary
The researchers from the University of Illinois in the US created a paper and graphene based electrochemical biosensor to detect coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X