ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಯುದ್ಧ ವಿಮಾನ ತೈವಾನ್‌ನಲ್ಲಿ ಫಿನಿಶ್..!?

|
Google Oneindia Kannada News

ತೈವಾನ್‌ನಲ್ಲಿ ಚೀನಾಗೆ ಸೇರಿದ ಸುಖೋಯ್ ಸರಣಿಯ ಯುದ್ಧವಿಮಾನ ಧಗಧಗನೆ ಹೊತ್ತಿ ಉರಿದಿದೆ. ಆದರೆ ಚೀನಾದ ಯುದ್ಧವಿಮಾನ ನೆಲಕ್ಕುರುಳಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕೆಲವೇ ಗಂಟೆಗಳ ಹಿಂದೆ ಈ ಘಟನೆ ನಡೆದಿದ್ದು, ಉಭಯ ದೇಶಗಳ ಜಲಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಸುಖೋಯ್ ಸರಣಿ ಯುದ್ಧವಿಮಾನ ರಷ್ಯಾದಲ್ಲಿ ತಯಾರಾಗುತ್ತದೆ. ಚೀನಾ 1991ರಲ್ಲಿ ಮೊದಲ ಬಾರಿಗೆ ರಷ್ಯಾದಿಂದ ಸುಖೋಯ್ ಯುದ್ಧವಿಮಾನ ಖರೀದಿ ಮಾಡಿತ್ತು. ಈಗಲೂ ಚೀನಾದ ವಾಯುಪಡೆಯಲ್ಲಿ ಸುಖೋಯ್ ಫೈಟರ್ ಜೆಟ್‌ಗಳಿಗೆ ವಿಶೇಷ ಸ್ಥಾನಮಾನವಿದೆ.

Recommended Video

ಚೀನಾ ಯುದ್ಧ ವಿಮಾನವನ್ನು ಉಡಾಯಿಸಿದ ತಕ್ಕ ಪಾಠ ಕಲಿಸಿಲಿದ ಅತೀ ಚಿಕ್ಕ ದೇಶ | Oneindia Kannada

ಇದೀಗ ತೈವಾನ್‌ನಲ್ಲಿ ಚೀನಾದ ಸುಖೋಯ್ ಜೆಟ್ ನೆಲಕ್ಕೆ ಅಪ್ಪಳಿಸಲು ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ. ಆದರೆ ತೈವಾನ್ ಮಿಲಿಟರಿ ವಿಮಾನ ಹೊಡೆದುರುಳಿಸಿದೆ ಎನ್ನಲಾಗುತ್ತಿದೆ. ಇದಕ್ಕೆ ಬಲವಾದ ಕಾರಣವೂ ಇದೆ. ಹಲವು ದಶಕಗಳಿಂದ ತೈವಾನ್‌ ಮೇಲೆ ಹಕ್ಕು ಸಾಧಿಸಲು ಚೀನಾ ಯತ್ನಿಸುತ್ತಿದೆ. ಅದರಲ್ಲೂ ಕೆಲ ತಿಂಗಳಿಂದ ಎರಡೂ ರಾಷ್ಟ್ರಗಳ ಮಧ್ಯೆ ವೈಮಸ್ಸು ಎಲ್ಲೆ ಮೀರಿದ್ದು, ಪದೇ ಪದೆ ಯುದ್ಧದ ಮಾತುಗಳು ಕೇಳಿಬರುತ್ತಿವೆ. ಇಂತಹ ಸನ್ನಿವೇಶದಲ್ಲೇ ಚೀನಾದ ಯುದ್ಧವಿಮಾನ ತೈವಾನ್‌ನಲ್ಲಿ ಫಿನಿಶ್ ಆಗಿದೆ.

Reportedly Chinese Fighter Jet Crashed In Taiwan

ಚೀನಾ ವಿರುದ್ಧ ತೈವಾನ್ ಅಸ್ತ್ರ ಪ್ರಯೋಗಿಸಿದ ಅಮೆರಿಕ..! ಚೀನಾ ವಿರುದ್ಧ ತೈವಾನ್ ಅಸ್ತ್ರ ಪ್ರಯೋಗಿಸಿದ ಅಮೆರಿಕ..!

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಕೆಲ ತಿಂಗಳ ಹಿಂದೆ ಚೀನಾ ಪದೇ ಪದೆ ತೈವಾನ್ ವಿಚಾರ ಕೆದಕುವಾಗಲೇ, ತೈವಾನ್ ಮಿಲಿಟರಿ ದಿಟ್ಟತನ ಪ್ರದರ್ಶಿಸಿತ್ತು. ಚೀನಾ ಕಡೆಗೆ ಮುಖ ಮಾಡಿರುವ ತೈಚುಂಗ್‌ನ ದ್ವೀಪವೊಂದರ ಕಡಲ ತೀರದ ಬಳಿ ತೈವಾನ್‌ ಸೇನೆ ಸಮರಾಭ್ಯಾಸ ನಡೆಸಿತ್ತು. ಸಮರಾಭ್ಯಾಸದ ವೇಳೆ ತೈವಾನ್‌ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಸ್ ಸಮುದ್ರಕ್ಕೆ ಕ್ಷಿಪಣಿ ಹಾಗೂ ಬಾಂಬ್‌ಗಳನ್ನು ಉಡಾಯಿಸುವ ಮೂಲಕ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಇದು ತೈವಾನ್ ಸೇನೆ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಸಮರಾಭ್ಯಾಸದ ಬಗ್ಗೆ ಹೇಳಿಕೆ ನೀಡಿದ್ದ ತೈವಾನ್‌ ಅಧ್ಯಕ್ಷ ತ್ಸೈ ಇಂಗ್-ವೆನ್, ನಾವು ನಮ್ಮ ದೇಶವನ್ನು ರಕ್ಷಿಸುವಲ್ಲಿ ಸಮರ್ಥರಾಗಿದ್ದೇವೆ ಎಂದಿದ್ದರು. ಚೀನಾ ನಮ್ಮನ್ನು ಏನೂ ಮಾಡೋಕೆ ಆಗಲ್ಲ ಅಂತಾ ಪರೋಕ್ಷವಾಗಿ ಸಂದೇಶ ಕೊಟ್ಟಿದ್ದರು. ಇದರ ಬೆನ್ನಲ್ಲೇ ಚೀನಾದ ಫೈಟರ್ ಜೆಟ್ ತೈವಾನ್‌ನಲ್ಲಿ ಮಕಾಡೆ ಮಲಗಿದೆ.

ಚೀನಾಗೆ ಬೆನ್ನಿಗೆ ಗುನ್ನಾ ಇಡಲು ಹೊರಟ ಅಮೆರಿಕ..!ಚೀನಾಗೆ ಬೆನ್ನಿಗೆ ಗುನ್ನಾ ಇಡಲು ಹೊರಟ ಅಮೆರಿಕ..!

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ. 160 ಕಿ.ಮೀ. ಭೂಪ್ರದೇಶ ಹೊಂದಿರುವ ತೈವಾನ್‌ ಗಂಡೆದೆ ಮೆಚ್ಚಲೇಬೇಕು. ತನ್ನದೇ ಸರ್ಕಾರ ಹೊಂದಿರುವ ತೈವಾನ್‌ನಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. ಕೆಲ ದಶಕಗಳ ಹಿಂದೆ ರಾಜಕೀಯವಾಗಿ ತೈವಾನ್‌ನಲ್ಲಿ ಸ್ಥಿರತೆ ಇರಲಿಲ್ಲ. 2 ದಶಕಗಳಿಂದ ಈಚೆಗೆ, ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದೆ. ಇದೇ ಕಾರಣಕ್ಕೆ ಕಮ್ಯುನಿಸ್ಟ್ ಚೀನಾ ತನ್ನ ಪಕ್ಕದಲ್ಲೇ ಪ್ರಜಾಪ್ರಭುತ್ವ ರಾಷ್ಟ್ರವಾಗಿ ತೈವಾನ್ ಬೆಳೆಯುತ್ತಿರುವುದನ್ನು ಸಹಿಸುತ್ತಿಲ್ಲ. ಹೀಗಾಗಿ ತೈವಾನ್ ಭೂಭಾಗ ತನ್ನದು ಅಂತಾ ಚೀನಾ ಕತೆ ಹೇಳುತ್ತಾ ಕುಳಿತಿದೆ. ಆದರೆ ಚೀನಾ ಹೇಳಿಕೆಗಳಿಗೆ ಪುಟಾಣಿ ರಾಷ್ಟ್ರ ತೈವಾನ್ ಸರಿಯಾಗೇ ತಿರುಗೇಟು ನೀಡುತ್ತಾ ಬಂದಿದೆ. ಇತಿಹಾಸ ಗಮನಿಸಿದರೆ ಈಗ ಚೀನಿ ಯುದ್ಧ ವಿಮಾನ ಮಕಾಡೆ ಮಲಗಲು ತೈವಾನ್ ಕಾರಣವಾಗಿರಬಹುದು. ಆದರೆ ಯಾವುದೂ ಇನ್ನು ಅಧಿಕೃತವಾಗಿಲ್ಲ.

English summary
Chinese Sukhoi fighter plane has reportedly crashed in Taiwan. The fighter jet seems to have crashed in an open area near a rural residential area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X