ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ದಿವಾಳಿಯಾದ ಖಾಸಗಿ ಬ್ಯಾಂಕ್‌ಗಳು

|
Google Oneindia Kannada News

ಕಾಬೂಲ್, ಡಿಸೆಂಬರ್ 07: ತಾಲಿಬಾನ್ ಆಡಳಿತ ಶುರುವಾದಾಗಿನಿಂದ ಅಫ್ಘಾನಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ.

ಕೆಲವೇ ತಿಂಗಳುಗಳ ಅಂತರದಲ್ಲಿ ಆಫ್ಘಾನಿಸ್ತಾನದ ಎಲ್ಲ ಖಾಸಗಿ ಬ್ಯಾಂಕ್ ಗಳು ದಿವಾಳಿಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಆಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು ಮಾಹಿತಿ ನೀಡಿದ್ದು, ಆಫ್ಘಾನಿಸ್ತಾನದಲ್ಲಿರುವ ಎಲ್ಲ ಖಾಸಗಿ ಬ್ಯಾಂಕ್ ಗಳು ದಿವಾಳಿಯಾಗಿವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ದೇಶದ ಎಲ್ಲಾ ಖಾಸಗಿ ಬ್ಯಾಂಕ್‌ಗಳು ಈಗ ದಿವಾಳಿಯಾಗಿವೆ. AIB ಅನ್ನು ಹೊರತುಪಡಿಸಿ ಎಲ್ಲ ಬ್ಯಾಂಕ್ ಗಳು ದಿವಾಳಿಯಾಗಿದ್ದು, ಮಾನವೀಯ ನಿಧಿಗಳ ವರ್ಗಾವಣೆಗೆ ಈ ಹಣವನ್ನು ಬಳಸಬಹುದು ಎಂದು ಹೇಳಿದ್ದಾರೆ.

Report Shows All Private Banks In Afghanistan Bankrupt

ಇದೇ ವೇಳೆ ಪಾಕಿಸ್ತಾನದ ವಿರುದ್ಧವೂ ಹರಿಹಾಯ್ದಿರುವ ಸಲೇಹ್, ಪಾಕಿಸ್ತಾನ ತನ್ನ ತದ್ರೂಪು ಆಡಳಿತ ಸಹವರ್ತಿಗೆ ಹಣವನ್ನು ಚುಚ್ಚಬೇಕು ಎಂದು ಕಿಡಿಕಾರಿದ್ದಾರೆ.

ಹಾಗೆಯೇ ಈ ಹಿಂದೆ ತಾಲಿಬಾನ್ ನ 'ತಾಲಿಬ್ ಜುಂಟಾ' ಮೌನವಾಗಿ ಎಲ್ಲಾ ಖಾಸಗಿ ಬ್ಯಾಂಕ್‌ಗಳ ಮೇಲೆ ಹಿಡಿತ ಸಾಧಿಸಿತ್ತು. ಬಳಿಕ ಆ ಖಾಸಗಿ ಬ್ಯಾಂಕ್ ಗಳ ಮಾಲೀಕರು ಮತ್ತು CEO ಗಳು ಅಪಹರಣಕ್ಕೀಡಾಗಿ, ಚಿತ್ರಹಿಂಸೆಗೆ ಹೆದರಿ ದೇಶದಿಂದ ಓಟಕಿತ್ತಿದ್ದಾರೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದ ಆರ್ಥಿಕತೆ ಬಹುತೇಕ ಪತನದತ್ತ ಸಾಗಿದೆ. ಹಳ್ಳಿಗಾಡುಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೇ ಇಲ್ಲದಂತಾಗಿದೆ. ನೂರಾರು ಮೈಲಿ ದೂರಕ್ಕೆ ಒಂದರಂತೆ ಇರುವ ಬ್ಯಾಂಕ್​ನಲ್ಲಿ ಸಿಕ್ಕಾಪಟ್ಟೆ ಜನಜಂಗುಳಿ. ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದು, ನಿರ್ದಿಷ್ಟ ಅವಧಿಗೆ ಚಿಕಿತ್ಸೆ ಪಡೆಯುತ್ತಿರುವವರ ಪಾಡಂತೂ ಶತ್ರುಗಳಿಗೂ ಬೇಡ ಎಂಬಂತಾಗಿದೆ. ಏಕೆಂದರೆ, ಹೀಗೆ ನೂರಾರು ಮೈಲಿ ಆಚೆಗೆ ಒಂದರಂತೆ ಇರುವ ಬ್ಯಾಂಕ್​ಗಳಲ್ಲಿ ಕೂಡ ಎಲ್ಲ ಗ್ರಾಹಕರಿಗೂ ನಗದು ಸಿಗುತ್ತಾ ಇಲ್ಲ.

ಹಿಂದಿನ ಸರ್ಕಾರದ ಅವಧಿಯಲ್ಲಿ ಇದ್ದ ಮಿಲಿಯನ್​ಗಟ್ಟಲೆ ಡಾಲರ್ ಅನುದಾನ ಮಾಯವಾಗಿದೆ. ಸರ್ಕಾರಕ್ಕೆ ಸೇರಿದ ಬಿಲಿಯನ್​ಗಟ್ಟಲೆ ಡಾಲರ್ ಆಸ್ತಿಗೆ ತಡೆ ಬಿದ್ದಿದೆ. ಇನ್ನು ಆರ್ಥಿಕ ನಿರ್ಬಂಧದ ಕಾರಣಕ್ಕೆ ಹಾಗತಿಕ ಮಟ್ಟದ ಬ್ಯಾಂಕಿಂಗ್​ ವ್ಯವಸ್ಥೆಯ ನೆರವು ಈಗಿನ ಸರ್ಕಾರಕ್ಕೆ ಸಿಗುತ್ತಿಲ್ಲ.

ಬ್ಯಾಂಕ್​, ಉದ್ಯಮಗಳಿಗೆ ಹಣಕಾಸಿನ ಕೊರತೆ ಎದುರಾಗಿದ್ದು, ಆಹಾರ ಮತ್ತು ತೈಲ ಬೆಲೆಗಳು ತಾರಾಮಾರಾ ಏರಿಕೆ ಆಗಿವೆ. ಈ ವರ್ಷದ ಅಂತ್ಯದ ಹೊತ್ತಿಗೆ ಅಫ್ಘಾನಿಸ್ತಾನದಲ್ಲಿ 32 ಲಕ್ಷ ಮಕ್ಕಳು ಗಂಭೀರ ಸ್ವರೂಪದ ಅಪೌಷ್ಟಿಕತೆಯಿಂದ ನರಳುವಂತಾಗಬಹುದು, ಆ ಪೈಕಿ 10 ಲಕ್ಷ ಮಕ್ಕಳು ತಾಪಮಾನ ಇಳಿಕೆಯಿಂದ ಸಾವಿಗೀಡಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಅಫ್ಘಾನಿಸ್ತಾನ ಮತ್ತು ನೆರೆಯ ದೇಶಗಳಲ್ಲಿ ಇರುವ ಆಫ್ಘನ್ ನಿರಾಶ್ರಿತರಿಗೆ 129 ಕೋಟಿ ಅಮೆರಿಕನ್ ಡಾಲರ್ ಒದಗಿಸುವುದಾಗಿ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟವು ಭರವಸೆ ನೀಡಿವೆ. ಈ ನೆರವಿನಿಂದ ತುಂಮ ದೊಡ್ಡ ಮಟ್ಟದ ಅನುಕೂಲ ಏನೂ ಆಗಲ್ಲ ಎನ್ನುತ್ತಾರೆ ಆರ್ಥಿಕತಜ್ಞರು ಮತ್ತು ಎನ್​ಜಿಒಗಳು.

ಒಂದು ವೇಳೆ ಇಲ್ಲಿನ ವ್ಯವಸ್ಥೆಯನ್ನು ಮುಂದಿನ ಕೆಲ ತಿಂಗಳಲ್ಲಿ ಕಳೆದುಕೊಂಡು ಬಿಟ್ಟರೆ, ದೇಶಕ್ಕೆ ಅಗತ್ಯ ಇರುವುದನ್ನು ಪೂರೈಕೆ ಮಾಡುವುದಕ್ಕೆ ಬೇಕಾದದ್ದನ್ನು ಪುನರ್​ನಿರ್ಮಿಸುವುದು ಕಷ್ಟ.

ಹಿಂತಿರುಗುವುದಕ್ಕೆ ಸಾಧ್ಯವಿಲ್ಲದ ಮಟ್ಟಿಗೆ ವೇಗವಾಗಿ ಕುಸಿತದತ್ತ ನಾವು ಸಾಗುತ್ತಿದ್ದೇವೆ. ಯಾವುದೇ ಮಾನವೀಯ ಬಿಕ್ಕಟ್ಟು ಮಾನವೀಯ ಬೆಂಬಲಿದಿಂದ ಮಾತ್ರ ನಿರ್ವಹಿಸುವುದಕ್ಕೆ ಸಾಧ್ಯ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಎಂಥ ಪರಿಸ್ಥಿತಿ ಅಂದರೆ, ಹತಾಶ ಕುಟುಂಬಗಳು ರಸ್ತೆ ಪಕ್ಕದಲ್ಲಿ ತಮ್ಮ ಮನೆಯ ಪೀಠೋಪಕರಣಗಳನ್ನು ಆಹಾರಕ್ಕೆ ಬದಲಿಯಾಗಿ ನೀಡುತ್ತಿದ್ದಾರೆ. ಇತರ ಪ್ರಮುಖ ನಗರಗಳಲ್ಲಿ ಸರ್ಕಾರದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತುರ್ತು ಔಷಧಗಳನ್ನು ಖರೀದಿ ಮಾಡುವುದಕ್ಕೆ ಹಣ ಇಲ್ಲ. ಅಷ್ಟೇ ಅಲ್ಲ, ವೈದ್ಯರು, ನರ್ಸ್​ಗಳಿಗೆ ಹಣ ಪಾವತಿಸುವುದಕ್ಕೂ ಆಗುತ್ತಿಲ್ಲ.

ವೈದ್ಯಕೀಯ ಸಿಬ್ಬಂದಿ ಪೈಕಿ ಕೆಲವರು ಈಗಾಗಲೇ ಕೆಲಸ ಬಿಟ್ಟಿದ್ದಾರೆ. ಆರ್ಥಿಕ ನಿರಾಶ್ರಿತರು ಇರಾನ್, ಪಾಕಿಸ್ತಾನದ ಗಡಿಯ ಕಡೆಗೆ ಸಾಗುತ್ತಕೇ ಇದ್ದಾರೆ. ಅಂತಾರಾಷ್ಟ್ರೀಯ ಸಮುದಾಯಗಳಿಗೆ ಅಫ್ಘಾನಿಸ್ತಾನದ ಜನರ ಬಗ್ಗೆ ಅಪಾರ ಕಾಳಜಿ ಇರುವುದು ಹೌದು. ಆದರೆ ಹಣವನ್ನು ತಾಲಿಬಾನ್​ಗಳ ಕೈಗೆ ಇಡುವುದು ಹೇಗೆ ಎಂಬುದು ಆತಂಕಕ್ಕೆ ಕಾರಣವಾಗಿದೆ.

English summary
Amrullah Saleh, acting president of Afghanistan tweets to say that all private banks in the country are now insolvent and bankrupt except AIB which may or will be used for transfer of humantarian funds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X