ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಸಿಲುಕಿರುವ 114 ಭಾರತೀಯರು ಜುಲೈ 9ರಂದು ವಾಪಸ್

|
Google Oneindia Kannada News

ಇಸ್ಲಾಮಬಾದ್, ಜುಲೈ 6: ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಪಾಕಿಸ್ತಾನದಲ್ಲಿ ಸಿಲುಕಿಕೊಂಡಿರುವ 114 ಜನ ಭಾರತೀಯರನ್ನು ಜುಲೈ 9 ರಂದು ಸ್ವದೇಶಕ್ಕೆ ಕಳುಹಿಸಿಕೊಡಲಾಗುವುದು ಎಂದು ಪಾಕ್ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.

Recommended Video

Kushal Mendis arrested ಶ್ರೀಲಂಕಾ ಕ್ರಿಕೆಟಿಗರ್ ಕುಸಾಲ್ ಮೆಂಡಿಸ್ ಅರೆಸ್ಟ್ | Oneindia Kannada

ಈ ಕುರಿತು ಪಾಕ್ ಸಚಿವಾಲಯ ಇಂದು ಪ್ರಕಟಣೆ ನೀಡಿದ್ದು, ಅಟ್ಟಾರಿ-ವಾಘಾ ಗಡಿ ಮೂಲಕ ಜುಲೈ 9 ರಂದು ಭಾರತೀಯರನ್ನು ಕಳುಹಿಸಲಾಗುವುದು ಎಂದು ತಿಳಿಸಿದೆ.

ಕೊವಿಡ್ ಸೋಂಕಿನ ಭೀತಿಯಿಂದ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಲಾಕ್‌ಡೌನ್‌ ಮಾಡಿದ್ದವು. ಅನ್‌ಲಾಕ್‌ ಪ್ರಕ್ರಿಯೆ ಶುರುವಾದ ನಂತರ ತಂಡ ತಂಡವಾಗಿ ಸ್ವದೇಶಗಳಿಗೆ ಜನರನ್ನು ಕಳುಹಿಸಿಕೊಡಲಾಗುತ್ತಿದೆ.

ಭಾರತದಲ್ಲಿ ಸಿಲುಕಿದ್ದ 178 ಪಾಕಿಸ್ತಾನಿಗಳು ವಾಘಾ ಗಡಿ ಮೂಲಕ ಸ್ವದೇಶಕ್ಕೆ ವಾಪಸ್ಭಾರತದಲ್ಲಿ ಸಿಲುಕಿದ್ದ 178 ಪಾಕಿಸ್ತಾನಿಗಳು ವಾಘಾ ಗಡಿ ಮೂಲಕ ಸ್ವದೇಶಕ್ಕೆ ವಾಪಸ್

Repatriation Of 114 Indian Nationals Stranded In Pakistan Due To Covid-19 On 9th July

ಇದಕ್ಕೂ ಮುಂಚೆ ಭಾರತದಲ್ಲಿ ಸಿಲುಕಿಕೊಂಡಿದ್ದ 178 ಜನ ಪಾಕಿಸ್ತಾನಿಯರನ್ನು ಮೇ 27 ರಂದು ಅಟ್ಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಕಳುಹಿಸಿಕೊಟ್ಟಿತ್ತು.

ಇನ್ನು ಪಾಕಿಸ್ತಾನದಲ್ಲಿ ಈವರೆಗೂ 2,31,818 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಅದರಲ್ಲಿ 4,762 ಮೃತಪಟ್ಟಿದ್ದಾರೆ. 131,649 ಜನರು ಗುಣಮುಖರಾಗಿದ್ದಾರೆ. 95,407 ಕೇಸ್‌ಗಳು ಸಕ್ರಿಯವಾಗಿದೆ.

English summary
114 Indian nationals stranded in Pakistan due to COVID19 to be repatriated to India via Attari-Wagah border on 9th July, according to a Pakistan government release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X