ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಆತಂಕ ತೊಲಗಿಸಿದ ಔಷಧಿ: ಅಮೇರಿಕಾದಿಂದ ಸಿಹಿ ಸುದ್ದಿ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ರಣಕೇಕೆ ಮುಂದುವರೆದಿದೆ. ವಿಶ್ವದಾದ್ಯಂತ 32,33,838 ಜನರಲ್ಲಿ ಇಲ್ಲಿಯವರೆಗೂ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಈವರೆಗೂ ಕೋವಿಡ್-19 ನಿಂದ 2,28,525 ಜನ ಜೀವ ಕಳೆದುಕೊಂಡಿದ್ದಾರೆ.

ದಿನೇ ದಿನೇ ಹೆಚ್ಚು ಜನರನ್ನು ಬಲಿ ಪಡೆಯುತ್ತಿರುವ ಕೋವಿಡ್-19ಗೆ ಔಷಧಿ ಕಂಡು ಹಿಡಿಯಲು ಜಗತ್ತಿನಾದ್ಯಂತ ಹಲವು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗಲೇ, ಇದೇ ವಿಚಾರದ ಕುರಿತು ಅಮೇರಿಕಾದಿಂದ ಒಂದು ಸಿಹಿ ಸುದ್ದಿ ಹೊರಬಿದ್ದಿದೆ.

ಬೇಸರದ ಸುದ್ದಿ: ಛೇ.. ಮೊದಲ ಹಂತದಲ್ಲೇ ಕೊರೊನಾ ಔಷಧಿ ಫೇಲ್.!ಬೇಸರದ ಸುದ್ದಿ: ಛೇ.. ಮೊದಲ ಹಂತದಲ್ಲೇ ಕೊರೊನಾ ಔಷಧಿ ಫೇಲ್.!

ಕೊರೊನಾ ಸೋಂಕಿತರನ್ನು ಗುಣಪಡಿಸುವ ನಿಟ್ಟಿನಲ್ಲಿ Remdesivir (ರೆಮ್ದೆಸಿವಿರ್) ಪರಿಣಾಮಕಾರಿ ಎಂಬ ಅಂಶ ಅಮೇರಿಕಾದಲ್ಲಿ ನಡೆದ ಪ್ರಯೋಗದಿಂದ ತಿಳಿದುಬಂದಿದೆ. ಹೀಗಾಗಿ, ''ಕೊರೊನಾ ವೈರಸ್ ಚಿಕಿತ್ಸೆಯಲ್ಲಿ ರೆಮ್ದೆಸಿವಿರ್ ಪ್ರಭಾವ 'ಕ್ಲಿಯರ್-ಕಟ್' ಆಗಿದೆ'' ಎಂದು ಅಮೇರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ ಹೇಳಿದ್ದಾರೆ.

ಬೇಗ ಚೇತರಿಕೆ

ಬೇಗ ಚೇತರಿಕೆ

ಫೆಬ್ರವರಿ 11 ರಂದು ಯು.ಎಸ್.ಎ, ಯೂರೋಪ್ ಮತ್ತು ಏಷ್ಯಾದ 68 ಕಡೆಗಳಲ್ಲಿ 1063 ಜನರ ಮೇಲೆ ರೆಮ್ದೆಸಿವಿರ್ ಔಷಧಿಯನ್ನು ಪ್ರಯೋಗ ಮಾಡಲಾಗಿತ್ತು. ಈ ಪೈಕಿ ರೆಮ್ದೆಸಿವಿರ್ ಔಷಧಿ ಪಡೆದ ರೋಗಿಗಳು ಬಹುಬೇಗ ಗುಣಮುಖರಾಗಿರುವುದು ಕಂಡುಬಂದಿದೆ. Placebo ಪಡೆದವರಿಗೆ ಹೋಲಿಸಿದರೆ, ರೆಮ್ದೆಸಿವಿರ್ ಪಡೆದವರ ಆರೋಗ್ಯದಲ್ಲಿ 31% ರಷ್ಟು ಬೇಗ ಚೇತರಿಕೆ ಕಂಡುಬಂದಿದೆ.

11 ದಿನಗಳಲ್ಲಿ ಚೇತರಿಕೆ

11 ದಿನಗಳಲ್ಲಿ ಚೇತರಿಕೆ

Placebo ಪಡೆದವರು 15 ದಿನಗಳಲ್ಲಿ ಗುಣಮುಖರಾದರೆ, ರೆಮ್ದೆಸಿವಿರ್ ಪಡೆದವರ ಆರೋಗ್ಯದಲ್ಲಿ 11 ದಿನಕ್ಕೆ ಚೇತರಿಕೆ ಕಂಡುಬಂದಿದೆ ಎಂದು ಯು.ಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಇನ್ಫೆಕ್ಷಿಯಸ್ ಡಿಸೀಸ್ (ಎನ್.ಐ.ಎ.ಐ.ಡಿ) ತಿಳಿಸಿದೆ.

ವೈರಸ್ ಅನ್ನು ನಿರ್ಬಂಧಿಸುತ್ತದೆ

ವೈರಸ್ ಅನ್ನು ನಿರ್ಬಂಧಿಸುತ್ತದೆ

ಎನ್.ಐ.ಎ.ಐ.ಡಿ ನೇತೃತ್ವ ವಹಿಸಿಕೊಂಡಿರುವ ಅಮೇರಿಕಾದ ಪ್ರಖ್ಯಾತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ, ''ಕೊರೊನಾ ವೈರಸ್ ನಿಂದ ಚೇತರಿಸಿಕೊಳ್ಳುವ ಸಮಯವನ್ನು ಕಡಿಮೆ ಮಾಡುವಲ್ಲಿ ರೆಮ್ದೆಸಿವಿರ್ ಸ್ಪಷ್ಟವಾದ, ಗಮನಾರ್ಹವಾದ, ಸಕಾರಾತ್ಮಕವಾದ ಪರಿಣಾಮ ಹೊಂದಿರುವುದು ಪ್ರಯೋಗದ ಮೂಲಕ ಗೊತ್ತಾಗಿದೆ. 31% ರಷ್ಟು ವೇಗವಾಗಿ ಸುಧಾರಣೆ ಕಂಡುಬಂದಿದೆ ಅಷ್ಟೇ.. 100% ಅಲ್ಲ. ಆದರೆ, ರೆಮ್ದೆಸಿವಿರ್ ಔಷಧಿ ವೈರಸ್ ಅನ್ನು ನಿರ್ಬಂಧಿಸಿರುವುದು ಪ್ರಯೋಗದಿಂದ ಸಾಬೀತಾಗಿದೆ'' ಎಂದು ಹೇಳಿದ್ದಾರೆ.

ಸಾವನ್ನಪ್ಪಿರುವವರ ಸಂಖ್ಯೆ ಕಡಿಮೆ

ಸಾವನ್ನಪ್ಪಿರುವವರ ಸಂಖ್ಯೆ ಕಡಿಮೆ

ಅಂದ್ಹಾಗೆ ರೆಮ್ದೆಸಿವಿರ್ ಔಷಧಿ ಪಡೆದವರ ಪೈಕಿ ಸಾವನ್ನಪ್ಪಿರುವವರ ಸಂಖ್ಯೆ ಕಡಿಮೆ ಇದೆ. ರೆಮ್ದೆಸಿವಿರ್ ಔಷಧಿ ಪಡೆದ ಗುಂಪಿನಲ್ಲಿ 8.0% ಸಾವಿನ ಪ್ರಮಾಣ ಇದ್ದರೆ, Placebo ಪಡೆದ ಗುಂಪಿನಲ್ಲಿ ಸಾವಿನ ಪ್ರಮಾಣ 11.6% ರಷ್ಟಿದೆ.

ಸಂತಸ ಪಟ್ಟ ಡೊನಾಲ್ಡ್ ಟ್ರಂಪ್

ಸಂತಸ ಪಟ್ಟ ಡೊನಾಲ್ಡ್ ಟ್ರಂಪ್

ಕೋವಿಡ್-19 ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರೆಮ್ದೆಸಿವಿರ್ ಪರಿಣಾಮಕಾರಿಯಾಗಿರುವುದನ್ನು ಕೇಳಿ ''ಇದೊಂದು ಪಾಸಿಟಿವ್ ಸುದ್ದಿ'' ಅಂತ್ಹೇಳಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂತಸ ವ್ಯಕ್ತಪಡಿಸಿದ್ದಾರೆ.

ಮ್ಯಾಜಿಕ್ ಬುಲೆಟ್ ಅಲ್ಲ

ಮ್ಯಾಜಿಕ್ ಬುಲೆಟ್ ಅಲ್ಲ

ರೆಮ್ದೆಸಿವಿರ್ ಕುರಿತಾಗಿ ಇದೀಗ ಒಳ್ಳೆ ಸುದ್ದಿ ಕೇಳಿಬಂದಿದ್ದರೂ, ಅದು ಮ್ಯಾಜಿಕ್ ಬುಲೆಟ್ ಅಲ್ಲವೇ ಅಲ್ಲ. ಯಾಕಂದ್ರೆ, ರೆಮ್ದೆಸಿವಿರ್ ಕುರಿತಾದ ಪ್ರಯೋಗಗಳಲ್ಲಿ ಮಿಶ್ರ ಫಲಿತಾಂಶ ಲಭ್ಯವಾಗಿದೆ. ಇತ್ತೀಚೆಗೆಷ್ಟೇ ವಿಶ್ವ ಆರೋಗ್ಯ ಸಂಸ್ಥೆಯ ವೆಬ್ ತಾಣದಲ್ಲಿ ಅಚಾನಕ್ಕಾಗಿ ಪ್ರಕಟಗೊಂಡಿದ್ದ ವರದಿಯ ಪ್ರಕಾರ, ಚೀನಿಯರು ನಡೆಸಿದ ಮೊದಲ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ರೆಮ್ದೆಸಿವಿರ್ ಯಾವುದೇ ಪರಿಣಾಮಕಾರಿ ಫಲಿತಾಂಶ ನೀಡಲಿಲ್ಲ. ಕೋವಿಡ್-19 ನಿಂದ ಬಳಲುತ್ತಿದ್ದ ರೋಗಿಗಳ ಆರೋಗ್ಯ ಸ್ಥಿತಿಯಲ್ಲಿ ರೆಮ್ದೆಸಿವಿರ್ ಸುಧಾರಣೆ ತರಲಿಲ್ಲ. ಜೊತೆಗೆ ರೆಮ್ದೆಸಿವಿರ್ ಪಡೆದ ರೋಗಿಗಳ ಪೈಕಿ 13.9% ರಷ್ಟು ಮಂದಿ ಮೃತಪಟ್ಟಿದ್ದರು.

English summary
Remdesivir Shows Clear-Cut effect in Treating Coronavirus says US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X