ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಲೆ ಉಳಿಸಿಕೊಳ್ಳಲು ಕಾಲಾವಕಾಶ, ವಿಜಯ್ ಮಲ್ಯಗೆ ನೆಮ್ಮದಿ

|
Google Oneindia Kannada News

ಲಂಡನ್, ಮೇ 15: ತಮ್ಮ ಲಂಡನ್ನಿನ ಬಂಗಲೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಸ್ವಿಸ್ ಬ್ಯಾಂಕ್ ಯುಬಿಎಸ್ ಜೊತೆ ಮಾತುಕತೆ ಫಲಪ್ರದವಾಗಿದೆ. ಅವರಿಗೆ ಬಂಗಲೆಯ ಮೇಲೆ ಪಡೆದ ಸಾಲ ತೀರಿಸಲು 2010ರ ಏಪ್ರಿಲ್ ತನಕ ಕಾಲಾವಕಾಶ ಸಿಕ್ಕಿದೆ.

63 ವರ್ಷ ವಯಸ್ಸಿನ ಮಲ್ಯ ಅವರು ಭಾರತದಲ್ಲಿ ಹಲವಾರು ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿಕೊಂಡು, ತೀರಿಸಲಾಗದೆ, ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿದ್ದಾರೆ. ಆರ್ಥಿಕ ಅಪರಾಧಿಯಾಗಿರುವ ಮಲ್ಯ ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರಲು ಸಿಬಿಐ, ಜಾರಿ ನಿರ್ದೆಶನಾಲಾಯವು ಸತತ ಪ್ರಯತ್ನಪಡುತ್ತಿವೆ.

Relief for Mallya, bank grants mallya more time, mallya to pay for London home

ಈ ನಡುವೆ ಲಂಡನ್ನಿನ ಕಾರ್ನ್ ವಲ್ ಟೆರೇಸ್ ಅಪಾರ್ಟ್ಮೆಂಟ್ ಬೋಗ್ಯಕ್ಕೆ ಪಡೆದಿದದ್ದ ಮಲ್ಯ ಅವರು 20.4 ಮಿಲಿಯನ್ ಪೌಂಡ್ ಗಳಷ್ಟು ಸಾಲ ಮಾಡಿದ್ದರು. ಈ ಪ್ರಕರಣ ಕೂಡಾ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. 820,333.64 ಪೌಂಡ್ಸ್ ಬಡ್ಡಿ, ಕಾನೂನು ಖರ್ಚು ವೆಚ್ಚ 1,047,081.18 ಪೌಂಡ್ಸ್ ಹಾಗೂ 223,863.82 ಪೌಂಡ್ಸ್ ಇತರೆ ಖರ್ಚನ್ನು ಕೂಡಾ ಮಲ್ಯ ಭರಿಸಬೇಕಿದೆ.

ಗಡಿಪಾರು ಆದೇಶ ಬಂದರೂ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!ಗಡಿಪಾರು ಆದೇಶ ಬಂದರೂ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!

ಈ ನಡುವೆ ಸ್ವಿಸ್ ಬ್ಯಾಂಕ್ ಜೊತೆ ಮಲ್ಯ ಅವರು ಚರ್ಚೆ ನಡೆಸಿ, ಹೆಚ್ಚಿನ ಕಾಲಾವಕಾಶ ಪಡೆದುಕೊಂಡಿದ್ದಾರೆ. ಈ ಕುರಿತಂತೆ ನ್ಯಾಯಾಲಯಕ್ಕೆ ಸೋಮವಾರದಂದು ತಿಳಿಸಲಾಗಿದೆ. ಮಲ್ಯ ಅವರ ಮನವಿ ಪುರಸ್ಕರಿಸಿದ ಯುಕೆ ಹೈಕೋರ್ಟಿನ ಚಾನ್ಸರಿ ವಿಭಾಗದ ಜಡ್ಜ್ ಸಿಮೋನ್ ಬಾರ್ಕರ್ ಅವರು ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ.

ಮಲ್ಯ ಅವರು ಸದ್ಯ ಬಂಗಲೆಯಲ್ಲಿ ವಾಸಿಸಲು ಅನುಮತಿ ನೀಡಲಾಗಿದೆ. ಆದರೆ, ಏಪ್ರಿಲ್ 2020ರೊಳಗೆ ಬಾಕಿಮೊತ್ತವನ್ನು ಪಾವತಿಸದಿದ್ದರೆ ಯುಬಿಎಸ್ ತಕ್ಷಣವೇ ಬಂಗಲೆಯನ್ನು ತನ್ನ ವಶಕ್ಕೆ ಪಡೆಯಬಹುದು ಎಂದು ಜಡ್ಜ್ ಹೇಳಿದ್ದಾರೆ.

English summary
Embattled liquor tycoon Vijay Mallya has settled a legal dispute with Swiss bank UBS to allow him time until April next year to pay off a mortgage loan for his central London home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X