ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್ ಲ್ಯಾಬ್‌ ಸಿಬ್ಬಂದಿಗಳ ವೈದ್ಯಕೀಯ ದಾಖಲೆ ಬಿಡುಗಡೆ ಮಾಡಿ - ಚೀನಾಕ್ಕೆ ಡಾ. ಫೌಸಿ ಆಗ್ರಹ

|
Google Oneindia Kannada News

ವಾಷಿಂಗ್ಟನ್‌, ಜೂ. 04: ಕೊರೊನಾ ವೈರಸ್‌ ಚೀನಾದ ವುಹಾನ್‌ ಲ್ಯಾಬ್‌ನಿಂದ ಸೋರಿಕೆಯಾಗಿದೆ ಎಂದು ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಾಡಿದ್ದ ಆರೋಪವು ಇತ್ತೀಚೆಗೆ ಮುನ್ನೆಲೆಗೆ ಬಂದಿದೆ. ಹಲವಾರು ದೇಶದ ತಜ್ಞರುಗಳು ಇದು ಚೀನಾದ ವುಹಾನ್‌ ಲ್ಯಾಬ್‌ನಿಂದ ಸೋರಿಕೆಯಾಗಿದೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ.

ಈಗಾಗಲೇ ಚೀನಾದ ಪ್ರಯೋಗಾಲಯಗಳಿಂದಲೇ ಕೊರೊನಾ ವೈರಾಣು ಸೋರಿಕೆಯಾಗಿದೆ ಎಂದು ಬ್ರಿಟನ್ ಗುಪ್ತಚರ ಇಲಾಖೆ ಹೇಳಿದೆ. ಹಾಗೆಯೇ ಹಲವಾರು ತಜ್ಞರು ಕೂಡಾ ಇದೇ ಹೇಳಿಕೆಯನ್ನು ನೀಡಿದ್ದಾರೆ.

ಕೊರೊನಾ ವೈರಸ್ ಚೀನಾ ಲ್ಯಾಬ್‌ನಿಂದ ಬಂದಿದ್ದಲ್ಲ: WHO ವರದಿಕೊರೊನಾ ವೈರಸ್ ಚೀನಾ ಲ್ಯಾಬ್‌ನಿಂದ ಬಂದಿದ್ದಲ್ಲ: WHO ವರದಿ

ಈ ನಡುವೆ ಕೊರೊನಾ ವೈರಸ್‌ ಚೀನಾದ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆಯಾಗಿದೆಯೇ ಎಂಬ ಬಗ್ಗೆ ಪ್ರಮುಖ ಮಾಹಿತಿಗಳನ್ನು ನೀಡುವ ದಾಖಲೆ ಬಿಡುಗಡೆ ಮಾಡಲು ಯುಎಸ್ ಉನ್ನತ ಕೊರೊನಾವೈರಸ್ ಸಲಹೆಗಾರರಾದ ಡಾ. ಆಂಥೋನಿ ಫೌಸಿ ಆಗ್ರಹಿಸಿದ್ದಾರೆ.

ಅನಾರೋಗ್ಯಕ್ಕೆ ಒಳಗಾದ ವೈದ್ಯರ ವೈದ್ಯಕೀಯ ದಾಖಲೆ ನೀಡಿ

ಅನಾರೋಗ್ಯಕ್ಕೆ ಒಳಗಾದ ವೈದ್ಯರ ವೈದ್ಯಕೀಯ ದಾಖಲೆ ನೀಡಿ

ಚೀನಾದಲ್ಲಿ ಕೊರೊನಾ ವೈರಸ್‌ ಮೊದಲ ಬಾರಿಗೆ ಡಿಸೆಂಬರ್‌ 2019 ರಲ್ಲಿ ವುಹಾನ್‌ನಲ್ಲಿ ಕಾಣಿಸಿಕೊಂಡಿದೆ. ಇದಕ್ಕೂ ಒಂದು ತಿಂಗಳ ಮುನ್ನ ವುಹಾನ್‌ನ ಲ್ಯಾಬ್‌ನ ಮೂವರು ಸಿಬ್ಬಂದಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ. ಈ ವಿಚಾರದಲ್ಲಿ ಮಾತನಾಡಿರುವ ಆಂಥೋನಿ ಫೌಸಿ, "ಲ್ಯಾಬ್ ಸೋರಿಕೆಯ ಪರಿಣಾಮವಾಗಿ ಕೋವಿಡ್‌-19 ಹೊರಹೊಮ್ಮಿದೆಯೇ ಎಂಬ ಬಗ್ಗೆ ಪ್ರಮುಖ ಸುಳಿವುಗಳನ್ನು ನೀಡುವ ಒಂಬತ್ತು ಜನರ ವೈದ್ಯಕೀಯ ದಾಖಲೆಗಳನ್ನು ಬಿಡುಗಡೆ ಮಾಡಿ. 2019 ರಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆಂದು ವರದಿಯಾದ ಮೂವರ ವೈದ್ಯಕೀಯ ದಾಖಲೆಗಳನ್ನು ನೋಡಲು ನಾನು ಬಯಸುತ್ತೇನೆ. ಲ್ಯಾಬ್‌ನ ಸಿಬ್ಬಂದಿಗಳು ನಿಜವಾಗಿಯೂ ಅನಾರೋಗ್ಯಕ್ಕೆ ಒಳಗಾಗಿದ್ದಾರೆಯೇ? ಹಾಗೆ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಅವರ ಅನಾರೋಗ್ಯಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ಉಗಮದ ಬಗ್ಗೆ ವಾಗ್ವಾದ

ಕೊರೊನಾ ಉಗಮದ ಬಗ್ಗೆ ವಾಗ್ವಾದ

ಕೊರೊನಾ ಸೋಂಕು ಮೊದಲ ಬಾರಿಗೆ ಚೀನಾದ ವುಹಾನ್‌ನ ಮಾರುಕಟ್ಟೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದ್ದರೂ ಇದನ್ನು ಹಲವು ದೇಶಗಳ ನಾಯಕರುಗಳು ಒಪ್ಪುತ್ತಿಲ್ಲ. ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭ ಕೊರೊನಾ ವೈರಸ್‌ ಚೀನಾವೇ ಅಭಿವೃದ್ದಿ ಪಡಿಸಿದೆ, ಇದು ವುಹಾನ್‌ನ ಲ್ಯಾಬ್‌ನಿಂದ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದರು. ಈಗ ಮತ್ತೆ ಕೊರೊನಾ ಉಗಮದ ಸುದ್ದಿ ಮುನ್ನೆಲೆಗೆ ಬಂದ ಬಳಿಕ ಮತ್ತೆ ತನ್ನ ವಾಗ್ದಾಳಿ ಮುಂದುವರೆಸಿದ್ದಾರೆ.

ಇಮೇಲ್‌ ಬಹಿರಂಗ

ಇಮೇಲ್‌ ಬಹಿರಂಗ

ಕೊರೊನಾ ವೈರಸ್‌ ಉಗಮದ ಬಗ್ಗೆ ಯುಎಸ್‌ನಲ್ಲಿ ಕೋವಿಡ್ ಏಕಾಏಕಿ ಏರಿಕೆ ಕಂಡ ದಿನಗಳಲ್ಲಿ ಮಾಡಲಾಗಿದ್ದ ಇಮೇಲ್‌ಗಳು ಇತ್ತೀಚೆಗೆ ಬಹಿರಂಗವಾಗಿದೆ. ಯುಎಸ್ ಉನ್ನತ ಕೊರೊನಾವೈರಸ್ ಸಲಹೆಗಾರರಾದ ಡಾ. ಆಂಥೋನಿ ಫೌಸಿ ಮತ್ತು ಸಹೋದ್ಯೋಗಿಗಳು ಆರಂಭಿಕ ದಿನಗಳಲ್ಲಿ, ಕೋವಿಡ್‌-19 ಚೀನಾದ ವುಹಾನ್‌ನಲ್ಲಿನ ಪ್ರಯೋಗಾಲಯದಿಂದ ಸೋರಿಕೆಯಾಗಿರಬಹುದು ಎಂದು ಉಲ್ಲೇಖಿಸಿರುವ ಈ ಇಮೇಲ್‌ ಈಗ ಮತ್ತೆ ಕೊರೊನಾ ಉಗಮದ ಚರ್ಚೆಗೆ ನಾಂದಿ ಹಾಡಿದೆ. 2020 ರ ಜನವರಿಂದ ಜೂನ್ 2020 ರವರೆಗಿನ ಎಲ್ಲಾ ಇಮೇಲ್‌ಗಳು ಅಂದರೆ ಸರಿಸುಮಾರು 3,000 ಪುಟಗಳ ಇಮೇಲ್‌ಗಳನ್ನು
ವಾಷಿಂಗ್ಟನ್ ಪೋಸ್ಟ್, ಬಝ್‌ಫೀಡ್‌ ನ್ಯೂಸ್ ಮತ್ತು ಸಿಎನ್ಎನ್ ಮಾಹಿತಿ ಸ್ವಾತಂತ್ರ್ಯ ಕಾಯ್ದೆ (ಎಫ್‌ಒಐಎ) ಅಡಿಯಲ್ಲಿ ಪಡೆದುಕೊಂಡಿದೆ.

ಕೊರೊನಾ ವೈರಸ್ ಚೀನಾ ಲ್ಯಾಬ್‌ನಿಂದ ಬಂದಿದ್ದಲ್ಲ ಎಂದು ವರದಿ ಮಾಡಿದ ಡಬ್ಲ್ಯೂಎಚ್‌ಒ

ಕೊರೊನಾ ವೈರಸ್ ಚೀನಾ ಲ್ಯಾಬ್‌ನಿಂದ ಬಂದಿದ್ದಲ್ಲ ಎಂದು ವರದಿ ಮಾಡಿದ ಡಬ್ಲ್ಯೂಎಚ್‌ಒ

ಚೀನಾದ ಲ್ಯಾಬ್‌ನಿಂದ ವೈರಸ್ ಸೋರಿಕೆ ಆಗಿದೆ ಎಂಬ ಅಭಿಪ್ರಾಯಗಳು ಕಪೋಲಕಲ್ಪಿತ. ಕೋವಿಡ್-19 ವೈರಸ್ ಬಾವಲಿಗಳಿಂದ ಬೇರೊಂದು ಪ್ರಾಣಿಯಿಂದ ಮನುಷ್ಯರಿಗೆ ಹರಡಿರುವ ಸಾಧ್ಯತೆಯೇ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ-ಚೀನಾ ಜಂಟಿ ಅಧ್ಯಯನ ವರದಿ ಬಹಿರಂಗ ಸಪಡಿಸಿದೆ. ಹಾಗೆಯೇ ಚೀನಾದ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಲ್ಯಾಬ್ ಸೋರಿಕೆ ಊಹೆಗಳನ್ನು ಸತತವಾಗಿ ಅಲ್ಲಗಳೆಯುತ್ತಲ್ಲಿದ್ದಾರೆ. ಈ ವೈರಸ್‌ ವುಹಾನ್‌ಗೂ ಮೊದಲು ಬೇರೆ ಪ್ರಾಂತ್ಯಗಳಲ್ಲಿ ಹರಡಿರಬಹುದು. ಆಮದು ಮಾಡಿದ ಹೆಪ್ಪುಗಟ್ಟಿದ ಆಹಾರ ಪದಾರ್ಥ, ವನ್ಯಜೀವಿ ವ್ಯಾಪಾರದ ಮೂಲಕ ಚೀನಾಕ್ಕೆ ಸೋಂಕು ಬಂದಿರಬಹುದು ಎಂದು ಹೇಳಿಕೊಂಡಿದ್ದಾರೆ.

ವೈರಸ್ ಮೊದಲು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ ಎಂದು ಕೂಡಾ ಹೇಳುವ ಡಾ. ಫೌಸಿ, ಲ್ಯಾಬ್‌ನಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದವರ ಬಗ್ಗೆ ವರದಿಯಾದ ಹಿನ್ನೆಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

English summary
Release Medical Records Of Wuhan Lab Workers asks Dr Fauci to China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X