• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರಾನ್‌ ನಿಯಮ ವಿರೋಧಿಸಿ ಚೆಸ್‌ ಟೂರ್ನಿಯಿಂದ ಹೊರಬಂದ ಸೌಮ್ಯಾ

By Nayana
|

ಪುಣೆ, ಜೂನ್ 13: ತಲೆಗೆ ಸ್ಕಾರ್ಫ್ ಧರಿಸಿಕೊಂಡು ಚೆಸ್ ಆಡಬೇಕೆಂಬ ಇರಾನ್ ದೇಶದ ಕಾನೂನನ್ನು ಧಿಕ್ಕರಿಸಿ ಭಾರತದ ಚೆಸ್‌ ಪ್ರತಿಭೆ ಸೌಮ್ಯಾ ಸ್ವಾಮಿನಾಥನ್ ಚೆಸ್‌ ಟೂರ್ನಿಯಿಂದ ಹೊರಬಂದಿದ್ದಾರೆ.

ಇರಾನ್‌ನ ಹಮದಾನ್‌ನಲ್ಲಿ ಜೂನ್ 26ರಿಂದ ಆಗಸ್ಟ್ 4ರವರೆಗೆ ಚೆಸ್ ಚಾಂಪಿಯನ್‌ಷಿಪ್‌ ನಡೆಯಲಿದೆ. ಇರಾನ್‌ ಕಾನೂನಿನ ಪ್ರಕಾರ ಮಹಿಳೆಯರು ತಲೆಗೆ ಸ್ಕಾರ್ಫ್ ಕಟ್ಟಿಕೊಳ್ಳಬೇಕಿರುವುದು ಕಡ್ಡಾಯವಾಗಿರುವುದರಿಂದ ಅದು ತಮ್ಮ ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಈ ಕಾರಣದಿಂದ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸೌಮ್ಯಾ ಹೇಳಿದ್ದಾರೆ.

ಇರಾನ್ ನಿಯಮ ವಿರೋಧಿಸಿ ಸ್ಪರ್ಧೆಯಿಂದ ದೂರಸರಿದ ಚೆಸ್ ತಾರೆ

ಈ ಕುರಿತು ಫೇಸ್‌ಬುಕ್ ಪುಟದಲ್ಲಿ ಬರೆದಿರುವ ಸೌಮ್ಯಾ, 'ಮಹಿಳೆಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ಇರಾನ್‌ನ ಕಾನೂನು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ, ಚಿಂತನೆ, ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳು ಸೇರಿದಂತೆ ನನ್ನ ಮೂಲ ಮಾಣವ ಹಕ್ಕುಗಳನ್ನು ನೇರವಾಗಿ ಹತ್ತಿಕ್ಕುತ್ತದೆ.

ಪ್ರಸ್ತುತದ ಸಂದರ್ಭದಲ್ಲಿ ನನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ನಾನು ಇರಾನ್‌ಗೆ ತೆರಳದೆ ಇರುವುದೇ ಸೂಕ್ತ ಎಂದೆನಿಸಿದೆ ಎಂಬುದಾಗಿ ಹೇಳಿದ್ದಾರೆ. ಕ್ರೀಡಾಪಟುಗಳ ಮೇಲೆ ಧಾರ್ಮಿಕ ವಸ್ತ್ರಸಂಹಿತೆಯನ್ನು ಹೇರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಧಿಕೃತ ಚಾಂಪಿಯನ್‌ಷಿಪ್‌ಗಳಲ್ಲಿ ನಾವು ರಾಷ್ಟ್ರೀಯ ತಂಡದ ದಿರಿಸು ಅಥವಾ ಕ್ರೀಡಾ ಉಡುಪನ್ನು ಧರಿಸಿರುವುದನ್ನು ಆಯೋಜಕರು ನಿರೀಕ್ಷಿಸುತ್ತಾರೆ. ಆದರೆ, ಕ್ರೀಡೆಯಲ್ಲಿ ಧಾರ್ಮಿಕ ವಸ್ತ್ರಸಂಹಿತೆಯನ್ನು ಬಲವಂತವಾಗಿ ಹೇರುವಂತಿಲ್ಲ ಎಂದಿದ್ದಾರೆ.

ವಸ್ತ್ರಸಂಹಿತೆಯ ನಿಯಮವನ್ನು ವಿರೋಧಿಸಿ ಭಾರತದ ಕ್ರೀಡಾಪಟು ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿದಿರುವುದು ಇದು ಮೊದಲೇನಲ್ಲ. 2016ರಲ್ಲಿ ಭಾರತದ ಶೂಟರ್ ಹೀನಾ ಸಿಧು ಅವರು ಇರಾನ್‌ನಲ್ಲಿ ಆಯೋಜಿಸಿದ್ದ ಏಷ್ಯನ್ ಏರ್‌ಗನ್ ಸ್ಪರ್ಧೆಯಿಂದ ಇದೇ ಕಾರಣದಿಂದ ಹಿಂದಕ್ಕೆ ಸರಿದಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian chess star Soumya Swaminthan has withdrawn herself from a tournament in Iran, opposing the country's rule which makes it mandatory for female athletes to wear a headscarf.Swaminathan took to Facebook to share her decision with the fans. She released a strongly-worded statement saying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more