ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯಲ್ಲಿ ಕೊರೊನಾ ಸೋಂಕಿನ ಮರಣ ಪ್ರಮಾಣ ಹೆಚ್ಚಲು ಕಾರಣವೇನು?

|
Google Oneindia Kannada News

2020 ವರ್ಷದ ಮೊದಲಿಗೆ ಕೊರೊನಾ ಸೋಂಕಿನಿಂದ ತತ್ತರಿಸಿದ ದೇಶಗಳಲ್ಲಿ ಒಂದಾಗಿರುವ ಇಟಲಿಯಲ್ಲಿ ಕೊರೊನಾ ವೈರಸ್ ನಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚೇ ಇದೆ.

ಇಟಲಿಯಲ್ಲಿ ದಿನವೊಂದಕ್ಕೆ ಸುಮಾರು 611 ಮಂದಿ ಕೊರೊನಾದಿಂದ ಸಾವನ್ನಪ್ಪುತ್ತಿದ್ದು, ಈ ವರ್ಷ 68,900 ಮಂದಿ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಯುರೋಪ್ ದೇಶಗಳಲ್ಲಿ ಈ ಸಂಖ್ಯೆ ಅತ್ಯಧಿಕವೆನಿಸಿದ್ದು, ಇಡೀ ವಿಶ್ವದಲ್ಲಿ ಅಮೆರಿಕ, ಬ್ರೆಜಿಲ್, ಭಾರತ ಹಾಗೂ ಮೆಕ್ಸಿಕೊ ನಂತರ ಅತಿ ಹೆಚ್ಚು ಸಾವಿನ ಪ್ರಕರಣ ಕಂಡ ದೇಶ ಇಟಲಿ ಆಗಿದೆ.

ಮಹಿಳೆಯರಿಗೆ ಬೇಗ ಕೊರೊನಾ ಸೋಂಕು ತಗುಲುವುದಿಲ್ಲ, ಏಕೆ?ಮಹಿಳೆಯರಿಗೆ ಬೇಗ ಕೊರೊನಾ ಸೋಂಕು ತಗುಲುವುದಿಲ್ಲ, ಏಕೆ?

ಆದರೆ ಇಟಲಿಯಲ್ಲಿ ಮರಣ ಪ್ರಮಾಣ ಹೆಚ್ಚಿರುವುದು ಏಕೆ ಎಂಬ ಪ್ರಶ್ನೆ ಇಟಲಿಯನ್ನರನ್ನೂ ಕಾಡುತ್ತಿದೆ. ಇದಕ್ಕೆ ಉತ್ತರ, ಜನಸಂಖ್ಯೆಯಲ್ಲಿದೆ ಎನ್ನುತ್ತಿದ್ದಾರೆ ಇಲ್ಲಿನ ಆರೋಗ್ಯ ತಜ್ಞರು. ಜಪಾನ್ ನಂತರ, ಜನಸಂಖ್ಯೆಯ ಪ್ರಮಾಣದಲ್ಲಿ ವಯಸ್ಸಾದವರ ಪಾಲು ಹೆಚ್ಚಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ನಾಲ್ಕರಲ್ಲಿ ಒಬ್ಬರು 65 ವಯಸ್ಸಿಗಿಂತ ಮೇಲ್ಪಟ್ಟವರಾಗಿದ್ದು, ಇವರಲ್ಲಿ ಕೊರೊನಾ ಸೋಂಕು ಅತಿ ಬೇಗನೆ ಕಾಣಿಸಿಕೊಂಡು ಸಾವಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ.

Reason Why Coronavirus Death Cases More In Italy

ಕೊರೊನಾ ಸೋಂಕು ಪತ್ತೆಯಾದ ದಿನದಿಂದ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರಲ್ಲಿ ಶೇ.95ರಷ್ಟು ಮಂದಿ 60 ವರ್ಷದ ಮೇಲಿನವರಾಗಿದ್ದು, ಶೇ.86ರಷ್ಟು ಮಂದಿ 70 ವಯಸ್ಸಿಗೂ ಹೆಚ್ಚಿನವರಾಗಿದ್ದಾರೆ.

ಇಟಲಿಯಲ್ಲಿ ಈ ಡಿಸೆಂಬರ್ ತಿಂಗಳಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲೇ ಇದ್ದು, ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಮತ್ತೆ ಲಾಕ್ ಡೌನ್ ಘೋಷಿಸಲಾಗಿದೆ. ಡಿಸೆಂಬರ್ 26ರಿಂದ ಜನವರಿ 6ರವರೆಗೂ ಬಾರ್ ರೆಸ್ಟೋರೆಂಟ್ ಗಳನ್ನು ಮುಚ್ಚಲಾಗಿದೆ.

English summary
Italy witnessing high Coronavirus death cases beyond other countries. Here is the reason for that...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X