ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಸ್ ಡೊಮೆಸ್ಟಿಕ್ ಹ್ಯಾಪಿನೆಸ್‌ಗಾಗಿ ಯೋಗ : ಶ್ರೀಶ್ರೀ

By Prasad
|
Google Oneindia Kannada News

ಬ್ರಸ್ಸೆಲ್ಸ್, ಏ. 22 : ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕೆಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಆ ಆಚರಣೆಯ ಪೂರ್ವಭಾವಿಯಾಗಿ, ಯೂರೋಪಿಯನ್ ಸಂಸತ್ತು 'ದಿ ಯೋಗ ವೆ' ಎಂಬ ವೈಶಿಷ್ಟ್ಯಪೂರ್ಣವಾದ ಕಾರ್ಯಕ್ರಮವನ್ನು ಏ.21ರಂದು, ಮಂಗಳವಾರ ಆಯೋಜಿಸಿತ್ತು.

ಬ್ರಸ್ಸಲ್ಸ್‌ನ ಯೂರೋಪಿಯನ್ ಪಾರ್ಲಿಮೆಂಟ್‌ನ ಪಾಲ್ ಹೆನ್ರಿ ಸ್ಪಾಕ್ ಕಟ್ಟಡದಲ್ಲಿ, ಜಾಗತಿಕ ಮಾನವತಾವಾದಿ ಹಾಗೂ ಭಾರತದ ಅತ್ಯುತ್ತಮ ಯೋಗ ಗುರು, ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರರು ಯೋಗದ ಮಹತ್ವದ ಬಗ್ಗೆ ಆಡಿದ ಮಾತುಗಳು, ನಡೆಸಿಕೊಟ್ಟ ಕಾರ್ಯಕ್ರಮ ಸರ್ವರ ಮೆಚ್ಚುಗೆಗೆ ಪಾತ್ರವಾದವು.

ಅಲ್ಲಿ ನೆರೆದಿದ್ದ ಗಣ್ಯ ಸಂಸತ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಶ್ರೀಯವರು, ಜಿಡಿಪಿಯಿಂದ ಈ ಗ್ರಾಸ್ ಡೊಮೆಸ್ಟಿಕ್ ಹ್ಯಾಪಿನೆಸ್ (ಜಿಡಿಹೆಚ್)ನತ್ತ ತೆರಳುತ್ತಿದ್ದೇವೆ. ಈ ಮಾರ್ಪಾಟನ್ನು ತರಲು ಯೋಗವು ಬಲು ಸಹಕಾರಿಯಾಗಿರುತ್ತದೆ ಎಂದರು. [ಶಕಪುರುಷ ಬಿಕೆಎಸ್ ಐಯ್ಯಂಗಾರ್ - ಒಂದು ನೆನಪು]

ಇಂದು ಬಹುತೇಕ ಜನಸಂಖ್ಯೆ ಖಿನ್ನತೆಯಿಂದ ನರಳುತ್ತಿದೆ. ಕೇವಲ ಖಿನ್ನತೆಯನ್ನು ಅದುಮಿಡುವಂತಹ ಆಂಟಿ-ಡಿಪ್ರೆಸ್ಸೆಂಟ್‌ಗಳನ್ನು ನುಂಗಿದರೆ ಪ್ರಯೋಜನವಾಗುವುದಿಲ್ಲ. ಉಸಿರಿನಂತಹ ಸಹಜವಾದುದರ ಸಹಾಯದಿಂದ ನಮ್ಮ ಆತ್ಮವನ್ನು ಉತ್ಥಾಪಿಸಿ, ಎಲ್ಲರೂ ಹಾತೊರೆಯುತ್ತಿರುವ ಆ ಸಂತೋಷವನ್ನು ಅನುಭವಿಸಬಹುದು ಎಂದರು.

ಡಿಸೆಂಬರ್ 2014ರಂದು ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯು ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಾಗಿ ಘೋಷಿಸಿದೆ. ಜೂ.21 ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಬೇಕೆಂದು ವಿಶ್ವಸಂಸ್ಥೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದರು. ['ಮೋದಿ ಯೋಗ ದಿನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ']

ಮನುಷ್ಯರ ಮನಸ್ಸು ಪೂರ್ವಾಗ್ರಹ ಪೀಡಿತ

ಮನುಷ್ಯರ ಮನಸ್ಸು ಪೂರ್ವಾಗ್ರಹ ಪೀಡಿತ

ಧರ್ಮ, ಪಂಥ, ವರ್ಗ, ಲಿಂಗ, ಶಿಕ್ಷಣ, ಆರ್ಥಿಕ ಸ್ಥಿತಿಯಿಂದಾಗಿ ಮನುಷ್ಯರ ಮನಸ್ಸು ಪೂರ್ವಾಗ್ರಹ ಪೀಡಿತವಾಗಿದೆ. ಇದರಿಂದಾಗಿ ಸಮಾಜದಲ್ಲಿ ಘರ್ಷಣೆಗಳು ಏಳುತ್ತವೆ. ಯೋಗದ ಮೂಲಕ ನಾವು ಎಲ್ಲರನ್ನೂ ತಲುಪಿ ಘರ್ಷಣೆಗಳನ್ನು ನಿವಾರಿಸಬಹುದು ಎಂದು ಶ್ರೀಗಳು ಸಾರಿದರು.

ಜರ್ಮನಿಯ ಜೋ ಲೀನೆನ್‌ ನೋಬೆಲ್‌ಗೆ ಅರ್ಹರು

ಜರ್ಮನಿಯ ಜೋ ಲೀನೆನ್‌ ನೋಬೆಲ್‌ಗೆ ಅರ್ಹರು

ಅನೇಕ ಮಾನವೀಯ ಕಾರ್ಯಕ್ರಮಗಳನ್ನು ಶ್ಲಾಘಿಸುತ್ತಾ, ಜರ್ಮನಿಯ ಜೋ ಲೀನೆನ್‌ರವರು, ನೋಬಲ್ ಶಾಂತಿ ಪುರಸ್ಕಾರಕ್ಕೆ ಅರ್ಹರು. ಘರ್ಷಣೆಗಳನ್ನು ನಿವಾರಿಸಿ ಸಾಮರಸ್ಯವನ್ನು ನೀವು ತರಬಯಸುತ್ತೀರಿ ಎಂದು ಅವರ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಧ್ಯಾನಕ್ಕೆ ಮೊರೆಹೋದ ಯುರೋಪಿನ್ನರು

ಧ್ಯಾನಕ್ಕೆ ಮೊರೆಹೋದ ಯುರೋಪಿನ್ನರು

ಯೋಗದ ಬಗ್ಗೆ ಆಳವಾದ ದೃಷ್ಟಿಕೋನವನ್ನು ನೀಡುವ ಪ್ರವಚನ, ಪ್ರಶ್ನೋತ್ತರ ಮತ್ತು ವಿಶ್ರಾಂತಿದಾಯಕವಾದ ಧ್ಯಾನವನ್ನು ಯೂರೋಪಿಯನ್ ಸಂಸತ್ತಿನ ಸದಸ್ಯರು, ಡಿಜಿಗಳು, ಯೂರೋಪ್ ಆಯುಕ್ತರುಗಳು, ಅನೇಕ ದೇಶಗಳ ದೂತರು ಮತ್ತಿನ್ನಿತರರು ಶ್ರೀ ಶ್ರೀಯವರೊಡನೆ ಆನಂದಿಸಿದರು.

ಸಂಸತ್ ಸದಸ್ಯರ ಒಕ್ಕೊರಲ ಬೆಂಬಲ

ಸಂಸತ್ ಸದಸ್ಯರ ಒಕ್ಕೊರಲ ಬೆಂಬಲ

2015ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವವಾಗಿ, ಡೆಲಿಗೇಷನ್ ಫಾರ್ ರಿಲೇಷನ್ಸ್ ವಿತ್ ಇಂಡಿಯದ ಸದಸ್ಯರು ಯೂರೋಪ್‌ನ ಸಂಸತ್ತಿನಲ್ಲಿ ಶ್ರೀ ಶ್ರೀ ರವಿಶಂಕರರು ಯೋಗದ ಬಗ್ಗೆ ಮಾತಾನಾಡಿ, ಧ್ಯಾನವನ್ನು ನಡೆಸಿಕೊಡಬೇಕೆಂದು ಆಹ್ವಾನಿಸಿದ್ದರು ಮತ್ತು ಹನ್ನೊಂದು ಯೂರೋಪಿಯನ್ ಸಂಸತ್ತಿನ ಸದಸ್ಯರು ಇದಕ್ಕೆ ಒಕ್ಕೊರಲ ಬೆಂಬಲವನ್ನು ಸೂಚಿಸಿದ್ದರು.

5 ಯೂರೋಪ್ ಸಂಸತ್ತಿನ ಸದಸ್ಯರು ಭಾಗಿ

5 ಯೂರೋಪ್ ಸಂಸತ್ತಿನ ಸದಸ್ಯರು ಭಾಗಿ

ಯೂರೋಪ್‌ನ ಸಂಸತ್ತಿಗೆ ಯೂರೋಪಿಯನ್ ಯೂನಿಯನ್, ಬೆಲ್ಜಿಯಂ ಮತ್ತು ಲಕ್ಸೆಂಬರ್ಗ್‌ನ ಭಾರತದ ರಾಯಭಾರಿಯಾದ ಮಂಜೀವ್ ಪೂರಿ ಸಿಂಗ್‌ರವರು ಶ್ರೀ ಶ್ರೀಯವರನ್ನು ಸ್ವಾಗತಿಸಿದರು. ಈ ಸಮಾವೇಷವನ್ನು ಪ್ರಮುಖವಾಗಿ ಆಯೋಜಿಸಿದ್ದ 5 ಯೂರೋಪ್ ಸಂಸತ್ತಿನ ಸದಸ್ಯರೆಂದರೆ : ಜಿಯಾಫ್ರಿ ವಾನ್ ಓರ್ಡೆನ್, ನಿರ್ಜ್ ದೇವ, ನೀನ ಗಿಲ್, ಜೋ ಲೀನೆನ್ ಮತ್ತು ಅಲೋಜ್ ಪೀಟರ‍್ಲೆ.

ಶಾಲೆ, ಕಾಲೇಜು ಎಲ್ಲೆಲ್ಲೂ ಯೋಗಾಥಾನ್

ಶಾಲೆ, ಕಾಲೇಜು ಎಲ್ಲೆಲ್ಲೂ ಯೋಗಾಥಾನ್

2012ರಲ್ಲಿ ನಡೆದ ಯೋಗಥಾನ್ 1.29 ಮಿಲಿಯನ್ ಜನರು ಭಾಗವಹಿಸಿದರು. 2014ರಲ್ಲಿ 1.8 ಮಿಲಿಯನ್ ಜನರು ಭಾಗವಹಿಸಿದರು. ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಉದ್ಯಾನವನಗಳಲ್ಲಿ, ಸಭಾಂಗಣಗಳಲ್ಲಿ, ಕಾರಾಗೃಹಗಳಲ್ಲಿ ಪುನರ್ವಸತಿ ಕೇಂದ್ರಗಳಲ್ಲಿ, ಮಾಲ್‌ಗಳಲ್ಲಿ, ಅನಾಥಾಲಯಗಳಲ್ಲಿ ಮತ್ತು ಕ್ಲಬ್‌ಗಳಲ್ಲಿ ಯೋಗಾಥಾನ್ ನಡೆದಿತ್ತು.

English summary
The Art of Living Founder, Sri Sri Ravi Shankar on Apr 21 addressed the European Parliament on 'The Yoga Way', a curtain raiser event to celebrate International Day of Yoga (June 21) 2015. ‘The Yoga Way’ was officially hosted by the European Parliament’s Delegation for Relations with India and endorsed by eleven members of European Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X