ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಟ್ ಆಫ್ ಲಿವಿಂಗ್ ನಿಂದ ಪ್ರಾಮಿಸ್ ಟು ಯೋಗ ಚಳವಳಿ

By Prasad
|
Google Oneindia Kannada News

ಬ್ರಸ್ಸೆಲ್ಸ್, ಜೂನ್ 22 : ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಸಂತೋಷದ ಕೋಷಂಟ್ ಅನ್ನು ಅವರ ಶಕ್ತಿಶಾಲಿಯಾದ, ಹಾಸ್ಯದಿಂದ ಕೂಡಿದ ಭಾಷಣವನ್ನು ಯೂರೋಪಿನ ಸಂಸದರಿಗೆ ನೀಡಿದರು.

150 ದೇಶಗಳ ಅನೇಕ ಮಿಲಿಯನ್ ಜನರು ಆರ್ಟ್ ಆಫ್ ಲಿವಿಂಗ್ನ #ಪ್ರಾಮಿಸ್ ಟು ಯೋಗ ಚಳವಳಿಯಲ್ಲಿ ಗುರುವಾರ ಭಾಗವಹಿಸಿದರು. ಕಾರಾಗೃಹಗಳಲ್ಲಿ, ಶಾಪಿಂಗ್ ಮಾಲ್ಗಳಲ್ಲಿ, ಪೊಲೀಸ್ ಅಕಾಡೆಮಿಯಲ್ಲಿ, ಶಾಲೆಗಳಲ್ಲಿ, ಪುರಾತನ ಸ್ಮಾರಕಗಳಲ್ಲಿ ಜನರು ಯೋಗದಲ್ಲಿ ಪಾಲ್ಗೊಂಡಿದ್ದರು.

ಯೋಗ ದಿನಾಚರಣೆಗೆ ಯೂರೋಪಿಯನ್ ಸಂಸತ್ತಿನಲ್ಲಿ ಶ್ರೀಶ್ರೀ ರವಿಶಂಕರ್ಯೋಗ ದಿನಾಚರಣೆಗೆ ಯೂರೋಪಿಯನ್ ಸಂಸತ್ತಿನಲ್ಲಿ ಶ್ರೀಶ್ರೀ ರವಿಶಂಕರ್

ಯೂರೋಪಿನ ಸಂಸತ್ತು, ಬೆಲ್ಜಿಯಂನ ಭಾರತದ ದೂತಾವಾಸ ಮತ್ತು ಆರ್ಟ್ ಆಫ್ ಲಿವಿಂಗ್ನ ಸಂಸ್ಥೆಯು ರವಿಶಂಕರರನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶೇಷವಾದ ಯೋಗದ ಶಿಬಿರವನ್ನು ಯೆಹೂದಿ ಮೆನೂಹಿನ್ ಸ್ಪೇಸ್ ನಲ್ಲಿ, ಸಂಸತ್ತಿನಲ್ಲಿ ನಡೆಸಿಕೊಡಲು ಆಹ್ವಾನಿಸಿದರು.

Ravi Shankar leads Yoga session at European Parliament

ಈ ಸಮಾರಂಭದಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಯೂರೋಪಿಯನ್ ಕಮಿಷನ್ ನ ಅಧಿಕಾರಿಗಳು, ಯೂರೋಪಿಯನ್ ಎಕ್ಸ್ಟರ್ನಲ್ ಆಕ್ಷನ್ ಸರ್ವೀಸ್ನ ಅಧಿಕಾರಿಗಳು, ಮತ್ತಿನ್ನಿತರ ಗಣ್ಯರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಆಸನಗಳನ್ನು, ಉಸಿರಾಟದ ವ್ಯಾಯಾಮಗಳನ್ನು, ಮತ್ತು ಧ್ಯಾನವನ್ನು ಒಳಗೊಂಡ ಅನೇಕ ಯೋಗದ ಪ್ರಕ್ರಿಯೆಗಳನ್ನು ಆಂತರಿಕ ಒಳಿತಿಗಾಗಿ ಬೋಧಿಸಲಾಯಿತು.

ರವಿಶಂಕರ್ ಗುರೂಜಿಗೆ ಅಂತಾರಾಷ್ಟ್ರೀಯ ನಾಯಕತ್ವ ಪ್ರಶಸ್ತಿ ರವಿಶಂಕರ್ ಗುರೂಜಿಗೆ ಅಂತಾರಾಷ್ಟ್ರೀಯ ನಾಯಕತ್ವ ಪ್ರಶಸ್ತಿ

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಗುರುದೇವರು, ಸಮಾಜದ ಉದ್ರಿಕ್ತತೆ ಮತ್ತು ಖಿನ್ನತೆಯನ್ನು ಹೋಗಲಾಡಿಸಲು ಯೋಗ ಎಷ್ಟು ಮುಖ್ಯ ಎಂದು ತಿಳಿಸುತ್ತಾ, "ನಮ್ಮ ಸಮಾಜದ ಎರಡು ಮುಖ್ಯ ಕಾಯಿಲೆಗಳೆಂದರೆ ಉದ್ರಿಕ್ತತೆ ಮತ್ತು ಖಿನ್ನತೆ ಮತ್ತು ಇದನ್ನು ನಿಭಾಯಿಸಲೇಬೇಕು. ಯೋಗವಲ್ಲದೆ ಇದನ್ನು ನಿಭಾಯಿಸುವ ಬೇರೆ ಉತ್ತಮವಾದ ದಾರಿ ಯಾವುದೂ ಇಲ್ಲ" ಎಂದು ವಿವರಿಸಿದರು.

Ravi Shankar leads Yoga session at European Parliament

ಇದಕ್ಕೂ ಮೊದಲು ಆಮ್ಸ್ಟರ್ಡ್ಯಾಮ್ ನಲ್ಲಿ ಮಾತನಾಡಿದ ಗುರುದೇವರು, "ಯೋಗ ಭಾರತದಲ್ಲಿ ಜನಿಸಿದ್ದರೂ ಸಳ ಅದು ಇಡೀ ವಿಶ್ವಕ್ಕೇ ಸೇರಿದ್ದು. ಯೂರೋಪಿನ ಪ್ರತಿಯೊಂದು ಕದವನ್ನೂ ತಟ್ಟೋಣ. ಇಲ್ಲಿ ಖಿನ್ನತೆ ಬಲು ಮುಖ್ಯವಾದ ಸಮಸ್ಯೆ. ಇದನ್ನು ಗುಣಮುಖಗೊಳಿಸಲು ಯೋಗ ಸಹಾಯ ಮಾಡಬಲ್ಲದು. ಮುಂದಿನ ಪೀಳಿಗೆಗಾಗಿ ಉತ್ತಮ ಜಗತ್ತು ಲಭ್ಯವಾಗಲಿ ಎಂದು ಹಾರೈಸೋಣ" ಎಂದರು.

ಮ್ಯೂನಿಕ್ನಲ್ಲಿ ಜೂ.23ರಂದು ಯೋಗ ಶಿಬಿರ : 18ನೆಯ ಜೂನ್ ರಂದು ಫಿನ್ಲಾಂಡ್ನ ಹೌಸ್ ಆಫ್ ನೊಬಿಲಿಟಿ ಇನ್ ಹೆಲ್ಸಿಂಕಿಯಲ್ಲಿ ಯೋಗದ ದಿನಾಚರಣೆಯನ್ನು ಗುರುದೇವರು ಉದ್ಘಾಟಿಸಿದರು. ಇಡೀ ವಾರ ಯೋಗದ ಸಂಭ್ರಮಾಚರಣೆ ಮುಂದುವರಿಯಲಿದ್ದು, 23ರರಂದು ಮ್ಯೂನಿಕ್ನಲ್ಲಿ ಯೋಗ ಮತ್ತು ಧ್ಯಾನದ ಶಿಬಿರವನ್ನು ನಡೆಸಿಕೊಳ್ಳಲಿದ್ದಾರೆ.

Ravi Shankar leads Yoga session at European Parliament

ಬೆಂಗಳೂರಿನಲ್ಲಿ ಯೋಗ ದಿನಾಚರಣೆ : ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಕೇಂದ್ರದ ಮಂತ್ರಿಗಳಾದ ಡಿ.ವಿ. ಸದಾನಂದ ಗೌಡರು ಮತ್ತು ಸಂಸದರಾದ ಪಿ.ಸಿ.ಮೋಹನ್ ಅವರು ಯೋಗ ದಿನಾಚರಣೆಯ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.

ಉತ್ತರ ಪ್ರದೇಶದ ಮೊರಾದಾಬಾದ್ ನ 2000 ಪೊಲೀಸ್ ಅಧಿಕಾರಿಗಳು ಪೊಲೀಸ್ ಅಕಾಡೆಮಿಯಲ್ಲಿ ಯೋಗದ ಶಿಬಿರದಲ್ಲಿ ಪಾಲ್ಗೊಂಡರು. ಬೆಂಗಳೂರಿನಲ್ಲಿ 3500 ಸೇನೆಯ ಅಧಿಕಾರಿಗಳು ಮತ್ತು ಜವಾನರು ಯೋಗ ಮಾಡಿದರೆ, ಕೇರಳದಲ್ಲಿ ಐಎನ್ಎಸ್ ಗರುಡದ ಮೇಲೆ ಅಂತಾರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಿದರು.

ಕೇವಲ ಸುರಕ್ಷಾ ಪಡೆಗಳಲ್ಲದೆ, ಕೈದಿಗಳೂ ಯೋಗದ ದಿನಾಚರಣೆಯಲ್ಲಿ ಪಾಲ್ಗೊಂಡರು. ಝಾರ್ಖಂಡ್ನಲ್ಲಿ 1000 ಕೈದಿಗಳು ಆರ್ಟ್ ಆಫ್ ಲಿವಿಂಗ್ ನ ಪ್ರಿಸನ್ ಸ್ಮಾರ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೇಶದ ಅನೇಕ ಕಾರಾಗೃಹಗಳಲ್ಲಿ ಯೋಗ ಮತ್ತು ಧ್ಯಾನದ ಶಿಬಿರಗಳನ್ನು ನಡೆಸಲಾಯಿತು. ಭಾರತದಲ್ಲಿ ಫ್ರೆಂಚ್ ನ ಕ್ರೀಡಾ ಸಲಕರಣೆಗಳ ಚಿಲ್ಲರೆ ವ್ಯಾಪಾರಿಯಾದ ಡೆಕತ್ಲಾನ್ ನೊಡನೆ, ಅವರ ಅಂಗಡಿಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಿದರು.

ಜಗತ್ತಿನ ಎಲ್ಲೆಡೆಯಲ್ಲಿ ಮಧ್ಯಕೊಲ್ಲಿ, ಯೂರೋಪ್, ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕ, ಮತ್ತಿನ್ನಿತರ ದೇಶಗಳಲ್ಲಿ ಅಂತಾರಾಷ್ಟ್ರೀಯ ದಿನಾಚರಣೆಯನ್ನು ವೈಭವಯುತವಾಗಿ ನಡೆಸಲಾಯಿತು. ಆಮ್ಸ್ಟರ್ಡ್ಯಾಮ್ ನಲ್ಲಿ 3000 ಜನರಿಗಿಂತಲೂ ಹೆಚ್ಚು ಜನ 17ನೆಯ ಜೂನ್ ರಂದು ಗುರುದೇವರ ಶಿಬಿರದಲ್ಲಿ ಭಾಗವಹಿಸಿದರು.

English summary
Sri Sri Ravi Shankar led the European Parliament through a guided Yoga and Meditation session to mark the 4th International Day of Yoga. He was joined by India's Minister of External Affairs, Sushma Swaraj, and Members of European Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X