ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿನ್ಲೆಂಡ್‌ನ ಭಾರತದ ಮುಂದಿನ ರಾಯಭಾರಿಯಾಗಿ ರವೀಶ್ ಕುಮಾರ್ ನೇಮಕ

|
Google Oneindia Kannada News

ನವದೆಹಲಿ, ಜೂನ್ 3: ಫಿನ್ಲೆಂಡಿನ ಭಾರತದ ಮುಂದಿನ ರಾಯಭಾರಿಯಾಗಿ ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ರವೀಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ರವೀಶ್ ಕುಮಾರ್ ಎಂಇಎ ವಕ್ತಾರರಾಗುವ ಮೊದಲು ಫ್ರಾಂಕ್‌ಫರ್ಟ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.ತಮ್ಮ ವೃತ್ತಿಜೀವನವನ್ನು ಜಕಾರ್ತಾದ ಇಂಡಿಯನ್ ಮಿಷನ್‌ನಲ್ಲಿ ಪ್ರಾರಂಭಿಸಿದ್ದ ಅವರು ನಂತರ ಥಿಂಪು ಮತ್ತು ಲಂಡನ್‌ನಲ್ಲಿ ಸಹ ಸೇವೆ ಸಲ್ಲಿಸಿದ್ದರು.

ಅಮೆರಿಕಕ್ಕೆ ಭಾರತದ ನೂತನ ರಾಯಭಾರಿ ತರಣ್‌ಜಿತ್ ಸಂಧುಅಮೆರಿಕಕ್ಕೆ ಭಾರತದ ನೂತನ ರಾಯಭಾರಿ ತರಣ್‌ಜಿತ್ ಸಂಧು

1995 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದ ರವೀಶ್ ರವೀಶ್ ಕುಮಾರ್ ಅವರು ಜುಲೈ 2017 ರಿಂದ 2020 ರ ಏಪ್ರಿಲ್ ವರೆಗೆ ಎಂಇಎ ವಕ್ತಾರರಾಗಿ ಸೇವೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಅವರು ಬಾಲಕೋಟ್ ದಾಳಿ,, ಜಮ್ಮು ಮತ್ತು ಕಾಶ್ಮೀರದ ಕೇಂದ್ರಡಳಿತ ಪ್ರದೇಶ ಘೋಷಣೆ ಹಲವಾರು ಸೂಕ್ಷ್ಮ ವಿಷಯಗಳ ಬಗ್ಗೆ ಭಾರತದ ನಿಲುವನ್ನು ಚತುರತೆಯಿಂದ ವ್ಯಕ್ತಪಡಿಸಿದ್ದರು.

Raveesh Kumar Appointed Indias Next Ambassador To Finland

ಜಕಾರ್ತಾದ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಅವರು ಆಗಸ್ಟ್ 2013 ರಿಂದ ಜುಲೈ 2017 ರವರೆಗೆ ಫ್ರಾಂಕ್‌ಫರ್ಟ್‌ನಲ್ಲಿ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡರು.
ಸುಮಾರು 25 ವರ್ಷಗಳ ವೃತ್ತಿಜೀವನದಲ್ಲಿ, ರವೀಶ್ ಕುಮಾರ್ ದೆಹಲಿಯ ಎಂಇಎ ಕೇಂದ್ರ ಕಚೇರಿಯಲ್ಲಿದ್ದ ವೇಳೆ ಪೂರ್ವ ಏಷ್ಯಾದ ಮರ್ಜಿಯನ್ನೂ ನೋಡಿಕೊಂಡಿದ್ದರು.

English summary
Seasoned diplomat and former spokesperson of the External Affairs Ministry Raveesh Kumar has been appointed as India's next Ambassador to Finland, the government announced today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X