ಇಸ್ತಾನ್ಬುಲ್: ಅಪರೂಪದ ಜಪಾನೀಸ್ ವಿಸ್ಕಿ ಬರೋಬ್ಬರಿ 4.14 ಕೋಟಿ ರೂ.ಗೆ ಮಾರಾಟ
ಇಸ್ತಾನ್ಬುಲ್ ವಿಮಾನ ನಿಲ್ದಾಣದಲ್ಲಿ ಅಪರೂಪದ ಜಪಾನೀಸ್ ವಿಸ್ಕಿ ಬರೋಬ್ಬರು 4.14 ಕೋಟಿ ರೂ.ಗೆ ಮಾರಾಟವಾಗಿದ್ದು, ಎಲ್ಲರಲ್ಲೂ ಆಶ್ಚರ್ಯ ಮೂಡಿದೆ.
ಇಸ್ತಾನ್ಬುಲ್ನ ಡ್ಯೂಟೊ ಫ್ರೀ ಸ್ಟೋರ್ನಲ್ಲಿದ್ದ ಅಪರೂಪದ ಸಿಂಗಲ್ ಮಾಲ್ಟ್ ಜಪಾನೀಸ್ ವಿಸ್ಕಿಯನ್ನು 4.14 ಕೋಟಿ ರೂಗೆ ಮಾರಾಟ ಮಾಡಲಾಗಿದೆ. ಇದು ಅತ್ಯಂತ ಸೀಮಿತವಾದ 55 ವರ್ಷ ಹಳೆಯ ಯಮಝಕಿ ಎಂದು ಹೇಳಲಾಗಿದೆ.
ಇದು 2021ರ ಡಿಸೆಂಬರ್ನಲ್ಲಿ ಇಸ್ತಾನ್ಬುಲ್ನ ಯುನಿಫ್ರೀ ಡ್ಯೂಟಿ ಫ್ರೀ ಮಳಿಗೆಗಳಲ್ಲಿ ಮಾರಾಟವಾಗಿದೆ ಎಂದು ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನನ್ನ ಮ್ಯಾಗಜಿನ್ ಏರ್ಪೋರ್ಟ್ ವರ್ಲ್ಡ್ ವರದಿ ಮಾಡಿದೆ.
ಮದ್ಯವು ಸೀಮಿತವಾಗಿದ್ದ ಕಾರಣ ಬಿಡ್ಗಳನ್ನು ಆಹ್ವಾನಿಸಲಾಗಿತ್ತು, ಎಂಟು ಆಸಕ್ತ ಗ್ರಾಹಕರು ಬಿಡ್ಡಿಂಗ್ನಲ್ಲಿ ಪಾಲ್ಗೊಂಡಿದ್ದರು ಅಂತಿಮವಾಗಿ ಚೀನಾದ ಗ್ರಾಹಕರೊಬ್ಬರು ಬಿಡ್ ಅನ್ನು ತನ್ನದಾಗಿಸಿಕೊಂಡಿದ್ದಾರೆ.
ಯುನಿಫ್ರೀ ಡ್ಯೂಟಿ ಫ್ರೀ ಸಿಇಒ ಅಲಿ ಸೆನ್ಹರ್ ಮಾತನಾಡಿ'' ನಮ್ಮ ಅಂಗಡಿಯಲ್ಲಿ ಈ ದಾಖಲೆಯ ಮಾರಾಟ ನಡೆದಿರುವುದು ನಮಗೇ ರೋಮಾಂಚನ ಉಂಟು ಮಾಡಿದೆ'' ಎಂದು ಹೇಳಿದ್ದಾರೆ.
ಜಪಾನ್ನಲ್ಲಿ 2020ರಲ್ಲಿ 100 ಬಾಟಲಿಗಳನ್ನು ಬಿಡುಗಡೆ ಮಾಡಲಾಗಿತ್ತು, ಇತಿಹಾಸದಲ್ಲೇ ಅತ್ಯಂತ ಹಳೆಯ ವಿಸ್ಕಿ ಇದಾಗಿದೆ, ಇದಲ್ಲಿ ಮೂರು ರೀತಿಯ ಸಿಂಗಲ್ ಮಾಲ್ಟ್ ಮಿಶ್ರಣವಿದೆ. 1960ರ ದಶಕದ ವಿಸ್ಕಿ ಇದಾಗಿದೆ. ಶಿಂಜಿರೋ ಟೋರಿಯ ಮೇಲ್ವಿಚಾರಣೆಯಲ್ಲಿ ಬಟ್ಟಿ ಇಳಿಸಲಾಗಿದೆ. ಎಂದಿಗೂ ಪ್ರಯಾಣಿಕರಿಗೆ ಉತ್ತಮ ಅಣುಭವಗಳನ್ನು ನೀಡಲು ನಾವು ಪ್ರಯತಣಿಸುತ್ತೇವೆ ಎಂದು ಹೇಳಿದ್ದಾರೆ.