ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾಗೆ ರಾನಿಲ್‌ ವಿಕ್ರಮಸಿಂಘೆ ನೂತನ ಅಧ್ಯಕ್ಷ

|
Google Oneindia Kannada News

ಕೊಲಂಬೋ,ಜುಲೈ.20: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ, ರಾಜಕೀಯ ಕ್ಷೋಭೆಯ ನಡುವೆ ಬುಧವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಗೆಲುವು ಸಾಧಿಸಿದ್ದಾರೆ.

ಶ್ರೀಲಂಕಾ ಸಂಸತ್ತಿನಲ್ಲಿ ಮತದಾನದ ನಂತರ ರಾನಿಲ್ ವಿಕ್ರಮಸಿಂಘೆ ಅವರು ಹೊಸ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು 134 ಮತಗಳನ್ನು ಪಡೆದರು. ಎಸ್‌ಎಲ್‌ಪಿಪಿ ಸಂಸದ ಡಳಸ್ ಅಳಗಪೆರುಮ 82 ಮತಗಳನ್ನು ಪಡೆದರೆ, ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ನಾಯಕ ಅನುರ ಕುಮಾರ ಡಿಸ್ಸನಾಯಕೆ ಕೇವಲ ಮೂರು ಮತಗಳನ್ನು ಪಡೆದರು. ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರೇ ಗೆಲುವು ಸಾಧಿಸಿದರೂ ಭಾರತದ ಸಹಾಯ ಮುಂದುವರಿಯಲಿ ಎಂದು ಸಜಿತ್ ಪ್ರೇಮದಾಸ ಇದೇ ವೇಳೆ ಮನವಿ ಮಾಡಿದ್ದರು.

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಕಣದಲ್ಲಿ ಮೂವರುಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಕಣದಲ್ಲಿ ಮೂವರು

ಆರು ಬಾರಿ ದ್ವೀಪ ರಾಷ್ಟ್ರ ಶ್ರೀಲಂಕಾದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ವಿಕ್ರಮಸಿಂಘೆ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಅಗ್ರಗಣ್ಯರಾಗಿದ್ದರು. ಅವರನ್ನು ಸದನದ ಸದಸ್ಯರು ರಹಸ್ಯ ಮತದಾನದ ಮೂಲಕ ಮತ ಚಲಾಯಿಸಿ ಆಯ್ಕೆ ಮಾಡಿದರು. ಭಾರಿ ಆರ್ಥಿಕ ಹಿಂಜರಿತದಿಂದ ಉದ್ರೇಕಗೊಂಡ ಪ್ರತಿಭಟನಾಕಾರರು ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಅರಮನೆಗೆ ನುಗ್ಗಿ ದಾಂಧಲೆ ನಡೆಸಿದ ನಂತರ ಅವರು ವಿದೇಶಕ್ಕೆ ಪಲಾಯನ ಮಾಡಿದರು. ಬಳಿಕ ವಿಕ್ರಮಸಿಂಘೆ ಅವರನ್ನು ಶ್ರೀಲಂಕಾದ ಹಾಂಗಾಮಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು.

 ಡಳಸ್ ಅಳಗಪೆರುಮಗೆ ಬೆಂಬಲ

ಡಳಸ್ ಅಳಗಪೆರುಮಗೆ ಬೆಂಬಲ

ಈ ಹಿಂದೆ ವಿಕ್ರಮಸಿಂಘೆ ಅವರನ್ನು ಕಣದಲ್ಲಿರುವ ಉನ್ನತ ಅಭ್ಯರ್ಥಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಆದಾಗ್ಯೂ, ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಮಂಗಳವಾರ ಅಧ್ಯಕ್ಷೀಯ ಸ್ಪರ್ಧೆಯಿಂದ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡ ನಂತರ ಉನ್ನತ ಹುದ್ದೆಗೆ ಪ್ರತಿಸ್ಪರ್ಧಿ ಅಭ್ಯರ್ಥಿ ಡಳಸ್ ಅಳಗಪೆರುಮ ಅವರನ್ನು ಬೆಂಬಲಿಸುವುದಾಗಿ ಹೇಳಿದ ನಂತರ ಆಟವೇ ಬದಲಾಯಿತು.

Breaking: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ, ಬಿಗಿ ಭದ್ರತೆBreaking: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ, ಬಿಗಿ ಭದ್ರತೆ

 ಜನರ ಒಳಿತಿಗಾಗಿ ಉಮೇದುವಾರಿಕೆ ಹಿಂತೆಗೆತ: ಪ್ರೇಮದಾಸ

ಜನರ ಒಳಿತಿಗಾಗಿ ಉಮೇದುವಾರಿಕೆ ಹಿಂತೆಗೆತ: ಪ್ರೇಮದಾಸ

ಬಳಿಕ ಅಧ್ಯಕ್ಷೀಯ ಚುನಾವಣೆಗೆ ಕಣದಲ್ಲಿರುವ ಶ್ರೀಲಂಕಾ ಪೊದುಜನ ಪೆರಮುನಾ (ಎಸ್‌ಎಲ್‌ಪಿಪಿ) ಪಕ್ಷದ ಸಂಸದ ಅಳಗಪೆರುಮ ಅವರನ್ನು ಸಮಗಿ ಜನ ಬಲವೇಗಯ ಮತ್ತು ಅದರ ಮೈತ್ರಿ ಪಕ್ಷದ ಪಾಲುದಾರರು ಬೆಂಬಲಿಸುತ್ತಾರೆ. ನಾನು ಪ್ರೀತಿಸುವ ನನ್ನ ದೇಶ ಮತ್ತು ನಾನು ಪ್ರೀತಿಸುವ ಜನರ ಒಳಿತಿಗಾಗಿ ನಾನು ಈ ಮೂಲಕ ಅಧ್ಯಕ್ಷ ಸ್ಥಾನಕ್ಕೆ ನನ್ನ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ಸಾಮಗಿ ಜನ ಬಲವೇಗ ಮತ್ತು ನಮ್ಮ ಮೈತ್ರಿ ಮತ್ತು ನಮ್ಮ ವಿರೋಧ ಪಕ್ಷದ ಪಾಲುದಾರರು ಡಳಸ್ ಅಳಗಪೆರುಮ ಅವರನ್ನು ಗೆಲ್ಲಿಸಲು ಶ್ರಮಿಸುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಟ್ವಿಟರ್‌ನಲ್ಲಿ ತಿಳಿಸಿದರು.

 ಕರೆನ್ಸಿಯ ಶೇಕಡಾ 80ರಷ್ಟು ಕುಸಿತ

ಕರೆನ್ಸಿಯ ಶೇಕಡಾ 80ರಷ್ಟು ಕುಸಿತ

ಇದಕ್ಕೂ ಮೊದಲು ಡಳಸ್ ಅಳಗಪೆರುಮ ಅವರು ತಮ್ಮ ಪ್ರಧಾನಿ ಅಭ್ಯರ್ಥಿ ಸಜಿತ್ ಪ್ರೇಮದಾಸ ಅವರೊಂದಿಗೆ ಅಧ್ಯಕ್ಷೀಯ ಚುನಾವಣೆ ಪ್ರಚಾರಕ್ಕಾಗಿ ತಮಿಳು ಸಂಸದರನ್ನು ಪ್ರತಿಸ್ಪರ್ಧಿ ಅಭ್ಯರ್ಥಿ ಡಳಸ್‌ಗೆ ಮತ ಹಾಕುವಂತೆ ಮನವೊಲಿಸಿದರು. ಉತ್ಪಾದನೆಗೆ ಮೂಲ ಒಳಹರಿವಿನ ಅಲಭ್ಯತೆ, ಮಾರ್ಚ್ 2022ರಿಂದ ಶ್ರೀಲಂಕಾ ಕರೆನ್ಸಿಯ ಶೇಕಡಾ 80ರಷ್ಟು ಕುಸಿತ, ವಿದೇಶಿ ಮೀಸಲು ಕೊರತೆ ಮತ್ತು ಅದರ ಅಂತಾರಾಷ್ಟ್ರೀಯ ಸಾಲದ ಬಾಧ್ಯತೆಗಳನ್ನು ಪೂರೈಸುವಲ್ಲಿ ದೇಶದ ವಿಫಲತೆಯಿಂದಾಗಿ ಶ್ರೀಲಂಕಾದ ಆರ್ಥಿಕತೆಯು ಭಾರೀ ಹಿನ್ನಡೆಗೆ ಸಿಲಿಕಿತು.

 ಪ್ರಯಾಣಕ್ಕಾಗಿ ಬೈಸಿಕಲ್‌ಗಳಿಗೆ ಮೊರೆ

ಪ್ರಯಾಣಕ್ಕಾಗಿ ಬೈಸಿಕಲ್‌ಗಳಿಗೆ ಮೊರೆ

ಇಂಧನ ಕೊರತೆಯ ಪ್ರತಿದಿನ ನೂರಾರು ಶ್ರೀಲಂಕಾದ ಪ್ರಜೆಗಳು ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದಾದ್ಯಂತ ಪೆಟ್ರೋಲ್ ಪಂಪ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಹೆಚ್ಚಿನ ಸಂಖ್ಯೆಯ ಜನರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಬೈಸಿಕಲ್‌ಗಳಿಗೆ ಮೊರೆ ಹೋಗಿ ತಮ್ಮ ಕಾರುಗಳು ಮತ್ತು ಮೋಟಾರ್‌ಸೈಕಲ್‌ಗಳನ್ನು ತ್ಯಜಿಸಿದರು. ಶ್ರೀಲಂಕಾದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು ಇಂಧನದಂತಹ ಅಗತ್ಯ ವಸ್ತುಗಳ ತೀವ್ರ ಕೊರತೆಯನ್ನು ಹುಟ್ಟುಹಾಕಿತ್ತು.

English summary
Sri Lanka's Interim President Ranil Wickremesinghe has won the presidential election held on Wednesday amid economic and political unrest in the island nation of Sri Lanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X