ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವಿತ್ರ ರಂಜಾನ್ ತಿಂಗಳಿನಲ್ಲೂ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ

|
Google Oneindia Kannada News

ರಿಯಾದ್, ಏಪ್ರಿಲ್.21: ಕೊರೊನಾ ವೈರಸ್ ಸೋಂಕಿಗೆ ವಿಶ್ವಕ್ಕೆ ವಿಶ್ವವೇ ವಿಲವಿಲ ನರಳುತ್ತಿದೆ. ಪವಿತ್ರ ರಂಜಾನ್ ಆಚರಣೆ ಆರಂಭದ ಹೊಸ್ತಿಲಲ್ಲಿ ಸೌದಿ ಅರೇಬಿಯಾದ ಎರಡು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ವಿಧಿಸಿದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ.

ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಗ್ರ್ಯಾಂಡ್ ಮಸೀದಿ ಮತ್ತು ಪ್ರವಾದಿ ಮಸೀದಿಗಳಲ್ಲಿ ಪ್ರಾರ್ಥನೆಗೆ ನಿರ್ಬಂಧವನ್ನು ವಿಧಿಸಲಾಗಿದೆ. ಎರಡು ಪವಿತ್ರ ಮಸೀದಿಗಳ ಅಧ್ಯಕ್ಷ ಶೇಕ್ ಡಾ.ಅಬ್ದುಲ್ ರೆಹಮಾನ್ ಬಿನ್ ಅಬ್ದುಲ್ ಅಜೀಜ್ ಸುದೈಸ್ ತಿಳಿಸಿದ್ದಾರೆ.

ಸೌದಿ ರಾಜಮನೆತನದ ಸುಮಾರು 150 ಮಂದಿಗೆ ಕೊರೊನಾ ಸೋಂಕುಸೌದಿ ರಾಜಮನೆತನದ ಸುಮಾರು 150 ಮಂದಿಗೆ ಕೊರೊನಾ ಸೋಂಕು

ಮೆಕ್ಕಾದ ಮಸಿದ್ ಅಲ್-ಹರಾಮ್ ನಲ್ಲಿ ಬೆಳಗಿನ ಮತ್ತು ಸಂಜೆ ಪ್ರಾರ್ಥನೆ ನಡೆಯುತ್ತದೆಯಾದರೂ ಮಸೀದಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ರಂಜಾನ್ ತಿಂಗಳು ಮುಸ್ಲಿಮರ ಪಾಲಿನ ಪವಿತ್ರ ತಿಂಗಳಾಗಿದ್ದು, ಉಪವಾಸ, ದಾನ, ಧ್ಯಾನವನ್ನು ವಿಶ್ವದಾದ್ಯಂತ ನಡೆಸಿಕೊಂಡು ಬರಲಾಗುತ್ತಿತ್ತು.

Ramadan: Prayers Suspension Extends In Two Holy Mosques Of Saudi Arabia

ತಿಂಗಳಪೂರ್ತಿ ಮುಸ್ಲಿಂ ಬಾಂಧವರು ಉಪವಾಸ:

ರಂಜಾನ್ ಹಬ್ಬವು ಮುಸ್ಲಿಂ ಬಾಂಧವರ ಪಾಲಿಗೆ ಪವಿತ್ರ ಹಬ್ಬವಾಗಿದ್ದು, ಒಂದು ತಿಂಗಳ ಅವಧಿಯಲ್ಲಿ ಬಹುತೇಕ ಮುಸ್ಲಿಮರು ಉಪವಾಸವನ್ನು ಮಾಡುತ್ತಾರೆ. ಬೆಳಗಿನ ಜಾವದಲ್ಲಿ ಉಪಹಾರ ಸೇವಿಸಿ ಪ್ರಾರ್ಥನೆ ಮಾಡಿದ ನಂತರ ದಿನಪೂರ್ತಿ ನಿರಾಹಾರವಾಗಿ ಇರುತ್ತಾರೆ. ಒಂದು ಗುಟಕು ನೀರು ಕುಡಿಯದೇ ಸಂಜೆ 7 ಗಂಟೆವರೆಗೂ ಉಪವಾಸ ಮಾಡುತ್ತಾರೆ. ನಂತರ ಸಂಜೆ ಧ್ಯಾನದ ನಂತರದಲ್ಲಿ ಊಟವನ್ನು ಮಾಡುತ್ತಾರೆ.

ಕೊರೊನಾ ವೈರಸ್ ಹರಡುವಿಕೆ ಆತಂಕದಲ್ಲಿ ಕಳೆದ ತಿಂಗಳು ಸೌದಿ ಅರೇಬಿಯಾ ಸರ್ಕಾರವು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವುದಕ್ಕೆ ನಿರ್ಬಂಧವನ್ನು ವಿಧಿಸಿತ್ತು. ಕಳೆದ ವಾರವಷ್ಟೇ ಸೌದಿ ಅರೇಬಿಯಾದ ಮುಫ್ತಿ ಶೇಕ್ ಅಬ್ದುಲ್ ಅಜೀಜ್ ಅಲ್ ಶೇಕ್ ಕೂಡಾ ರಂಜಾನ್ ಅವಧಿಯಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಮನೆಗಳಲ್ಲಿಯೇ ಪ್ರಾರ್ಥನೆಗೆ ಮನವಿ ಮಾಡಿಕೊಂಡಿದ್ದರು.

English summary
Ramadan: Prayers Suspension Extends In Two Holy Mosques Of Saudi Arabia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X