ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾದ್ಯಂತ ಪವಿತ್ರ ರಂಜಾನ್‌ ಆಚರಣೆ: ಚಿತ್ರಗಳಲ್ಲಿ ನೋಡಿ

By Nayana
|
Google Oneindia Kannada News

ಬೆಂಗಳೂರು, ಜೂನ್ 15: ವಿಶ್ವಾದ್ಯಂತ ಶುಕ್ರವಾರ ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್‌ನ್ನು ಆಚರಿಸಲಾಯಿತು. ಧಾರ್ಮಿಕವಾಗಿ ಮುಸ್ಲಿಮನಾದವರು ರಂಜಾನ್ ತಿಂಗಳು ಪೂರ್ತಿ 30 ದಿನಗಳು ಉಪವಾಸ ವ್ರತವನ್ನು ಆಚರಿಸಬೇಕಾದದ್ದು ಕಡ್ಡಾಯವಾಗಿರುತ್ತದೆ. ರಂಜಾನ್ ತಿಂಗಳನ್ನು ಕೆಡಕುಗಳಿಂದ ದೂರವಿಟ್ಟು ಮನುಷ್ಯನನ್ನು ಒಳಿತಿನ ಹಾದಿಗೆ ತರುವಂತಹ ಮಾಸವೆಂದು ಪರಿಗಣಿಸಲಾಗುತ್ತದೆ.

ಮನುಷ್ಯನ ಬಾಳಿನಲ್ಲಿ ಹಲವಾರು ದೌರ್ಬಲ್ಯಗಳು ಎದುರಾಗುವುದು ಸಹಜ ಅವುಗಳಲ್ಲಿ ಮುಖ್ಯವಾದದು ದ್ವೇಷ, ಅಸೂಯೆ, ಅಹಂಕಾರ, ದ್ರೋಹ, ವಂಚನೆ, ಪರದೂಷಣೆ ಮುಖ್ಯವಾದವು, ಇವುಗಳಿಗೆ ಸ್ವಯೇಚ್ಛೆಯಿಂದ ಕಡಿವಾಣ ಹಾಕಿಕೊಳ್ಳದಿದ್ದಲ್ಲಿ ಮನುಷ್ಯನನ್ನು ಪಥ ಬ್ರಷ್ಟನನ್ನಾಗಿ ಮಾಡುತ್ತದೆ. ಈ ಪರಿಸ್ಥಿತಿ ಮಾನವ ಸೃಷ್ಟಿಯೊಂದಿಗೆ ತಳುಕುಹಾಕಿಕೊಂಡಿದೆ.

ಇಸ್ಲಾಂನ ಪವಿತ್ರ ರಮ್ಜಾನ್ ಮಾಸಕ್ಕೆ ಮೆತ್ತಿದ ರಕ್ತ ಒರೆಸುವುದು ಹೇಗೆ?ಇಸ್ಲಾಂನ ಪವಿತ್ರ ರಮ್ಜಾನ್ ಮಾಸಕ್ಕೆ ಮೆತ್ತಿದ ರಕ್ತ ಒರೆಸುವುದು ಹೇಗೆ?

ಗುರುವಾರ ರಾತ್ರಿ ಚಂದ್ರನನ್ನು ನೋಡಿದ ನಂತರ ರಂಜಾನ್‌ಗೆ ಚಾಲನೆ ದೊರೆಯಿತು. ಇನ್ನು ಕೇರಳಾದ್ಯಂತ ಪವಿತ್ರ ರಂಜಾನ್ ಹಬ್ಬವನ್ನು ಶುಕ್ರವಾರ ಆಚರಿಸಲಾಯಿತು ಇನ್ನು ಕರ್ನಾಟಕದಲ್ಲಿ ಶನಿವಾರ ರಂಜಾನ್ ಆಚರಿಸಲಾಗುತ್ತದೆ, ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಶಾವಿಗೆಯನ್ನು ಕೊಳ್ಳುವುದರಲ್ಲಿ ಮುಸ್ಲಿಮರು ನಿರತರಾಗಿದ್ದರು. ಇನ್ನು ಕೌಲಾಲಂಪುರದಲ್ಲಿ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ?ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ?

ಇನ್ನು ಮೈಸೂರು, ಮಂಗಳೂರು, ಕರಾವಳಿ ಭಾಗದಲ್ಲಿ ಸತತ ಮೂರುದಿನಮಗಳ ಕಾಲ ಭಾರಿ ಮಳೆಯಾಗಿತ್ತು, ಮೈಸೂರಿನ ಕಬಿನಿ ಜಲಾಶಯದಲ್ಲಿ ಸೇತುವೆ ಮುಳುಗಿದೆ. ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಈಗಾಗಲೇ ಕಬಿನಿಯಿಂದ 2.5 ಟಿಎಂಸಿ ನೀರು ಹರಿಸಲಾಗಿದೆ. ಜೂನ್‌ನಲ್ಲಿ 10ಟಿಎಂಸಿ ನೀಡು ತಮಿಳುನಾಡಿಗೆ ಬಿಡಬೇಕಾಗಿದೆ. ಆ ಕಬಿನಿ ಜಲಾಶಯದ ಎದುರು ರೈತರು ಎತ್ತುಗಳನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ನೀವು ವೀಕ್ಷಿಸಬಹುದು.

ರಂಜಾನ್ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಶಾವಿಗೆ ಮಾರಾಟ ಬಲು ಜೋರು

ರಂಜಾನ್ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಶಾವಿಗೆ ಮಾರಾಟ ಬಲು ಜೋರು

ಈದ್ ಅಲ್‌ಫಿತರ್ ಅಂಗವಾಗಿ ಗುವಾಹಟಿಯ ಮಾರುಕಟ್ಟೆಯಲ್ಲಿ ಶಾವಿಗೆ ಮಾರಾಟ ಭರ್ಜರಿಯಾಗಿತ್ತು, ಸರತಿಯಲ್ಲಿ ನಿಂತು ಶಾವಿಗೆ ಕೊಂಡರು.

ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ರಂಜಾನ್ ಹಬ್ಬದ ಅಂಗವಾಗಿ ಕೌಲಾಲಂಪುರದಲ್ಲಿ ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಚಂದ್ರನನ್ನು ನೋಡಿ ರಂಜಾನ್ ಹಬ್ಬಕ್ಕೆ ಚಾಲನೆ

ಚಂದ್ರನನ್ನು ನೋಡಿ ರಂಜಾನ್ ಹಬ್ಬಕ್ಕೆ ಚಾಲನೆ

ಚಂದ್ರನನ್ನು ಕಂಡು ನಂತ್ರ ರಂಜಾನ್‌ ಹಬ್ಬವನ್ನು ಆಚರಿಸಬಹುದಾಗಿದ್ದು, ಗುರುವಾರ ಚಂದ್ರನ ವೀಕ್ಷೆ ಮಾಡಿದ ಮುಸ್ಲಿಮರು ರಂಜಾನ್‌ ಹಬ್ಬವನ್ನು ಶುಕ್ರವಾರ ಆಚರಿಸಿದರು.

ಕಬಿನಿ ಜಲಾಶಯದ ದಂಡೆಯ ಮೇಲೆ ಎತ್ತಿನ ನಡಿಗೆ

ಕಬಿನಿ ಜಲಾಶಯದ ದಂಡೆಯ ಮೇಲೆ ಎತ್ತಿನ ನಡಿಗೆ

ಭಾರಿ ಮಳೆಯಿಂದಾಗಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಭರ್ತಿಯಾಗಿದೆ, ಜಲಾಶಯದ ಬಳಿ ರೈತರು ಎತ್ತುಗಳನ್ನು ಕಳೆದುಕೊಂಡು ಹೋಗುವ ದೃಶ್ಯವನ್ನು ನೀವು ನೋಡಬಹುದು.

English summary
Eid al-Fitr is "the feast of the breaking of the fast" that begins when the moon rises on the final day of Ramadan. About 1.6 billion Muslims across the world marked the festival this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X