ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧ, ಪ್ರಾದೇಶಿಕ ಭದ್ರತೆ ಕುರಿತು ಚರ್ಚೆ

|
Google Oneindia Kannada News

ಟೆಹ್ರಾನ್, ಸೆಪ್ಟೆಂಬರ್ 07: ಇರಾನ್ ರಕ್ಷಣಾ ಸಚಿವ ಅಮೀರ್ ಹತಾಮಿ ಹಾಗೂ ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟೆಹ್ರಾನ್‌ನಲ್ಲಿ ದ್ವಿಪಕ್ಷೀಯ ಸಹಕಾರ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದ್ದಾರೆ.

Recommended Video

Modi ವಿರುದ್ಧ ಸಿಡಿದೆದ್ದ Rahul Gandhi | Oneindia Kannada

ಮಸ್ಕೋದಲ್ಲಿ ಮೂರು ದಿನಗಳ ಕಾಲ ನಡೆದ ಶಾಂಘೈ ಕೋ-ಆಪರೇಷನ್ ಆರ್ಗನೈಸೇಷನ್ ಸಮಿತ್ ಮುಗಿಸಿ ರಾಜನಾಥ್ ಸಿಂಗ್ ಮಾಸ್ಕೋದಿಂದ ಹಿಂದಿರುಗುವಾಗ ಟೆಹ್ರಾನ್‌ಗೆ ಭೇಟಿ ನೀಡಿದ್ದರು.

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಕೊಡುವುದಿಲ್ಲ: ಭಾರತಕ್ಕೆ ರಷ್ಯಾ ಭರವಸೆಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಕೊಡುವುದಿಲ್ಲ: ಭಾರತಕ್ಕೆ ರಷ್ಯಾ ಭರವಸೆ

ಇರಾನಿಯನ್ ಸರ್ಕಾರವು ಭಾನುವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಎರಡು ದೇಶಗಳು ದ್ವಿಪಕ್ಷೀಯ ಸಹಕಾರ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದೆವು ಎಂದು ಮಾಹಿತಿ ನೀಡಿದ್ದಾರೆ.

Rajnath Singh Discusses Bilateral Ties, Regional Security With Iran In Meeting

ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಸೇರಿದಂತೆ ಪ್ರಾದೇಶಿಕ ಭದ್ರತಾ ವಿಷಯಗಳ ಬಗ್ಗೆ ಅಭಿಪ್ರಾಯವನ್ನು ವಿನಿಮಯ ಮಾಡಿಕೊಂಡಿದೆ.

ಇದೇ ಮೊದಲ ಬಾರಿಗೆ ಭಾರತೀಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಇರಾನ್‌ಗೆ ಭೇಟಿ ನೀಡಿದ್ದಾರೆ. ಮಾತುಕತೆಯಲ್ಲಿ ಕಾಶ್ಮೀರದ ಕುರಿತಾದ ಚೀನಾ ಹಾಗೂ ಭಾರತದ ಸಂಘರ್ಷದ ಕುರಿತು ಕೂಡ ಮಾತುಕತೆ ನಡೆಸಲಾಯಿತು. ದ್ವಿಪಕ್ಷೀಯ ಸಭೆ ಸೌಹಾರ್ಧಯುತವಾಗಿತ್ತು. ಉಭಯ ನಾಯಕರೂ ಭಾರತ ಮತ್ತು ಇರಾನ್ ನಡುವಿನ ಹಳೆಯ-ಸಾಂಸ್ಕೃತಿಕ, ಭಾಷಾ ಮತ್ತು ನಾಗರಿಕ ಸಂಬಂಧಗಳಿಗೆ ಒತ್ತು ನೀಡಿದರು ಎಂದು ಮೂಲಗಳು ತಿಳಿಸಿವೆ.

English summary
Defence Minister Rajnath Singh on Sunday said he had a “very fruitful” meeting with his Iranian counterpart Brigadier General Amir Hatami and discussed ways to bolster bilateral cooperation and exchanged views on regional security issues, including the situation in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X