ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜದೀಪ್ ಸರ್ದೇಸಾಯಿ ಮೇಲೆ ಹಲ್ಲೆ, ಟ್ವಿಟ್ಟರ್ ನಲ್ಲಿ ಗುಲ್ಲು!

By Mahesh
|
Google Oneindia Kannada News

ನ್ಯೂಯಾರ್ಕ್, ಸೆ.29: ಅತ್ತ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಲು ಎನ್ನಾರೈಗಳು ಉತ್ಸುಕರಾಗಿದ್ದರು. ಅಷ್ಟೇ ಕಾತುರಭರಿತರಾದ ಜನಸ್ತೋಮ ಹೊರಗಡೆ ನೆರೆದಿತ್ತು. ಯಾರಾದರೂ ಒಬ್ಬರು ಮೋದಿ ಎಂದರೆ ಸಾಕು ನೂರಾರು ಕೊರಳುಗಳು ಪುನರುಚ್ಚರಿಸುತ್ತಿದ್ದ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು ಅಭಿಪ್ರಾಯ ಸಂಗ್ರಹಣೆ ಮುಂದಾದಾಗ ಹಲ್ಲೆ ನಡೆದಿದೆ.

ಮೋದಿ ಅವರ ಅಭಿಮಾನಿಗಳಿಂದ ರಾಜ್ ದೀಪ್ ಗೆ ಥಳಿತ ಎಂದು ಹೆಡ್ ಲೈನ್ ಟುಡೇ ಅಬ್ಬರದ ಸುದ್ದಿ ಮಾಡಿತು. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಮೋದಿ ಅಭಿಮಾನಿಗಳ ಅಸಲಿ ಮುಖ ಅನಾವರಣ ಎನ್ನಲಾಯಿತು. ರಾಜದೀಪ್ ಅವರು ಘಟನೆ ನಂತರ ಪ್ರತಿಕ್ರಿಯಿಸಿದ ವಿಡಿಯೋ ಪ್ರಸಾರವಾಯಿತು.[ನರೇಂದ್ರ ಮೋದಿ ಮಾಂತ್ರಿಕ ಭಾಷಣ]

ಮೋದಿ ಅವರ ಅಮೆರಿಕ ಪ್ರವಾಸದ ವರದಿಗೆ ತೆರಳಿರುವ ಹೆಡ್ ಲೈನ್ಸ್ ಟುಡೇ ಇಂಗ್ಲೀಷ್ ನ್ಯೂಸ್ ಚಾನೆಲ್ ನ ರಾಜ್ ದೀಪ್ ಸರ್ದೇಸಾಯಿ ಅವರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಅನೇಕರು ತೀವ್ರವಾಗಿ ಖಂಡಿಸಿದ್ದಾರೆ. ಕೆಲವರು ಇದು ಪ್ರಚಾರ ತಂತ್ರ.ಮೋದಿ ಅಭಿಮಾನಿಗಳನ್ನು ಬೇಕಂತಲೇ ರಾಜದೀಪ್ ಅವರು ಕೆರಳಿಸಿದರು. ಹೀಗಾಗಿ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ ಎಂದಿದ್ದಾರೆ. ಘಟನೆಯ ಸತ್ಯಾಸತ್ಯತೆ ಬಗ್ಗೆ ಒರೆ ಹಚ್ಚಲು ಹೋಗದೆ ಘಟನೆಯನ್ನು ಖಂಡಿಸಿ ರಾಜದೀಪ್ ಪರ ನಿಂತವರು ಟ್ವಿಟ್ಟರ್ ನಲ್ಲಿ ಕಿಚ್ಚು ಹಚ್ಚಿದರು. ಈ ಬಗ್ಗೆ ಮುಂದೆ ಓದಿ

IStandWithRajdeep ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

IStandWithRajdeep ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

IStandWithRajdeep ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ. ಒಂದು ಅವಧಿಯಲ್ಲಿ ModiAtMadison ಹ್ಯಾಶ್ ಟ್ಯಾಗ್ ಅನ್ನು ಮೀರಿಸಿತ್ತು. ಇದರ ಜೊತೆಗೆ #RajdeepSlapped ಎಂಬ ಟ್ವಿಟ್ಟರ್ ಟ್ಯಾಗ್ ಕೂಡಾ ಚಾಲ್ತಿಯಲ್ಲಿದೆ. ಒಟ್ಟಾರೆ, ಪತ್ರಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಲಾಗಿದೆ. ಅದರೆ, ರಾಜದೀಪ್ ಮಾಡಿದ್ದು ನಾಟಕ ಎಂದು ಹಲ್ಲೆ ಪ್ರಕರಣದ ಬಗ್ಗೆ ಛೀಮಾರಿ ಹಾಕಲಾಗಿದೆ.

ಒಳ್ಳೆ ಕೌಶಲ್ಯ ಹೊಂದಿರುವ ರಾಜದೀಪ

ಒಳ್ಳೆ ಕೌಶಲ್ಯ ಹೊಂದಿರುವ ರಾಜದೀಪ ಇಂಡಿಯನ್ ಆರ್ಮಿಗೆ ಒಳ್ಳೆ ಆಯ್ಕೆ

ಘಟನೆ ಬಗ್ಗೆ ರಾಜದೀಪ್ ಪ್ರತಿಕ್ರಿಯೆ ಹೀಗಿತ್ತು

ಹಲ್ಲೆ ಪ್ರಕರಣ ಬಗ್ಗೆ ರಾಜದೀಪ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪತ್ರಕರ್ತ ರಾಜದೀಪ ಮೇಲೆ ಹಲ್ಲೆ

ಪತ್ರಕರ್ತ ರಾಜದೀಪ ಮೇಲೆ ಹಲ್ಲೆ ವಿಡಿಯೋ

rn

ರಾಜ್ ದೀಪ್ ಪ್ರತಿಕ್ರಿಯೆ ವಿಡಿಯೋ

ರಾಜ್ ದೀಪ್ ಪ್ರತಿಕ್ರಿಯೆ ವಿಡಿಯೋ ನೋಡಿ

ಇದು ಪತ್ರಿಕಾ ಸ್ವಾತಂತ್ರ್ಯದ ಹರಣ

ಪತ್ರಕರ್ತ ರಾಜದೀಪ ಅವರಿಗೆ ಬಿಜೆಪಿ ಕಾರ್ಯಕರ್ತರಿಂದ ಗೂಸಾ ಇದು ಪತ್ರಿಕಾ ಸ್ವಾತಂತ್ರ್ಯದ ಹರಣ

ಹುಚ್ಚು ಹುಚ್ಚು ಪ್ರಶ್ನೆ ಕೇಳಿದ ರಾಜ್ ದೀಪ್

ಹುಚ್ಚು ಹುಚ್ಚು ಪ್ರಶ್ನೆ ಕೇಳಿದ ರಾಜ್ ದೀಪ್ ಗೆ ಪೆಟ್ಟು ಕೊಟ್ಟಿದ್ದು ಸರಿ.

ನೈಜ ಕುಸ್ತಿಪಟುಗೆ ಚಿನ್ನ, ಫೇಕ್ ಪಟುಗೆ ಗುನ್ನ

ಏಷ್ಯನ್ ಗೇಮ್ಸ್ ನಲ್ಲಿ ನೈಜ ಕುಸ್ತಿಪಟುಗೆ ಚಿನ್ನ, ಫೇಕ್ ಕುಸ್ತಿಪಟು ರಾಜದೀಪ್ ಗೆ ಗುನ್ನ

English summary
Senior journalist Rajdeep Sardesai of Headlines Today news channel was heckled and roughed up, allegedly by a band of supporters of Indian Prime Minister Narendra Modi, outside the Madison Square Garden venue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X