ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಲಾಸ ಯಾತ್ರೆಯಲ್ಲಿ ಶಿವಭಕ್ತ ರಾಹುಲ್ ಗಾಂಧಿ: ವಿಡಿಯೋ, ಚಿತ್ರ

|
Google Oneindia Kannada News

Recommended Video

ರಾಹುಲ್ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆಯ ವಿಡಿಯೋ ಫೋಟೋಗಳು ವೈರಲ್ | Oneindia Kannada

ಕಠ್ಮಂಡು, ಸೆಪ್ಟೆಂಬರ್ 07: ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಗಸ್ಟ್ 31 ರಂದು ಕೈಲಾಸ ಮಾನಸ ಸರೋವರ ಯಾತ್ರೆ ಆರಂಭಿಸಿರುವ ರಾಹುಲ್ ಗಾಂಧಿ, ತಮ್ಮ ಯಾತ್ರೆಯ ಅನುಭವಗಳನ್ನು ದಿನೇ ದಿನೇ ಟ್ವಿಟ್ಟರ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ಮಾನಸ ಸರೋವರ ಕಂಡು ಟ್ವೀಟ್ ಮಾಡಿದ ರಾಹುಲ್, ಕಾಲೆಳೆದ ಬಿಜೆಪಿಮಾನಸ ಸರೋವರ ಕಂಡು ಟ್ವೀಟ್ ಮಾಡಿದ ರಾಹುಲ್, ಕಾಲೆಳೆದ ಬಿಜೆಪಿ

ಏಪ್ರಿಲ್ 26 ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಚಾರಕ್ಕೆಂದು ಹುಬ್ಬಳ್ಳಿಗೆ ಬಂದಿದ್ದ ರಾಹುಲ್ ಗಾಂಧಿ ಅವರ ವಿಮಾನ ಭಾರೀ ಅವಘಡದಿಂದ ಪಾರಾಗಿತ್ತು. ಅದಕ್ಕಾಗಿ ದೇವರ ಆಶೀರ್ವಾದ ಪಡೆಯಲು ರಾಹುಲ್ ಗಾಂಧಿ ಈ ಯಾತ್ರೆ ಕೈಗೊಂಡಿದ್ದಾರೆ.

Array

ರಾಹುಲ್ ಗಾಂಧಿ ವಿಡಿಯೋ

ಸಹ ಯಾತ್ರಿಗಳೊಂದಿಗೆ ರಾಹುಲ್ ಗಾಂಧಿ ಆತ್ಮೀಯವಾಗಿ ಹರಟುತ್ತಿರುವ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ವಿರಲ್ ಆಗಿದೆ. ಕೈಲಾಸ ಮಾನಸ ಯಾತ್ರೆಯ ಮೊದಲ ದಿನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರು ಕೈಲಾಸ ಪರ್ವತದೊಂದಿಗೆ 'ಅಸತೋ ಮಾ ಸದ್ಗಮಯ, ತಮಸೋ ಮಾ ಜ್ಯೋತಿರ್ಗಮಯಾ, ಮೃತ್ಯೋರ್ಮಾ ಅಮೃತಂಗಮಯಾ, ಓಂ ಶಾಂತಿಃ ಶಾಂತಿಃ ಶಾಂತಿಃ' ಎಂದು ಟ್ವೀಟ್ ಮಾಡಿದ್ದರು.

Array

ಸಹಯಾತ್ರಿಗಳೊಂದಿಗೆ ಫೋಟೋ

ಸಹ ಯಾತ್ರಿಗಳ ಮನವಿಯ ಮೇರೆಗೆ ಅವರೊಂದಿಗೆ ರಾಹುಲ್ ಗಾಂಧಿ ಅವರು ಫೋಟೋಕ್ಕೆ ಪೋಸು ನೀಡಿದರು. ನಿನ್ನೇ ತಾನೇ ಕೈಲಾಸ ಮಾನಸ ಸರೋವರದ ಚಿತ್ರವನ್ನು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಈ ದೈತ್ಯ ಪರ್ವತದ ನೆರಳಲ್ಲಿ ವಿದೇಯವಾಗಿ ನಡೆಯುವುದು ಮಹಾನ್ ಅನುಭವ ಎಂದಿದ್ದರು.

ಮಾನಸ ಸರೋವರ ಯಾತ್ರೆಗೆ ರಾಹುಲ್ ರನ್ನು ಕರೆಸಿಕೊಂಡಿದ್ದು ಯಾರು?!ಮಾನಸ ಸರೋವರ ಯಾತ್ರೆಗೆ ರಾಹುಲ್ ರನ್ನು ಕರೆಸಿಕೊಂಡಿದ್ದು ಯಾರು?!

Array

ಶಿವನೇ ಬ್ರಹ್ಮಾಂಡ

ಕೈಲಾಸ ಪರ್ವತದ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿರುವ ಶಿವಭಕ್ತ ರಾಹುಲ್ ಗಾಂಧಿ, 'ಶಿವನೇ ಬ್ರಹ್ಮಾಂಡ' ಎಂದು ಟ್ವೀಟ್ ಮಾಡಿದ್ದಾರೆ. ಈ ವರ್ಷದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ದೇವಾಲಯಗಳಿಗೆ ಪದೇ ಪದೇ ಎಡತಾಕುತ್ತಿದ್ದ ರಾಹುಲ್ ಗಾಂಧಿ, ತಾವು ಶಿವಭಕ್ತ ಎಂದು ಹೇಳಿಕೊಂಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

20 ಸೆಕೆಂಡ್ ತಡವಾಗಿದ್ದರೆ ರಾಹುಲ್ ಇದ್ದ ವಿಮಾನ ಪತನವಾಗುತ್ತಿತ್ತು!20 ಸೆಕೆಂಡ್ ತಡವಾಗಿದ್ದರೆ ರಾಹುಲ್ ಇದ್ದ ವಿಮಾನ ಪತನವಾಗುತ್ತಿತ್ತು!

Array

ರಾಹುಲ್ ಗಾಂಧಿ ಟ್ವೀಟ್

"ಒಬ್ಬ ಮನುಷ್ಯ ಕೈಲಾಸ ಪರ್ವತಕ್ಕೆ ಹೋಗಬೇಕೆಂದರೆ, ಕೈಲಾಸ ಪರ್ವತವೇ ಆತನನ್ನು ಕರೆಸಿಕೊಳ್ಳುತ್ತದೆ. ನನಗೂ ಇಂಥ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಮಾನಸಸರೋವರದ ನೀರು ಶುದ್ಧ, ಪವಿತ್ರ ಮತ್ತು ಶಾಂತ. ಅದು ಎಲ್ಲವನ್ನೂ ನೀಡುತ್ತದೆ, ಆದರೆ ಏನನ್ನೂ ಕಿತ್ತುಕೊಳ್ಳುವುದಿಲ್ಲ. ಅದನ್ನು ಯಾರು ಬೇಕಾದರೂ ಕುಡಿಯಬಹುದು. ಇಲ್ಲಿ ಯಾವುದೇ ದ್ವೇಷವಿಲ್ಲ. ಇದಕ್ಕೆಂದೇ ನಾವು ಭಾರತೀಯರು ನೀರನ್ನು ಪೂಜಿಸುತ್ತೇವೆ" ಎಂದು ಸಹ ಈ ಮೊದಲಲು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ಅಸತೋ ಮಾ ಸದ್ಗಮಯ... ರಾಹುಲ್ ಗಾಂಧಿ ಹೊಸ ಟ್ವೀಟ್!ಅಸತೋ ಮಾ ಸದ್ಗಮಯ... ರಾಹುಲ್ ಗಾಂಧಿ ಹೊಸ ಟ್ವೀಟ್!

English summary
Congress president Rahul Gandhi's video and Photos of Kailas Mansarovar Yatra are becoming viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X