ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್: ಮೋದಿ ಬೆಂಬಲಕ್ಕೆ ನಿಂತ ಫ್ರೆಂಚ್ ಅಧ್ಯಕ್ಷ

|
Google Oneindia Kannada News

ಪ್ಯಾರಿಸ್, ಸೆಪ್ಟೆಂಬರ್ 27: 'ರಫೇಲ್ ಡೀಲ್ ಭಾರತ ಮತ್ತು ಫ್ರೆಂಚ್ ಸರ್ಕಾರಗಳ ವ್ಯವಹಾರವಷ್ಟೇ. ಇದರಲ್ಲಿ ಯಾರ ವೈಯಕ್ತಿಕ ಹಿತಾಸಕ್ತಿಯೂ ಇಲ್ಲ' ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಲ್ ಮ್ಯಾಕ್ರೋನ್ ಹೇಳಿದ್ದಾರೆ.

ಮೋದಿಯದ್ದು 'ಸ್ಕಿಲ್ ಇಂಡಿಯಾ' ಅಲ್ಲ 'ಕಿಲ್ ಇಂಡಿಯಾ': ರಾಹುಲ್ ಕುಟುಕುಮೋದಿಯದ್ದು 'ಸ್ಕಿಲ್ ಇಂಡಿಯಾ' ಅಲ್ಲ 'ಕಿಲ್ ಇಂಡಿಯಾ': ರಾಹುಲ್ ಕುಟುಕು

ಈ ಮೂಲಕ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳುರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

Rafale deal: French president defends PM Modi

"ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದು ಸತ್ಯ. ರಫೇಲ್ ಡೀಲ್ ಸರ್ಕಾರ ಮತ್ತು ಸರ್ಕಾರದ ನಡುವೆ ನಡೆದ ಚರ್ಚೆ. ರಕ್ಷಣೆಯ ವಿಷಯದಲ್ಲಿ ಭಾರತ ಮತ್ತು ಫ್ರಾನ್ಸ್ಸ ನಡುವೆ ಅತ್ಯುತ್ತಮವಾದ ಸಂಬಂಧವಿದೆ. ಇದರಲ್ಲಿ ಯಾರ ಹಿತಾಸಕ್ತಿಯೂ ಇಲ್ಲ. ಇದಕ್ಕೆ ಹೊರತಾಗಿ ಈ ವಿಷಯದ ಬಗ್ಗೆ ನಾನು ಏನನ್ನೂ ಮಾತನಾಡಲು ಇಷ್ಟಪಡುವುದಿಲ್ಲ" ಎಂದು ಮ್ಯಾಕ್ರೋನ್ ಹೇಳಿದ್ದಾರೆ.

ಯುವಜನರಿಂದ ಹಣ ಕದ್ದು, ಅಂಬಾನಿ ಕಿಸೆಗೆ ತುಂಬಿಸುವ ಚೌಕಿದಾರ: ರಾಹುಲ್ ಆರೋಪ ಯುವಜನರಿಂದ ಹಣ ಕದ್ದು, ಅಂಬಾನಿ ಕಿಸೆಗೆ ತುಂಬಿಸುವ ಚೌಕಿದಾರ: ರಾಹುಲ್ ಆರೋಪ

ಭಾರತ ಮತ್ತು ಫ್ರಾನ್ಸ್ ನಡುವೆ ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದ ಏರ್ಪಟ್ಟಿತ್ತು. ಆದರೆ ರಫೇಲ್ ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಅನ್ನು ಎನ್ ಡಿಎ ಸರ್ಕಾರ ಆಯ್ಕೆ ಮಾಡಿಕೊಂಡಿದೆ ಎಂದು ವಿಪಕ್ಷಗಳು ದೂರಿದ್ದವು. ಈ ಹಿನ್ನಲೆಯಲ್ಲಿ ರಫೇಲ್ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಮೋದಿ ಸರ್ಕಾರವನ್ನು ಹಳಿಯುವ ಪ್ರಬಲ ಅಸ್ತ್ರವನ್ನಾಗಿ ಇದನ್ನು ಬಳಸುತ್ತಿವೆ.

English summary
In a support to PM Narendra Modi French President Emmanuel Macron on Wednesday said that the Rafale fighter jet deal between India and France was a government-to-government deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X