ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ವಾಡ್: ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ 50 ಶತಕೋಟಿ ಡಾಲರ್ ಹೂಡಿಕೆ

|
Google Oneindia Kannada News

ಟೋಕಿಯೋ ಮೇ 25: ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಚೀನಾ ಹಣಕಾಸು ಒದಗಿಸುತ್ತಿರುವ ನಡುವೆಯೇ ಆ ಪ್ರದೇಶದಲ್ಲಿ ಉತ್ಪಾದಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ನಿರ್ಣಾಯಕವಾಗಿರುವ ಮೂಲಸೌಕರ್ಯ ಮೇಲಿನ ಸಹಕಾರವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಕ್ವಾಡ್ ನಾಯಕರು ಮಂಗಳವಾರ ಪುನರುಚ್ಚರಿಸಿದ್ದಾರೆ.

ಟೋಕಿಯೋದಲ್ಲಿ ನಡೆಯುತ್ತರುವ ನಾಲ್ಕನೇ ಕ್ವಾಡ್ ಶೃಂಗಸಭೆಯಲ್ಲಿ ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ನಾಯಕರ ಸಭೆಯ ನಂತರ ಜಂಟಿ ಹೇಳಿಕೆ ಬಿಡುಗಡೆಗೊಳಿಸಲಾಯಿತು.

"ಮುಂದಿನ ಐದು ವರ್ಷಗಳಲ್ಲಿ ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ 50 ಶತಕೋಟಿ ಅಮೆರಿಕನ್ ಡಾಲರ್ ಗಿಂತ ಹೆಚ್ಚಿನ ಮೂಲಸೌಕರ್ಯ ನೆರವು ಮತ್ತು ಹೂಡಿಕೆಯನ್ನು ವಿಸ್ತರಿಸಲು ಕ್ವಾಡ್ ಪ್ರಯತ್ನಿಸುತ್ತದೆ,'' ಎಂದು ಹೇಳಿದೆ.
ಅಲ್ಲದೇ ಅನೇಕ ದೇಶಗಳಲ್ಲಿ ಕೊರೊನಾ ಪರಿಸ್ಥಿತಿಯಿಂದಾಗಿ ಉಲ್ಬಣಗೊಂಡಿರುವ ಸಾಲದ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ವಾಡ್ ಪ್ರಯತ್ನಿಸುತ್ತದೆ ಎಂದು ಹೇಳಿದೆ.

ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ ಹೂಡಿಕೆ

ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ ಹೂಡಿಕೆ

ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ದಶಕಗಳ ಕೌಶಲ ಮತ್ತು ಅನುಭವವನ್ನು ಕ್ವಾಡ್ ಪಾಲುದಾರರು ಒಟ್ಟಿಗೆ ತರಲಿದ್ದಾರೆ. ಈ ಪ್ರದೇಶದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಹೆಚ್ಚಿಸಲು ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ಇದನ್ನು ಸಾಧಿಸಲು ಕ್ವಾಡ್ ಮುಂದಿನ ಐದು ವರ್ಷಗಳಲ್ಲಿ ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ 50 ಶತಕೋಟಿ ಅಮೆರಿಕನ್ ಡಾಲರ್ ಗಿಂತ ಹೆಚ್ಚಿನ ಮೂಲಸೌಕರ್ಯ ನೆರವು ಮತ್ತು ಹೂಡಿಕೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತದೆ ಎಂದು ಹೇಳಿಕೆ ನೀಡಲಾಗಿದೆ.

ಆರ್ಥಿಕ ಸಾಮರ್ಥ್ಯಕ್ಕೆ ಬಲ

ಆರ್ಥಿಕ ಸಾಮರ್ಥ್ಯಕ್ಕೆ ಬಲ

ಜಿ20 ರಾಷ್ಟ್ರಗಳ ಅಡಿಯಲ್ಲಿ ಸಾಲದ ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯವಿರುವ ರಾಷ್ಟ್ರಗಳ ಆರ್ಥಿಕ ಸಾಮರ್ಥ್ಯವನ್ನು ಬಲಪಡಿಸಲು ನಾವು ಕೆಲಸ ಮಾಡುತ್ತೇವೆ. ಕ್ವಾಡ್ ಸಾಲ ನಿರ್ವಹಣೆ ಸಂಪನ್ಮೂಲ ಪೋರ್ಟಲ್ ಸೇರಿದಂತೆ ಸಂಬಂಧಿತ ದೇಶಗಳ ಹಣಕಾಸು ಇಲಾಖೆಗಳೊಂದಿಗೆ ನಿಕಟ ಸಹಯೋಗದೊಂದಿಗೆ ಸಾಲದ ಸುಸ್ಥಿರತೆ ಮತ್ತು ಪಾರದರ್ಶಕತೆ ಉತ್ತೇಜಿಸಲು ಶ್ರಮಿಸಲಿದ್ದೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಾದೇಶಿಕ ಮತ್ತು ಡಿಜಿಟಲ್ ಸಂರ್ಪಕ, ಶುದ್ಧ ಇಂಧನ, ಹವಾಮಾನ ಸ್ಥಿತಿಸ್ಥಾಪಕತ್ವ ಸೇರಿದಂತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಹೇಳಿದೆ.

ಮೇಡ್ ಇನ್ ಇಂಡಿಯಾ ಲಸಿಕೆಗೆ ಪ್ರಶಂಸೆ

ಮೇಡ್ ಇನ್ ಇಂಡಿಯಾ ಲಸಿಕೆಗೆ ಪ್ರಶಂಸೆ

ಲಸಿಕೆ ಪಾಲುದಾರಿಕೆ-ಸುಸ್ಥಿರ ಉತ್ಪಾದನಾ ಸಾಮರ್ಥ್ಯದ ಅಡಿಯಲ್ಲಿ ಭಾರತದಲ್ಲಿನ ಜೈವಿಕ ಇ-ಸೌಲಭ್ಯದಲ್ಲಿ ಜೆ ಮತ್ತು ಜೆ ಲಸಿಕೆ ಉತ್ಪಾದನೆಯ ಪ್ರಗತಿಯನ್ನು ಕ್ವಾಡ್ ಸ್ವಾಗತಿಸುತ್ತದೆ. ಇದು ಕೋವಿಡ್-19 ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಟದಲ್ಲಿ ದೀರ್ಘಕಾಲಿಕ ಪ್ರಯೋಜನಗಳನ್ನು ನೀಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಅಂಗೀಕರಿಸಿದ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ಗೆ ಕ್ವಾಡ್ ನೀಡಿದ ದೇಣಿಗೆಯನ್ನು ಇಲ್ಲಿ ಸ್ಮರಿಸಲಾಗುವುದು ಎಂದು ಹೇಳಿಕೆ ನೀಡಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗಿ

ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್‌ ಪ್ರಧಾನಿ ಫುಮಿಯೊ ಕಿಶಿಡಾ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಸೇರಿದಂತೆ ಸದಸ್ಯ ರಾಷ್ಟ್ರಗಳ ನಾಯಕರು ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ, "ವಿಶ್ವದ ಎದುರಿನಲ್ಲಿ ಕ್ವಾಡ್ ತನ್ನದೇ ಆದ ವಿಶೇಷ ಸ್ಥಾನಮಾನದ ಜತೆಗೆ ಮಹತ್ವವನ್ನು ಸಾರಿ ಹೇಳುತ್ತಿದೆ. ಇಂದು ಕ್ವಾಡ್ ನ ವ್ಯಾಪ್ತಿ ವಿಸ್ತಾರಗೊಂಡಿದ್ದು, ಅದರ ರೂಪ ಪರಿಣಾಮಕಾರಿಯಾಗಿದೆ. ನಮ್ಮಲ್ಲಿನ ಪರಸ್ಪರ ನಂಬಿಕೆ ಮತ್ತು ನಿರ್ಣಯವು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಹೊಸ ಶಕ್ತಿ ಹಾಗೂ ಉತ್ಸಾಹವನ್ನು ನೀಡುತ್ತಿದೆ. ಕ್ವಾಡ್ ಪಾಲುದಾರರು ಪರಸ್ಪರ ಸಹಕಾರದೊಂದಿಗೆ ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಪ್ರೋತ್ಸಾಹಿಸುತ್ತದೆ,'' ಎಂದು ಹೇಳಿದ್ದರು.

English summary
Quad to give over 50 billion USD infrastructure, investment push in Indo-Pacific region in five years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X