ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದಕರನ್ನು ಬೆಂಬಲಿಸುತ್ತೀರಾ?: ಪಾಕಿಸ್ತಾನಕ್ಕೆ ಕ್ವಾಡ್ ನಾಯಕರ ಎಚ್ಚರಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಯುನೈಟೆಡ್ ಸ್ಟೇಟ್ಸ್, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿದಂತೆ ಕ್ವಾಡ್ ರಾಷ್ಟ್ರಗಳ ನಾಯಕರು ದಕ್ಷಿಣ ಏಷ್ಯಾದಲ್ಲಿ "ಭಯೋತ್ಪಾದಕ ಪ್ರತಿನಿಧಿ"ಗಳ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಗಡಿಯಾಚೆಗಿನ ದಾಳಿ ಸೇರಿದಂತೆ ಭಯೋತ್ಪಾದನಾ ಕೃತ್ಯಗಳಿಗೆ ಬೆಂಬಲ ನೀಡುವುದನ್ನು ನಿರಾಕರಿಸುವುದರ ಬಗ್ಗೆ ಒತ್ತಿ ಹೇಳಲಾಗಿದೆ. ಆ ಮೂಲಕ ಪಾಕಿಸ್ತಾನಕ್ಕೆ ನೇರ ಸಂದೇಶ ರವಾನಿಸಲಾಗಿದೆ.

ಶ್ವೇತಭವನದಲ್ಲಿ ತಮ್ಮ ಮೊದಲ ಕ್ವಾಡ್ ಶೃಂಗಸಭೆಯ ನಂತರ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ, ಯುಎಸ್ ಅಧ್ಯಕ್ಷ ಜೋ ಬೈಡೆನ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಯೋಶಿಹೈಡೆ ಸುಗಾ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ತಮ್ಮ ರಾಜತಾಂತ್ರಿಕ ಸಹಕಾರ, ಆರ್ಥಿಕತೆಯ ನಿಕಟವಾಗಿ ಸಂಯೋಜನೆ ಬಗ್ಗೆ ಉಲ್ಲೇಖಿಸಲಾಗಿತ್ತು. ಇದರ ಜೊತೆ ಅಫ್ಘಾನಿಸ್ತಾನದ ಮತ್ತು ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಮಾನವೀಯ ಸಹಕಾರವನ್ನು ಗಾಢವಾಗಿಸುತ್ತದೆ ಎಂದು ಹೇಳಲಾಗಿದೆ.

ಮೊದಲು ಜಾಗ ಖಾಲಿ ಮಾಡಿ; ಪಾಕ್ ಪ್ರಧಾನಿ ಇಮ್ರಾನ್ ಸುಳ್ಳು ಪ್ರಚಾರಕ್ಕೆ ಭಾರತದ ಪ್ರಬಲ ಉತ್ತರಮೊದಲು ಜಾಗ ಖಾಲಿ ಮಾಡಿ; ಪಾಕ್ ಪ್ರಧಾನಿ ಇಮ್ರಾನ್ ಸುಳ್ಳು ಪ್ರಚಾರಕ್ಕೆ ಭಾರತದ ಪ್ರಬಲ ಉತ್ತರ

"ನಾವು ಭಯೋತ್ಪಾದಕ ಪ್ರಾತಿನಿಧ್ಯವನ್ನು ಖಂಡಿಸುತ್ತೇವೆ. ಗಡಿಯಾಚೆಗಿನ ದಾಳಿ ಸೇರಿದಂತೆ ಭಯೋತ್ಪಾದಕ ದಾಳಿಗಳನ್ನು ಆರಂಭಿಸಲು ಅಥವಾ ಯೋಜಿಸಲು ನಿಂತಿರುವ ಭಯೋತ್ಪಾದಕ ಗುಂಪುಗಳಿಗೆ ಯಾವುದೇ ಸಾಮಗ್ರಿಗಳು, ಹಣಕಾಸು ಅಥವಾ ಸೇನಾ ಬೆಂಬಲವನ್ನು ನಿರಾಕರಿಸುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದೇವೆ" ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕ್ವಾಡ್ ನಾಯಕರಿಂದ ಅಫ್ಘಾನಿಸ್ತಾನಕ್ಕೆ ಎಚ್ಚರಿಕೆ

ಕ್ವಾಡ್ ನಾಯಕರಿಂದ ಅಫ್ಘಾನಿಸ್ತಾನಕ್ಕೆ ಎಚ್ಚರಿಕೆ

ಅಫ್ಘಾನಿಸ್ತಾನದ ನೆಲವನ್ನು ಯಾವುದೇ ದೇಶಕ್ಕೆ ಬೆದರಿಕೆ ಹಾಕಲು, ದಾಳಿ ಮಾಡಲು, ಭಯೋತ್ಪಾದಕರಿಗೆ ಆಶ್ರಯ ನೀಡಲು, ತರಬೇತಿ ನೀಡಲು, ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಲು ಅಥವಾ ಹಣಕಾಸು ಒದಗಿಸಲು ಬಳಸಬಾರದು ಎಂದು ಕ್ವಾಡ್ ನಾಯಕರು ಪುನರುಚ್ಚರಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯನ್ನು ಎದುರಿಸುವ ಮಹತ್ವವನ್ನು ಈ ನಾಯಕರು ಪುನರುಚ್ಚರಿಸಿದ್ದಾರೆ.

ಅಫ್ಘಾನ್ ಪ್ರಜೆಗಳ ಹಕ್ಕುಗಳ ರಕ್ಷಣೆಗೆ ಕ್ವಾಡ್ ಬೆಂಬಲ

ಅಫ್ಘಾನ್ ಪ್ರಜೆಗಳ ಹಕ್ಕುಗಳ ರಕ್ಷಣೆಗೆ ಕ್ವಾಡ್ ಬೆಂಬಲ

"ನಾವು ಅಫ್ಘಾನಿಸ್ತಾನದ ಪ್ರಜೆಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಅಫ್ಘಾನಿಸ್ತಾನವನ್ನು ತೊರೆಯಲು ಬಯಸುವ ಯಾವುದೇ ವ್ಯಕ್ತಿಗೆ ಸುರಕ್ಷಿತ ಮಾರ್ಗವನ್ನು ಒದಗಿಸುವಂತೆ ತಾಲಿಬಾನ್‌ಗೆ ಕರೆ ನೀಡುತ್ತೇವೆ. ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಆಫ್ಘನ್ನರ ಮಾನವ ಹಕ್ಕುಗಳನ್ನು ಗೌರವಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ" ಎಂದು ಕ್ವಾಡ್ ನಾಯಕರ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ಉಗ್ರರಿಗೆ ಪಾಕಿಸ್ತಾನವೇ ಆಶ್ರಯ ತಾಣ

ಜಾಗತಿಕ ಉಗ್ರರಿಗೆ ಪಾಕಿಸ್ತಾನವೇ ಆಶ್ರಯ ತಾಣ

ಅಫ್ಘಾನಿಸ್ತಾನ ಸೇರಿದಂತೆ ಪಾಕಿಸ್ತಾನ ಹಾಗೂ ಕೆಲವು ನೆರೆಹೊರೆಯ ರಾಷ್ಟ್ರಗಳು ಉಗ್ರರ ಸುರಕ್ಷಿತ ಆಶ್ರಯ ತಾಣವಾಗಿವೆ ಎಂಬುದನ್ನು ಈ ಹಿಂದೆಯೇ ಯುಎಸ್ ಹೇಳಿತ್ತು. ಉಗ್ರರಿಗೆ ಆಶ್ರಯದ ಜೊತೆಗೆ ಬೆಂಬಲವನ್ನು ನೀಡುತ್ತಿರುವುದರ ಬಗ್ಗೆ ಉಲ್ಲೇಖಿಸಲಾಗಿತ್ತು. ಅದರಲ್ಲೂ ವಿಶ್ವಸಂಸ್ಥೆಯಿಂದ ಜಾಗತಿಕ ಮತ್ತು ನಿಷೇಧಿತ ಉಗ್ರರು ಎಂದು ಗುರುತಿಸಿರುವವರಿಗೆ ಈ ರಾಷ್ಟ್ರಗಳು ಆಶ್ರಯ ನೀಡಿವೆ.

ಅಫ್ಘಾನಿಸ್ತಾನದ ಸುರಕ್ಷತೆ ಮೂಲಕ ಮಾತು ಆರಂಭ

ಅಫ್ಘಾನಿಸ್ತಾನದ ಸುರಕ್ಷತೆ ಮೂಲಕ ಮಾತು ಆರಂಭ

ಕ್ವಾಡ್ ನಾಯಕರ ಸಭೆ ಬಳಿಕ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಮಾರಿಸನ್ ಮಾತನಾಡಿದರು. "ಅಫ್ಘಾನಿಸ್ತಾನದ ಭದ್ರತೆ ಮತ್ತು ಸುರಕ್ಷತೆ ವಿಷಯ ಕುರಿತು ಮೊದಲು ಚರ್ಚೆ ಶುರುವಾಯಿತು, ವಿಶೇಷವಾಗಿ ಅಫ್ಘಾನಿಸ್ತಾನವನ್ನು ತೊರೆಯುವುದಕ್ಕೆ ಬಯಸುವ ಸಾರ್ವಜನಿಕರಿಗೆ ಯಾವ ರೀತಿ ನೆರವು ನೀಡಬಹುದು, ಮಾನವೀಯ ದೃಷ್ಟಿಯಿಂದ ಈ ಕಾರ್ಯವನ್ನು ತಾಲಿಬಾನ್ ಸರ್ಕಾರವು ಎಷ್ಟು ಸುರಕ್ಷಿತವಾಗಿ ನಡೆಸಬೇಕು," ಎಂಬುದರ ಬಗ್ಗೆ ಚರ್ಚಿಸಲಾಗಿದೆ," ಎಂದು ಮಾರಿಸನ್ ಹೇಳಿದ್ದಾರೆ.

English summary
Quad Leaders Statement about Terror Proxies In South Asia: Here Storng Message To Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X