ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಅಧೋಗತಿಗೆ ಕುಸಿದಿರುವ ಪಾಕಿಸ್ತಾನಕ್ಕೆ ಕತಾರ್ $3 ಬಿಲಿಯನ್ ನೆರವು

|
Google Oneindia Kannada News

ಇಸ್ಲಾಮಾಬಾದ್, ಜೂನ್ 25: ಒಂದೆಡೆ ಹುಣದುಬ್ಬರ, ಇನ್ನೊಂದೆಡೆ ವಿದೇಶಗಳಿಂದ ಬರುವ ಹಣಕಾಸಿನ ಹರಿವಿಗೆ ಕತ್ತರಿಯಿಂದಾಗಿ ತತ್ತರಿಸಿದ್ದ ಪಾಕಿಸ್ತಾನಕ್ಕೆ ನೆರವಾಗಲು ಕತಾರ್ ಮುಂದಾಗಿದೆ.

ತೈಲ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶ್ರೀಮಂತ ದೇಶಗಳಲ್ಲಿ ಒಂದಾದ ಕತಾರ್, ಪಾಕಿಸ್ತಾನಕ್ಕೆ 3 ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಪ್ರಕಟಿಸಿದೆ.

ಹಡಾಲೆದ್ದ ಪಾಕಿಸ್ತಾನದ ಆರ್ಥಿಕ ಸ್ಥಿತಿ; ಸೇನಾ ಬಜೆಟ್ ಇಳಿಕೆ ಮಾಡಲು ಮುಂದಾದ ಸೈನ್ಯ ಹಡಾಲೆದ್ದ ಪಾಕಿಸ್ತಾನದ ಆರ್ಥಿಕ ಸ್ಥಿತಿ; ಸೇನಾ ಬಜೆಟ್ ಇಳಿಕೆ ಮಾಡಲು ಮುಂದಾದ ಸೈನ್ಯ

ಕತಾರ್‌ನ ರಾಜ ಇಮಿರ್ ಶೇಕ್ ತಮಿಮ್ ಬಿನ್ ಹಮದ್ ಅವರು ಇಸ್ಲಾಮಾಬಾದ್‌ಗೆ ಭೇಟಿ ನೀಡಿ ವ್ಯಾಪಾರ, ಹಣ ವರ್ಗಾವಣೆ ತಡೆ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವನ್ನು ತಡೆಗಟ್ಟುವ ಸಂಬಂಧ ಸಹಕಾರ ನೀಡುವ ಒಪ್ಪಿಗೆ ಸೂಚಿಸಿದ ಮರು ದಿನವೇ ಈ ಘೋಷಣೆ ಮಾಡಲಾಗಿದೆ.

qatar provide $3 billion bailout for pakistan

ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಉಂಟಾಗಿದ್ದು, ದೇಶ ಸಾಲದ ಸುಳಿಯಲ್ಲಿ ಸಿಲುಕಿದೆ. ಕಳೆದ 11 ತಿಂಗಳಿನಿಂದ ಪ್ರಧಾನಿ ಇಮ್ರಾನ್ ಖಾನ್ ದೇಶದ ಆರ್ಥಿಕ ಸ್ಥಿತಿಯನ್ನು ತಹಬದಿಗೆ ತರಲು ಸಾಹಸಪಡುತ್ತಿದ್ದು, ಕತಾರ್ ಆರ್ಥಿಕ ನೆರವು ನೀಡಲು ಮುಂದೆ ಬಂದಿರುವ ನಾಲ್ಕನೆಯ ದೇಶವಾಗಿದೆ.

ಲೀಟರ್ ಹಾಲಿಗೆ 190, ಕೆ.ಜಿ. ಮಟನ್‌ಗೆ 1,100 ರೂ: ಪಾಕಿಸ್ತಾನ ಕಂಗಾಲು ಲೀಟರ್ ಹಾಲಿಗೆ 190, ಕೆ.ಜಿ. ಮಟನ್‌ಗೆ 1,100 ರೂ: ಪಾಕಿಸ್ತಾನ ಕಂಗಾಲು

ಇದಕ್ಕೂ ಮುನ್ನ ಚೀನಾ ಠೇವಣಿ ಮತ್ತು ವಾಣಿಜ್ಯ ಸಾಲದ ರೂಪದಲ್ಲಿ 4.6 ಬಿಲಿಯನ್ ಡಾಲರ್ ನೀಡಿತ್ತು. ಸೌದಿ ಅರೇಬಿಯಾ 3 ಬಿಲಿಯನ್ ಡಾಲರ್ ನಗದು ಠೇವಣಿ ಒದಗಿಸಿತ್ತು. ಜತೆಗೆ 3.2 ಬಿಲಿಯನ್ ಡಾಲರ್ ಮೊತ್ತದ ತೈಲ ಸೌಲಭ್ಯ ನೀಡಿತ್ತು. ಯುನೈಟೆಡ್ ಅರಬ್ ಎಮಿರೈಟ್ಸ್ ಸಹ 2 ಬಿಲಿಯನ್ ಡಾಲರ್ ನಗದು ಪೂರೈಸಿತ್ತು.

English summary
Qatar has announced $3 Billion bailout package for financial crisis hit Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X