• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಷ ಕುಡಿದರೂ ಸಾವು ಗೆದ್ದ ಪುಟಿನ್ ಶತ್ರು ನವಲ್ನಿ!

|

ಆಗಸ್ಟ್ 20ರಂದು ವಿಷ ಬೆರೆಸಿದ್ದ ಟೀ ಕುಡಿದು ಕೋಮಾ ತಲುಪಿದ್ದ ರಷ್ಯಾ ಅಧ್ಯಕ್ಷ ಪುಟಿನ್‌ರ ಪರಮ ಶತ್ರು ಅಲೆಕ್ಸಿ ನವಲ್ನಿ ಕೋಮಾದಿಂದ ಹೊರಬಂದಿದ್ದಾರೆ. ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ಅಲೆಕ್ಸಿ ನವಲ್ನಿ ಆರೋಗ್ಯ ಹದಗೆಟ್ಟಿತ್ತು. ತಕ್ಷಣ ಒಮಾಸ್ಕ್‌ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ನವಲ್ನಿಗೆ ಚಿಕಿತ್ಸೆ ಕೊಡಿಸಲಾಗಿತ್ತು.

ವಿಮಾನ ಹತ್ತುವ ಮೊದಲು ರೆಸ್ಟೋರೆಂಟ್ ಒಂದರಲ್ಲಿ ಅಲೆಕ್ಸಿ ನವಲ್ನಿ ಟೀ ಸೇವಿಸಿದ್ದರು. ಅದೇ ಚಹಾದಲ್ಲಿ ಕಾರ್ಕೋಟಕ ವಿಷ ಬೆರೆಸಿದ್ದರು ಎನ್ನಲಾಗಿತ್ತು. ಇದಾದ ನಂತರ ರಷ್ಯಾದ ಸಾಮಾನ್ಯ ಆಸ್ಪತ್ರೆಯಲ್ಲಿ ನವಲ್ನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ನವಲ್ನಿ ಕುಟುಂಬ ಹಾಗೂ ಆತನ ಬೆಂಬಲಿಗರು ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದರು.

ಪುಟಿನ್ ಶತ್ರು ಅಲೆಕ್ಸಿ ನವಲ್ನಿ ಜರ್ಮನಿಗೆ ಶಿಫ್ಟ್..!

ನವಲ್ನಿಯನ್ನು ಜರ್ಮನಿಗೆ ಶಿಫ್ಟ್ ಮಾಡುವ ವಿಚಾರದಲ್ಲಿ ದೊಡ್ಡ ನಾಟಕವೇ ನಡೆದಿತ್ತು. ಬಳಿಕ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದಿದ್ದ ರಷ್ಯಾ ಸರ್ಕಾರ ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಲು ಒಪ್ಪಿತ್ತು. ಹೀಗೆ ಜರ್ಮನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಲ್ನಿ ಕೋಮಾ ಸ್ಟೇಜ್‌ನಿಂದ ಹೊರಬಂದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ಕೆಲ ದಿನಗಳ ಹಿಂದೆ ಅಲೆಕ್ಸಿ ನವಲ್ನಿ ಪರಿಸ್ಥಿತಿ ಗಮನಿಸಿದ್ದ ತಜ್ಞರು ಆತ ಬದುಕುಳಿಯುವುದೇ ಅನುಮಾನ ಎಂದಿದ್ದರು. ಅದರಲ್ಲೂ ಜರ್ಮನಿಗೆ ಶಿಫ್ಟ್ ಆಗಲು ನವಲ್ನಿಗೆ ತುರ್ತಾಗಿ ಅನುಮತಿ ನೀಡದಿರುವುದು ಆತನ ಜೀವಕ್ಕೆ ದೊಡ್ಡ ಕಂಟಕ ಸೃಷ್ಟಿಮಾಡಿತ್ತು. ಆದರೆ ಜರ್ಮನಿಯ ಸ್ವಯಂಸೇವಾ ಸಂಸ್ಥೆಯೊಂದು ನವಲ್ನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿತ್ತಲ್ಲದೆ, ಸ್ವತಃ ವಿಮಾನವನ್ನು ಕೂಡ ರಷ್ಯಾಗೆ ಕಳುಹಿಸಿತ್ತು. ನವಲ್ನಿಗೆ ಬರ್ಲಿನ್‌ನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ವೆಂಟಿಲೇಟರ್ ಸಹಾಯದಿಂದ ನವಲ್ನಿ ಉಸಿರಾಡುತ್ತಿದ್ದಾರೆ.

ಅಲೆಕ್ಸಿ ನವಲ್ನಿಗೆ ನರಕ ದರ್ಶನ..?

ಅಲೆಕ್ಸಿ ನವಲ್ನಿಗೆ ನರಕ ದರ್ಶನ..?

ವಿಷ ದೇಹದೊಳಗೆ ಹೊಕ್ಕಿದರೆ ಬದುಕುಳಿಯುವ ಸಾಧ್ಯತೆ ತೀರಾ ಕಡಿವೆ. ಅದರಲ್ಲೂ ನವಲ್ನಿ ದೇಹ ಹೊಕ್ಕಿರುವುದು ಕೈಗಾರಿಕೆಗಳಲ್ಲಿ ಬಳಸುವ ವಿಷ. ನವಲ್ನಿ ಕೂದಲು ಹಾಗೂ ಅಂಗಿಯಲ್ಲಿ ಈ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಇದನ್ನೆಲ್ಲಾ ಗಮನಿಸಿದರೆ ನವಲ್ನಿ ಅಂಗಾಂಗಳಿಗೆ ಭಾರಿ ಹಾನಿಯಾಗುರುವುದು ಸ್ಪಷ್ಟವಾಗಿದೆ. ಹೀಗಾಗಿ ನವಲ್ನಿ ಸಾವು ಗೆದ್ದು ಆಸ್ಪತ್ರೆಯಿಂದ ಹೊರಬಂದರೂ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆ ದಟ್ಟವಾಗಿದೆ. ಇದು ನವಲ್ನಿ ಬೆಂಬಲಿಗರಲ್ಲಿ ಭಾರಿ ಆತಂಕ ಸೃಷ್ಟಿಸಿದೆ.

ಮಗುವಿನಂತೆ ಕಾಪಾಡುತ್ತಿರುವ ಹೆಂಡತಿ

ಮಗುವಿನಂತೆ ಕಾಪಾಡುತ್ತಿರುವ ಹೆಂಡತಿ

ನವಲ್ನಿ ಪತ್ನಿ ಅವರ ಜೊತೆಯಲ್ಲೇ ಇದ್ದಾರೆ. ವಿಷ ನವಲ್ನಿ ದೇಹ ಹೊಕ್ಕಿದೆ ಎಂಬುದು ತಿಳಿದ ಕ್ಷಣದಿಂದಲೂ ಯುಲಿಯಾ ನವಲ್ನಿ ಜೊತೆಯಲ್ಲೇ ಇದ್ದಾರೆ. ನವಲ್ನಿಯನ್ನು ಯುಲಿಯಾ ಮಗುವಿನಂತೆ ಆರೈಕೆ ಮಾಡುತ್ತಿದ್ರೆ, ಬೆಂಬಲಿಗರು ಅವರ ಬಗ್ಗೆ ತೋರುತ್ತಿರುವ ಪ್ರೀತಿ ಹಾಗೂ ಕಾಳಜಿ ರಷ್ಯಾದಲ್ಲಿ ನವಲ್ನಿ ಮೇಲಿರುವ ಅಭಿಮಾನ ಎಂತಹದ್ದು ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಹೋರಾಟ

ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ರಷ್ಯಾದ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಭ್ರಷ್ಟಾಚಾರದ ಬಗ್ಗೆ ಸಿನಿಮಾ ಕೂಡ ನಿರ್ದೇಶಿಸಿದ್ದರು. ಹಾಗೇ ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ನವಲ್ನಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದೇ ನವಲ್ನಿಯ ಜೀವಕ್ಕೆ ಮುಳುವಾಗಿದೆ ಎಂಬುದು ಆಪ್ತರ ಮಾತು.

ಹಿಂದೆಯೂ ದಾಳಿ ನಡೆದಿತ್ತು

ಹಿಂದೆಯೂ ದಾಳಿ ನಡೆದಿತ್ತು

ನವಲ್ನಿ ಮೇಲೆ ದಾಳಿಗಳು ನಡೆಯುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಕೂಡ ರಾಸಾಯನಿಕ ದಾಳಿ ನಡೆದಿತ್ತು. ನವಲ್ನಿ ರಸ್ತೆಯಲ್ಲಿ ಕ್ಯಾಂಪೇನ್ ಮಾಡುವಾಗ ಕೆಮಿಕಲ್ ಅಟ್ಯಾಕ್ ಮಾಡಿದ್ದ ಕಿರಾತಕನೊಬ್ಬ ಓಡಿ ಹೋಗಿದ್ದ. ದಾಳಿ ಪರಿಣಾಮ ಹಲವು ದಿನಗಳ ಕಾಲ ನವಲ್ನಿ ಮುಖ ಹಸಿರು ಬಣ್ಣಕ್ಕೆ ತಿರುಗಿತ್ತು. ಅಂದು ದಾಳಿ ನಡೆದಾಗ ಹೆದರದ ನವಲ್ನಿ ಹಸಿರು ಬಣ್ಣಕ್ಕೆ ತಿರುಗಿದ್ದ ಮುಖದಲ್ಲೇ ಲೈವ್ ಬಂದಿದ್ದರು. ತಮ್ಮನ್ನು ಈ ರೀತಿ ಹೆದರಿಸಲು ಆಗಲ್ಲ ಎಂದು ತೊಡೆ ತಟ್ಟಿದ್ದರು. ಈ ಮತ್ತೊಮ್ಮೆ ಇದೇ ರೀತಿ ಫಿನಿಕ್ಸ್‌ನಂತೆ ಸಂಕಷ್ಟದಿಂದ ಹೊರ ಬರವ ಮುನ್ಸೂಚನೆ ನೀಡಿದ್ದು, ರಷ್ಯಾ ರಾಜಕೀಯದಲ್ಲಿ ಬಿರುಗಾಳಿ ಸೃಷ್ಟಿಯಾಗುವ ಮುನ್ಸೂಚನೆ ಸಿಕ್ಕಿದೆ.

English summary
Putin's greatest enemy Alexei Navalny is out of a medically induced coma. Navalny became sick from suspected poisoning on a flight to Moscow from the Siberian city of Tomsk on August 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X