ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ ಸರ್ಮತ್ ಖಂಡಾಂತರ ಕ್ಷಿಪಣಿ ಯಶಸ್ವಿ ಪರೀಕ್ಷೆ; ವಿರೋಧಿಗಳಿಗೆ ಪುಟಿನ್ ಎಚ್ಚರಿಕೆ

|
Google Oneindia Kannada News

ಮಾಸ್ಕೋ, ಏಪ್ರಿಲ್ 20: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಮುಂದುವರಿದಿದೆ. ಇದರ ಮಧ್ಯೆ ಬುಧವಾರ ಸರ್ಮತ್ ಖಂಡಾಂತರ ಕ್ಷಿಪಣಿಯನ್ನು ರಷ್ಯಾ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಪರಮಾಣು ಅಸ್ತ್ರವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಶಸ್ತ್ರಾಸ್ತ್ರವು ಕ್ರೆಮ್ಲಿನ್‌ನ ಶತ್ರುಗಳನ್ನು "ಎರಡೆರೆಡು ಬಾರಿ ಯೋಚಿಸುವಂತೆ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ.

ಪಾಶ್ಚಿಮಾತ್ಯ ವಿಶ್ಲೇಷಕರಿಂದ ಸೈತಾನ್ 2 ಎಂದು ಕರೆಯಲ್ಪಡುವ ಸರ್ಮತ್ ರಷ್ಯಾದ ಮುಂದಿನ ಪೀಳಿಗೆಯ ಕ್ಷಿಪಣಿಗಳಲ್ಲಿ ಒಂದಾಗಿದೆ. ಇದನ್ನು ಪುಟಿನ್ ಅವರು "ಅಜೇಯ" ಎಂದು ಕರೆದಿದ್ದಾರೆ. ಇದು ಕಿನ್ಜಾಲ್ ಮತ್ತು ಅವಂಗಾರ್ಡ್ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಸಹ ಒಳಗೊಂಡಿದೆ.

Breaking; ಉಕ್ರೇನ್ ಸೈನಿಕರಿಗೆ ಶರಣಾಗಲು ರಷ್ಯಾಪಡೆಯಿಂದ ಮತ್ತೆ ಸೂಚನೆ Breaking; ಉಕ್ರೇನ್ ಸೈನಿಕರಿಗೆ ಶರಣಾಗಲು ರಷ್ಯಾಪಡೆಯಿಂದ ಮತ್ತೆ ಸೂಚನೆ

ಉಕ್ರೇನ್‌ನಲ್ಲಿ ಫೆಬ್ರವರಿ 24 ರಿಂದ ರಷ್ಯಾದ ಪಡೆಗಳು ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿವೆ. ಈ ಯುದ್ಧದಲ್ಲಿ ಮೊದಲ ಬಾರಿಗೆ ಕಿಂಜಾಲ್ ಅನ್ನು ಬಳಸಿಕೊಂಡಿರುವುದಾಗಿ ರಷ್ಯಾ ಕಳೆದ ತಿಂಗಳಿನಲ್ಲೇ ಹೇಳಿದೆ. "ಸರ್ಮತ್ ಖಂಡಾಂತರ ಕ್ಷಿಪಣಿಯ ಯಶಸ್ವಿ ಉಡಾವಣೆಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ" ಎಂದು ಪುಟಿನ್ ತಿಳಿಸಿದ್ದಾರೆ.
"ಈ ಅನನ್ಯ ಆಯುಧವು ನಮ್ಮ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಬಾಹ್ಯ ಬೆದರಿಕೆಗಳಿಂದ ರಷ್ಯಾದ ಭದ್ರತೆಯನ್ನು ವಿಶ್ವಾಸಾರ್ಹವಾಗಿ ಖಚಿತಪಡಿಸುತ್ತದೆ. ಇದರ ಜೊತೆಗೆ ಆಕ್ರಮಣಕಾರಿ ವಾಕ್ಚಾತುರ್ಯದ ಬಿಸಿಯಲ್ಲಿ, ನಮ್ಮ ದೇಶಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸುವವರನ್ನು ಎರಡು ಬಾರಿ ಯೋಚಿಸುವಂತೆ ಮಾಡುತ್ತದೆ" ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

Putin Sends Another Warning after Russia has successfully tested the Sarmat intercontinental ballistic missile

ಉತ್ತರ ರಷ್ಯಾದ ಪ್ಲೆಸೆಟ್ಸ್ಕ್ ಕಾಸ್ಮೋಡ್ರೋಮ್‌ನಲ್ಲಿ ಪರೀಕ್ಷೆಯು "ಯಶಸ್ವಿಯಾಗಿ" ನಡೆದಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಷ್ಯಾ ಸಚಿವಾಲಯದ ಪ್ರಕಾರ, ಕ್ಷಿಪಣಿಯು ರಷ್ಯಾದ ದೂರದ ಪೂರ್ವದಲ್ಲಿರುವ ಕಂಚಟ್ಕಾ ಪರ್ಯಾಯ ದ್ವೀಪದ ಕುರಾ ಪರೀಕ್ಷಾ ಶ್ಪೇಣಿಯ ತರಬೇತಿ ಸಿಡಿತಲೆಗಳನ್ನು ತಲುಪಿದೆ.

"ವಿಶ್ವದ ಗುರಿಗಳ ವಿನಾಶದ ದೀರ್ಘ ವ್ಯಾಪ್ತಿಯೊಂದಿಗೆ ಸರ್ಮತ್ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯಾಗಿದ್ದು, ಇದು ನಮ್ಮ ದೇಶದ ಕಾರ್ಯತಂತ್ರದ ಪರಮಾಣು ಪಡೆಗಳ ಯುದ್ಧ ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ," ಎಂದು ಸಚಿವಾಲಯ ಹೇಳಿದೆ.

Putin Sends Another Warning after Russia has successfully tested the Sarmat intercontinental ballistic missile

ಸರ್ಮತ್ ಸೂಪರ್‌ಹೆವಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಣ್ಣ ಆರಂಭಿಕ ಬೂಸ್ಟ್ ಹಂತದೊಂದಿಗೆ ಕ್ಷಿಪಣಿ-ವಿರೋಧಿ ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಶತ್ರುಗಳ ಕಣ್ಗಾವಲು ವ್ಯವಸ್ಥೆಗಳನ್ನು ಪತ್ತೆ ಮಾಡುವುದಕ್ಕಾಗಿ ಒಂದು ಸಣ್ಣ ವಿಂಡೋವನ್ನು ನೀಡಲಾಗಿದೆ. 200 ಟನ್‌ಗಳಿಗಿಂತ ಹೆಚ್ಚು ತೂಕ ಮತ್ತು ಬಹು ಸಿಡಿತಲೆಗಳನ್ನು ಸಾಗಿಸಲು ಸರ್ಮತ್ ಕ್ಷಿಪಣಿಯು ಸಮರ್ಥವಾಗಿದೆ. ಈ ಕ್ಷಿಪಣಿಯು ಭೂಮಿಯ ಮೇಲಿನ ಯಾವುದೇ ಗುರಿಯನ್ನು ಹೊಡೆಯಬಹುದು ಎಂದು ಪುಟಿನ್ ಹೇಳಿದ್ದಾರೆ.

English summary
Vladimir Putin Sends Another Warning after Russia has successfully tested the Sarmat intercontinental ballistic missile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X