ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ 'ಹಂತಕ' ಎಂದು ಕರೆದಿದ್ದಕ್ಕೆ ಪುಟಿನ್ ಪ್ರತಿಕ್ರಿಯೆ ಏನು?

|
Google Oneindia Kannada News

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮಾಡಿರುವ ಆರೋಪದ ಕುರಿತು ಮಾತನಾಡಿದ್ದಾರೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮನ್ನು 'ಹಂತಕ' ಎಂದು ಕರೆದಿದ್ದರ ಬಗ್ಗೆ ತಾವು ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಹೇಳಿದ್ದಾರೆ.

ಯುಎಸ್‌ ಮಾಜಿ ಅಧ್ಯಕ್ಷ ಟ್ರಂಪ್‌ ಅಸಾಧಾರಣ ಮತ್ತು ಪ್ರತಿಭಾವಂತ ವ್ಯಕ್ತಿ ಎಂದು ನಾನು ನಂಬುತ್ತೇನೆ. ಅದಿಲ್ಲದಿದ್ದರೆ ಅವರು ಅಮೆರಿಕದ ಅಧ್ಯಕ್ಷರಾಗುತ್ತಿರಲಿಲ್ಲ. ಅವರದು ವರ್ಣರಂಜಿತ ವ್ಯಕ್ತಿತ್ವ.

Putin Says Not Worried When Asked About Biden Calling Him Killer

ನೀವು ಅವರನ್ನು ಇಷ್ಟಪಡಬಹುದು ಅಥವಾ ಇಷ್ಟಪಡದೆಯೂ ಇರಬಹುದು. ಈ ಹಿಂದೆ ಅವರೇನು ತುಂಬಾ ಕಾಲದಿಂದ ರಾಜಕೀಯದಲ್ಲಿ ಇದ್ದವರಲ್ಲ. ಕೆಲವರು ಅವರನ್ನು ಇಷ್ಟಪಡುತ್ತಾರೆ, ಇನ್ನೂ ಕೆಲವರು ಇಷ್ಟಪಡುವುದಿಲ್ಲ. ಆದರೆ ಅದೇ ವಾಸ್ತವʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವೇಳೆ ರಷ್ಯಾ-ಅಮೆರಿಕ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಉಭಯ ರಾಷ್ಟ್ರಗಳ ಸಂಬಂಧ ತೀರಾ ಕೆಳಮಟ್ಟದಲ್ಲಿದೆ ಎಂದಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪುಟಿನ್ , ಬೈಡನ್ ಅವರಿಗಿಂತ ಟ್ರಂಪ್ ಸಂಪೂರ್ಣ ವರ್ಣರಂಜಿತ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ನನ್ನ ಆಡಳಿತಾವಧಿಯಲ್ಲಿ, ಎಲ್ಲಾ ರೀತಿಯ ಕಾರಣಗಳು ಮತ್ತು ನೆಪಗಳಿಂದಾಗಿ ನಾನು ಎಲ್ಲಾ ಆಯಾಮಗಳಿಂದ, ಕ್ಷೇತ್ರಗಳಿಂದ ದಾಳಿ ಎದುರಿಸಿದ್ದೇನೆ. ಇದ್ಯಾವುದೂ ನನ್ನನ್ನು ಅಚ್ಚರಿಗೊಳಿಸಿಲ್ಲʼ ಎಂದು ಪುಟಿನ್‌ ಹೇಳಿದ್ದಾರೆ.

Recommended Video

Rohini Sindhuri ಪರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕೂಗು | Oneindia Kannada

ಇರಾನ್‌ಗೆ ಸುಧಾರಿತ ಉಪಗ್ರಹ ವ್ಯವಸ್ಥೆಯನ್ನು ಹಸ್ತಾಂತರಿಸಲು ರಷ್ಯಾ ಸಿದ್ಧತೆ ನಡೆಸುತ್ತಿದೆ ಎಂಬ ಅಮೆರಿಕ ಮಾಧ್ಯಮಗಳ ವರದಿಯನ್ನೂ ಪುಟಿನ್ ಈ ವೇಳೆ ಅಲ್ಲಗಳೆದರು.

English summary
Russian President Vladimir Putin said that he is not worried about being called "killer" by his US counterpart Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X