ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾ ಮೇಲಿನ ನಿರ್ಬಂಧ ನಿಷ್ಪ್ರಯೋಜಕ : ಪುಟಿನ್‌

By Sachhidananda Acharya
|
Google Oneindia Kannada News

ಕ್ಸಿಯಮೆನ್‌/ಚೀನಾ, ಸೆಪ್ಟೆಂಬರ್ 5: ಉತ್ತರ ಕೊರಿಯಾ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸುವುದು ನಿಷ್ಪ್ರಯೋಜಕ. ಉತ್ತರ ಕೊರಿಯಾ ಸಮಸ್ಯೆಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳದ ಹೊರತು ನಿರ್ಬಂಧಗಳಿಂದ ಉಪಯೋಗವಿಲ್ಲ. ಈ ರೀತಿಯ ಕಠಿಣ ಕ್ರಮಗಳು ಜಾಗತಿಕ ದುರಂತಕ್ಕೆ ನಾಂದಿಯಾಗಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಎಚ್ಚರಿಸಿದ್ದಾರೆ.

ಉತ್ತರ ಕೊರಿಯಾದಿಂದ ಯಶಸ್ವೀ 'ಅಣ್ವಸ್ತ್ರ ಪರೀಕ್ಷೆ', ಬೆಚ್ಚಿಬಿದ್ದ ವಿಶ್ವಉತ್ತರ ಕೊರಿಯಾದಿಂದ ಯಶಸ್ವೀ 'ಅಣ್ವಸ್ತ್ರ ಪರೀಕ್ಷೆ', ಬೆಚ್ಚಿಬಿದ್ದ ವಿಶ್ವ

ಮಂಗಳವಾರ ಚೀನಾದ ಕ್ಷಿಯಮೆನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ಮಾತುಗಳನ್ನು ಹೇಳಿದ್ದಾರೆ.

Putin opposes tougher sanctions against North Korea

ಅಣ್ವಸ್ತ್ರ ಪರೀಕ್ಷೆ ನಡೆಸಿದ "ಉತ್ತರ ಕೊರಿಯಾದ ಪ್ರಚೋದನಾಕಾರಿ ನಡೆಯನ್ನು ರಷ್ಯಾ ಖಂಡಿಸುತ್ತದೆ. ಆದರೆ, ಈ ಸನ್ನಿವೇಶವನ್ನು ಕೊರಿಯಾದ ಮೇಲೆ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಲು ಬಳಸಿಕೊಳ್ಳುವುದು ಶುದ್ಧ ನಿಷ್ಪ್ರಯೋಜಕ," ಎಂದು ರಷ್ಯಾ ಅಧ್ಯಕ್ಷರು ಹೇಳಿದ್ದಾರೆ.

ಅಲ್ಲದೆ, ಉತ್ತರ ಕೊರಿಯಾ ಮೇಲೆ ಮತ್ತಷ್ಟು ಕ್ರಮ ಕೈಗೊಳ್ಳುವುದರಿಂದ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಉತ್ತರ ಕೊರಿಯಾ ಪ್ರಬಲ ಜಲಜನಕ ಬಾಂಬ್‌ (ಅಣುಬಾಂಬ್ ನ ಮತ್ತೊಂದು ವಿಧ) ಪರೀಕ್ಷೆ ನಡೆಸಿತ್ತು. ಇದಕ್ಕೆ ಅಂತರಾಷ್ಟ್ರೀಯ ಸಮುದಾಯದಿಂದ ಭಾರೀ ಟೀಕೆ ವ್ಯಕ್ತವಾಗಿತ್ತು.

ಅಣ್ವಸ್ತ್ರ ಪರೀಕ್ಷೆ ನಡೆಸಿ ಗುಟುರು ಹಾಕಿದ ಉತ್ತರ ಕೊರಿಯಾ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸುವುದಾಗಿ ಬಗ್ಗೆ ಅಮೆರಿಕ ಹಾಗೂ ಚೀನಾ ದೇಶಗಳು ಬೆದರಿಕೆ ಹಾಕಿದ್ದವು. ಈ ಬಗ್ಗೆ ಇದೀಗ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಬಂಧ ಕ್ರಮಗಳು ಈ ಹಂತದಲ್ಲಿ ನಿಷ್ಪ್ರಯೋಜಕ ಎಂದು ಹೇಳಿದ್ದಾರೆ.

English summary
Russian president Vladimir Putin opposes tougher sanctions against North Korea for successfully tested Hydrogen bomb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X