ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೈಗೊಂಬೆ' ಇಮ್ರಾನ್ ಖಾನ್ ಗೆ ಪ್ರಧಾನಿ ಹುದ್ದೆ ಬಿಡಲು ಡೆಡ್ ಲೈನ್

By ಅನಿಲ್ ಆಚಾರ್
|
Google Oneindia Kannada News

ಲಾಹೋರ್, ಸೆಪ್ಟೆಂಬರ್ 25: ಪಾಕ್ ಸೇನೆಯಿಂದ 'ಆಯ್ಕೆಯಾಗಿರುವ' ಪ್ರಧಾನಿ ಇಮ್ರಾನ್ ಖಾನ್ ನನ್ನು ಜನವರಿ ಒಳಗಾಗಿ ಮನೆಗೆ ಕಳುಹಿಸಿ. ಇಲ್ಲದಿದ್ದರೆ ದೊಡ್ಡ್ ಮಟ್ಟದ ಪ್ರತಿಭಟನೆ ಎದುರಿಸಿ ಎಂದು ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಬಿಲಾವಲ್ ಭುಟ್ಟೋ- ಜರ್ದಾರಿ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಮೂವತ್ತೊಂದು ವರ್ಷದ ಬಿಲಾವಲ್ ಮಾತನಾಡಿ, ರಾಜಕೀಯ ಕಾರ್ಯಕರ್ತರನ್ನು ಸರ್ಕಾರ ಬಂಧಿಸಬಹುದು, ಮಾಧ್ಯಮಗಳ ಮೇಲೆ ನಿರ್ಬಂಧ ಹೇರಬಹುದು. ಆದರೆ ದೇಶದ ಆರ್ಥಿಕತೆ ಹಾಗೂ ವಿದೇಶಾಂಗ ನೀತಿಯನ್ನು ಹಳ್ಳ ಹಿಡಿಸಿರುವುದು ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದ ನೆರವಿಗೆ ನಿಂತಿದ್ದು ಪಾಕಿಸ್ತಾನದ ಮಹಾ ಪ್ರಮಾದ: ಇಮ್ರಾನ್ ಖಾನ್ಅಮೆರಿಕದ ನೆರವಿಗೆ ನಿಂತಿದ್ದು ಪಾಕಿಸ್ತಾನದ ಮಹಾ ಪ್ರಮಾದ: ಇಮ್ರಾನ್ ಖಾನ್

ಕೈಗೊಂಬೆಯು ಈಗ ಅಧಿಕಾರದಿಂದ ಇಳಿಯುವ ಕಾಲ ಬಂದಿದೆ. ಒಂದೋ ಆಯ್ಕೆಗಾರರು ಮತ್ತು ಮೈತ್ರಿ ಪಕ್ಷದವರು ಎಚ್ಚೆತ್ತುಕೊಳ್ಳಬೇಕು ಅಥವಾ ಹೊಸ ವರ್ಷದಲ್ಲಿ ಜನರೇ ಎಲ್ಲ ಕೈಗೊಂಬೆಗಳನ್ನು ಒದ್ದೋಡಿಸುತ್ತಾರೆ ಎಂದು ಬಿಲಾವಲ್ ಟ್ವೀಟ್ ಮಾಡಿದ್ದಾರೆ. ಜನರ ಪ್ರಜಾಪ್ರಭುತ್ವ, ಮಾನವೀಯ ಹಾಗೂ ಆರ್ಥಿಕ ಹಕ್ಕುಗಳ ಜತೆಗೆ ಪಾಕಿಸ್ತಾನ ಪೀಪಲ್ಸ್ ಪಕ್ಷವು ಎಂದು ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಜನವರಿಯೊಳಗಾಗಿ ಇಮ್ರಾನ್ ನನ್ನು ಹುದ್ದೆಯಿಂದ ತೊಲಗಿಸಿ

ಜನವರಿಯೊಳಗಾಗಿ ಇಮ್ರಾನ್ ನನ್ನು ಹುದ್ದೆಯಿಂದ ತೊಲಗಿಸಿ

ಕಳೆದ ಮಾರ್ಚ್ ನಲ್ಲಿ ಕೂಡ ಇಮ್ರಾನ್ ಖಾನ್ ಒಂದು ಕೈಗೊಂಬೆ ಎಂದು ಬಿಲಾವಲ್ ಕರೆದಿದ್ದರು. ಮಾಧ್ಯಮಗಳ ಜತೆಗೆ ಮಾತನಾಡಿದ ಬಿಲಾವಲ್, ಇಂಥ ಕೈಲಾಗದ ಪ್ರಧಾನಮಂತ್ರಿಯನ್ನು ಯಾರು ತಂದರೋ ಅವರೇ ಜನವರಿಯೊಳಗಾಗಿ ತೊಲಗಿಸುವುದು ಉತ್ತಮ. ಇಲ್ಲದಿದ್ದರೆ ಪೀಪಲ್ಸ್ ಪಾರ್ಟಿಯವರು ರಾವಲ್ಪಿಂಡಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂದಿದ್ದಾರೆ.

ರಾವಲ್ಪಿಂಡಿಯ ಪ್ರಾಮುಖ್ಯತೆ ಏನು?

ರಾವಲ್ಪಿಂಡಿಯ ಪ್ರಾಮುಖ್ಯತೆ ಏನು?

ಇದೇ ಪಕ್ಷಕ್ಕೆ ಸೇರಿದ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋರನ್ನು ನೇಣಿಗೇರಿಸಿದ್ದು, ಮತ್ತೊಬ್ಬ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋರನ್ನು ಹತ್ಯೆ ಮಾಡಿದ್ದು ರಾವಲ್ಪಿಂಡಿಯಲ್ಲಿ ಹಾಗೂ ಮಾಜಿ ರಾಷ್ಟ್ರಪತಿ ಅಸೀಫ್ ಅಲಿ ಜರ್ದಾರಿ (ಬಿಲಾವಲ್ ತಂದೆ) ಇರುವುದು ರಾವಲ್ಪಿಂಡಿ ಜೈಲಿನಲ್ಲಿ. ಜತೆಗೆ ಪಾಕಿಸ್ತಾನ ಸೇನೆಯ ಜನರಲ್ ಕೇಂದ್ರ ಕಚೇರಿ ಇರುವುದು ರಾವಲ್ಪಿಂಡಿಯಲ್ಲಿ.

ಪಾಕಿಸ್ತಾನವನ್ನು ಭಿಕ್ಷುಕ ದೇಶ ಮಾಡಿದ ಇಮ್ರಾನ್ ಖಾನ್ ಗೆ ಮೋದಿ ಗೌರವ ನೀಡಲ್ಲ: ಮರ್ಯಾಮ್ಪಾಕಿಸ್ತಾನವನ್ನು ಭಿಕ್ಷುಕ ದೇಶ ಮಾಡಿದ ಇಮ್ರಾನ್ ಖಾನ್ ಗೆ ಮೋದಿ ಗೌರವ ನೀಡಲ್ಲ: ಮರ್ಯಾಮ್

ವಿವಿಧ ರಾಜಕೀಯ ಪಕ್ಷಗಳ ಜತೆಗೆ ಚರ್ಚೆ

ವಿವಿಧ ರಾಜಕೀಯ ಪಕ್ಷಗಳ ಜತೆಗೆ ಚರ್ಚೆ

ಜಮಾಯಿತ್ ಉಲೇಮಾ-ಇ-ಇಸ್ಲಾಮ್-ಫಜ್ಲ್ ಜತೆ ಮಾತನಾಡಿರುವ ಪೀಪಲ್ಸ್ ಪಾರ್ಟಿ, ವಿವಿಧ ಪಕ್ಷಗಳ ಜತೆಗೆ ಚರ್ಚಿಸಿ, ಸರ್ಕಾರದ ವಿರುದ್ಧ ಪೂರ್ಣಾವಧಿ ಹೋರಾಟ ನಡೆಸಲು ನಿರ್ಧರಿಸಿದೆ. ಈ ಪ್ರತಿಭಟನೆಯಲ್ಲಿ ಮತ್ತೊಂದು ಪ್ರಮುಖ ರಾಜಕೀಯ ಪಕ್ಷ, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಿಎಂಎಲ್- ಎನ್ ಕೈ ಜೋಡಿಸಲಿದೆ. ಪ್ರತಿಭಟನೆಯ ದಿನಾಂಕ ಅಂತಿಮಗೊಳ್ಳಬೇಕಿದೆ.

ಜೈಲಿನಲ್ಲಿ ನವಾಜ್ ಷರೀಫ್ ರನ್ನು ಭೇಟಿ

ಜೈಲಿನಲ್ಲಿ ನವಾಜ್ ಷರೀಫ್ ರನ್ನು ಭೇಟಿ

ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನವಾಜ್ ಷರೀಫ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿರುವ ಅವರ ಸೋದರ ಶಾಬಾಜ್ ಷರೀಫ್, ಪ್ರತಿಭಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನು ಜೆಯುಐ- ಎಫ್ ನ ಮೌಲಾನಾ ಫಜ್ಲಾದ್ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಹುದ್ದೆಯಿಂದ ಕೆಳಗೆ ಇಳಿಯಲು ಆಗಸ್ಟ್ 31ನೇ ತಾರೀಕಿನ ಗಡುವು ನೀಡಿದ್ದರು.

English summary
Pakistan opposition party leader Bilawal Bhutto set a deadline to 'puppet' Imran Khan to step down from P.M. post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X