• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ದೇಶದಲ್ಲಿ ಮುಖಕ್ಕೆ ಮಾಸ್ಕ್‌ ಹಾಕದಿದ್ರೆ, ಸ್ಮಶಾನದಲ್ಲಿ ಗುಂಡಿ ತೋಡುವ ಶಿಕ್ಷೆ..!

|

ಜಕಾರ್ತ, ಸೆಪ್ಟೆಂಬರ್ 15: ಕೊರೊನಾವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ನಾನಾ ದೇಶಗಳು ಅನೇಕ ಕ್ರಮಗಳನ್ನು ಕೈಗೊಂಡಿವೆ. ಆದರೂ ಕೂಡ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸೋಂಕನ್ನು ನಿರ್ಲಕ್ಷಿಸಿ ಮುಖಕ್ಕೆ ಮಾಸ್ಕ್ ಧರಿಸದೇ ಓಡಾಡುವವರು ಇದ್ದಾರೆ. ಹೀಗೆ ಮಾಸ್ಕ್‌ ಧರಿಸದಿದ್ರೆ ಭಾರತದಲ್ಲಿ 500 ರೂಪಾಯಿ ದಂಡ ವಿಧಿಸಲಾಗುತ್ತದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಇತ್ತೀಚೆಗಷ್ಟೇ ಮಾಸ್ಕ್‌ ಧರಿಸದವರಿಗೆ ದಂಡದ ಮೊತ್ತವನ್ನು ಹೆಚ್ಚಿಸಿ ಜಾರ್ಖಂಡ್ ರಾಜ್ಯ ಸರ್ಕಾರ ಕೂಡ ಸುದ್ದಿಯಾಗಿತ್ತು. ಮಾಸ್ಕ್‌ ಧರಿಸದಿದ್ರೆ 1 ಲಕ್ಷ ರೂಪಾಯಿ ದಂಡ ಎಂದು ಘೋಷಿಸಿತ್ತು.

ಕೊರೊನಾವೈರಸ್ ನಿಂದ ರಕ್ಷಿಸಿಕೊಳ್ಳಲು ಎಂಥಾ ಮಾಸ್ಕ್ ಗಳು ಉತ್ತಮ?

ಆದರೆ ಫೇಸ್‌ ಮಾಸ್ಕ್‌ ಧರಿಸದಿದ್ರೆ ಇಂಡೋನೇಷ್ಯಾದಲ್ಲಿ ವಿಭಿನ್ನ ರೀತಿಯ ಶಿಕ್ಷೆಯನ್ನು ನೀಡಲಾಗುತ್ತಿದೆ. ಇಂಡೋನೇಷ್ಯಾದ ಪೂರ್ವ ಜಾವಾದ ಗ್ರೆಸಿಕ್ ರೀಜೆನ್ಸಿಯಲ್ಲಿ ಸಾರ್ವಜನಿಕವಾಗಿ ಫೇಸ್ ಮಾಸ್ಕ್ ಧರಿಸಲು ನಿರಾಕರಿಸಿದ ಎಂಟು ಜನರಿಗೆ ಸ್ಮಶಾನದಲ್ಲಿ ಗುಂಡಿ ತೋಡಲು ಸ್ಥಳೀಯ ಅಧಿಕಾರಿಗಳು ಆದೇಶಿಸಿದ್ದಾರೆ,

"ಆ ಸಮಯದಲ್ಲಿ ಕೇವಲ ಮೂವರು ಮಾತ್ರ ಸಮಾಧಿ ಸ್ಥಳಗಳಲ್ಲಿ ಗುಂಡಿ ತೋಡಲು ಇದ್ದರು, ಆದ್ದರಿಂದ ನಾನು ಈ ಜನರನ್ನು ಅವರೊಂದಿಗೆ ಕೆಲಸ ಮಾಡಲು ಸಹಕರಿಸಬಹುದೆಂದು ಎಂದು ಭಾವಿಸಿದೆ" ಎಂದು ಸೆರ್ಮೆ ಜಿಲ್ಲಾ ಮುಖ್ಯಸ್ಥ ಸುಯೊನೊ , ಸ್ಥಳೀಯ ಟ್ರಿಬ್ಯೂನ್ ನ್ಯೂಸ್‌ಗೆ ತಿಳಿಸಿದರು.

ಸ್ಮಶಾನದಲ್ಲಿ ಗುಂಡಿ ತೋಡಲು ಪ್ರತಿ ಸಮಾಧಿಗೆ ಇಬ್ಬರು ಜನರನ್ನು ಸುಯೊನೊ ನಿಯೋಜಿಸಿದ್ದಾರೆ. ಇಬ್ಬರು ಜನರಲ್ಲಿ, ಒಬ್ಬ ಸಮಾಧಿಯನ್ನು ಅಗೆಯುವ ಕಾರ್ಯವನ್ನು ನಿರ್ವಹಿಸಿದರೆ, ಇನ್ನೊಬ್ಬರು ಶವವನ್ನು ಸುರಕ್ಷಿತವಾಗಿ ಸುತ್ತಿ ಗುಂಡಿಯಲ್ಲಿ ಹಾಕುವ ಕಾರ್ಯವನ್ನು ಮಾಡುತ್ತಾರೆ.

   DK Shivakumar ಹಾಗು Randeep Surjewala ಅವರಿಂದ ಬದಲಾಗಿದೆಯೇ ಕಾಂಗ್ರೆಸ್ ಹವಾ | Oneindia Kannada

   ಮಾಸ್ಕ್‌ ಧರಿಸದೆ ಶಿಕ್ಷೆ ಅನುಭವಿಸುತ್ತಿರುವ ಯಾವುದೇ ತಪ್ಪಿತಸ್ಥರಿಗೆ ಮೃತ ದೇಹಗಳನ್ನು ನಿಭಾಯಿಸಲು ಒತ್ತಾಯಿಸುವುದಿಲ್ಲ ಎಂದು ತಿಳಿಸಲಾಗಿದೆ. ಈ ಕ್ರಮವು ಮಾಸ್ಕ್‌ ಧರಿಸದೇ ಓಡಾಡುವವರ ವಿರುದ್ಧ ಪರಿಣಾಮಕಾರಿ ಪರಿವರ್ತನೆ ಉಂಟುಮಾಡಬಹುದು ಎಂದು ಸುಯೊನೊ ಹೇಳಿದ್ದಾರೆ.

   ಏತನ್ಮಧ್ಯೆ, ಇಂಡೋನೇಷ್ಯಾದ ರಾಜಧಾನಿ ಜಕಾರ್ತವು ಕೋವಿಡ್-19 ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಇಂಡೋನೇಷ್ಯಾದ ವೈರಸ್ ಟಾಸ್ಕ್ ಫೋರ್ಸ್ ಪ್ರಕಾರ ರಾಷ್ಟ್ರದ 218,000 ಕೋವಿಡ್-19 ಪ್ರಕರಣಗಳಲ್ಲಿ 54,000 ಕ್ಕೂ ಹೆಚ್ಚು ಜಕಾರ್ತಾದಲ್ಲಿದೆ ಎಂದು ಹೇಳಿದ್ದಾರೆ. ನಗರದಲ್ಲಿ 1,391 ಸಾವುಗಳು ದಾಖಲಾಗಿವೆ.

   English summary
   Eight people who refused to wear face masks in public during the coronavirus pandemic were ordered by local authorities to dig graves for people who haddhad from COVID-19 in Gresik regency, East Java in Indonesia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X