ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ ಕುರಿತು ಸತ್ಯ ಬಾಯ್ಬಿಟ್ಟ ಮಂತ್ರಿಗೆ ಪಾಕ್ ಪ್ರಧಾನಿ ಸಮನ್ಸ್

|
Google Oneindia Kannada News

ಲಾಹೋರ್, ನವೆಂಬರ್ 03:ಪಾಕಿಸ್ತಾನ ನ್ಯಾಷನಲ್ ಅಸ್ಸೆಂಬ್ಲಿಯಲ್ಲಿ ಪುಲ್ವಾಮಾ ದಾಳಿ ಕುರಿತು ರಾಜಾರೋಷವಾಗಿ ಮಾತನಾಡಿದ್ದ ಸಚಿವರ ವಿರುದ್ಧ ಪಾಕಿಸ್ತಾನ ಪ್ರಧಾನಿ ಸಮನ್ಸ್ ಜಾರಿ ಮಾಡಿದ್ದಾರೆ.

ಹಿಂದೂಸ್ಥಾನ ನೆಲಕ್ಕೆ ನುಗ್ಗಿ ದಾಳಿ ಮಾಡುವ ಛಾತಿ ಇಮ್ರಾನ್ ಖಾನ್ ಆಡಳಿತದ ಯಶಸ್ಸು ಎಂದು ಪಾಕಿಸ್ತಾನ ಸಚಿವ ಫವಾದ್ ಚೌಧರಿ ಹೇಳಿದ್ದರು.

 ಪುಲ್ವಾಮಾ ದಾಳಿ ನಾವು ಮಾಡಿದ್ದೆಂದು ಹೇಳಿಯೇ ಇಲ್ಲ: ಪಾಕ್ ಸಚಿವ ಯೂಟರ್ನ್ ಪುಲ್ವಾಮಾ ದಾಳಿ ನಾವು ಮಾಡಿದ್ದೆಂದು ಹೇಳಿಯೇ ಇಲ್ಲ: ಪಾಕ್ ಸಚಿವ ಯೂಟರ್ನ್

ಚೌಧರಿ ಅಧಿ ಕೃತ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕಳ್ಳಾಟವನ್ನು ಬಯಲು ಮಾಡಿತ್ತು.

Pulwama Attack Statement Imran Khan Summons Minister

ಪ್ರಧಾನಿ ಇಮ್ರಾನ್ ಖಾನ್‌ಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಇದೀಗ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದ ಫಹಾದ್ ಚೌದರಿ ವಿರುದ್ಧ ಪಾಕ್ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ಚೌಧರಿ ಹೇಳಿಕೆ ನೀಡಿ ಸ್ವಲ್ಪ ಹೊತ್ತಿನಲ್ಲೇ ತಾನು ಆ ರೀತಿ ಹೇಳಿಕೆ ನೀಡಿಲ್ಲ, ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದರು.

ಪುಲ್ವಾಮಾ ದಾಳಿ ಬಳಿಕ ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲು ಮುಂದಾದಾಗ ಪಾಕಿಸ್ತಾನ ಹಿಂದೂಸ್ತಾನದೊಳಗೆ ನುಗ್ಗಿ ದಾಳಿ ಮಾಡಿದೆ.ಗಡಿ ರೇಖೆ ದಾಟಿದ ಭಾರತದ ವಾಯುಪಡೆಯನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ನಾನು ಹೇಳಿದ್ದೆ ಎಂದು ಫಹಾದ್ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕುತಂತ್ರ ಮತ್ತು ಬುದ್ಧಿಮತ್ತೆ ಬಯಲಾಗುತ್ತಿದ್ದಂತೆ ಪ್ರಧಾನಿ ಇಮ್ರಾನ್ ಖಾನ್, ಕೋಪಗೊಂಡಿದ್ದಾರೆ. ಹೇಳಿಕೆಯನ್ನು ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದಾರೆ.

ಇಷ್ಟೇ ಅಲ್ಲ ಪುಲ್ವಾಮಾ ದಾಳಿ, ಭಾರತ ಹಾಗೂ ಪಾಕಿಸ್ತಾನ ಗಡಿ ಸಮಸ್ಯೆಗಳ ಕುರಿತು ಯಾವುದೇ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ.

English summary
Pakistan Prime Minister Imran Khan has summoned Science and Technology Minister Fawad Chaudhry after embarrassing him at the world stage by claiming that 2019 Pulwama terror attack in India was a great "accomplishment" under the leadership of Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X