ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪುಲ್ವಾಮಾ ದಾಳಿಯಲ್ಲಿ ಜೈಷೆ ವಿರುದ್ಧ ಇನ್ನಷ್ಟು ಸಾಕ್ಷ್ಯ ಇದ್ದರೆ ನೀಡಿ'

|
Google Oneindia Kannada News

ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 27: ಪುಲ್ವಾಮಾ ಉಗ್ರ ದಾಳಿಯಲ್ಲಿ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆ ಕೈವಾಡ ಇದೆ ಎಂದು ಆರೋಪಿಸಿರುವ ಭಾರತ, ಈ ಸಂಬಂಧ ಹೆಚ್ಚಿನ ಮಾಹಿತಿ/ಸಾಕ್ಷ್ಯ ಒದಗಿಸಬೇಕು ಹಾಗೂ ಪಾಕಿಸ್ತಾನದಲ್ಲಿ ಉಗ್ರ ನೆಲೆಗಳು ಇರುವ ಬಗ್ಗೆ ಮಾಡಿರುವ ಆರೋಪಕ್ಕೆ ಸಾಕ್ಷಿ ನೀಡಬೇಕು ಎಂದು ಬುಧವಾರ ಹೇಳಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಸ್ಲಾಮಾಬಾದ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಭಾರತೀಯ ಹೈಕಮಿಷನರ್ ರನ್ನು ಕರೆಸಿಕೊಂಡ ವಿದೇಶಾಂಗ ಕಾರ್ಯದರ್ಶಿ, ಪುಲ್ವಾಮಾ ಘಟನೆ ಬಗ್ಗೆ ಕಂಡುಕೊಂಡ ಪ್ರಾಥಮಿಕ ಮಾಹಿತಿಯನ್ನು ಹಂಚಿಕೊಂಡರು ಎಂದು ಪಾಕ್ ವಿದೇಶಾಂಗ ಕಚೇರಿ ಹೇಳಿದೆ. ಪುಲ್ವಾಮಾ ದಾಳಿ ಬಗ್ಗೆ ಭಾರತೀಯ ದಾಖಲೆಗಳನ್ನು ಪರೀಕ್ಷಿಸಿ, ಪ್ರಾಥಮಿಕ ಮಾಹಿತಿಯನ್ನ್ನು ಭಾರತದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Pulwama attack: Pak seeks more evidence from India on Jaish involvement

ಫೆಬ್ರವರಿ ಇಪ್ಪತ್ತೇಳನೇ ತಾರೀಕು ನವದೆಹಲಿಯಲ್ಲಿರುವ ಪಾಕಿಸ್ತಾನದ ಹಂಗಾಮಿ ಹೈಕಮಿಷನರ್ ಗೆ ಭಾರತವು ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಜೈಷೆ ವಿರುದ್ಧದ ದಾಖಲಾತಿಗಳನ್ನು ನೀಡಿತ್ತು. 'ಈ ಪ್ರಕರಣವನ್ನು ಮುಂದುವರಿಸಲು ನಾವು ಇನ್ನಷ್ಟು ಮಾಹಿತಿ/ಸಾಕ್ಷ್ಯವನ್ನು ಭಾರತವನ್ನು ಕೇಳಲಾಗಿದೆ' ಎಂದು ವಿದೇಶಾಂಗ ಕಚೇರಿ ಹೇಳಿದೆ.

English summary
Pakistan on Wednesday sought more information/evidence from India on the involvement of the Jaish-e-Mohammed (JeM) in the Pulwama terror attack and the presence of camps of the U.N.-proscribed terror outfit in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X