ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು 'ಡಿಸೀಸ್ ಎಕ್ಸ್' ಮಾರಕ ಕಾಯಿಲೆ?: ಎಬೋಲಾ ಕಂಡುಹಿಡಿದ ವಿಜ್ಞಾನಿ ನೀಡಿದ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜನವರಿ 4: ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡು ಒಂದು ವರ್ಷವಾದರೂ ಜಗತ್ತು ಇನ್ನೂ ಅದರ ಹೊಡೆತದಿಂದ ಚೇತರಿಸಿಕೊಂಡಿಲ್ಲ. ವೈರಸ್‌ಅನ್ನು ನಿಯಂತ್ರಿಸಲು ಸಿದ್ಧಪಡಿಸಿದ ಲಸಿಕೆಗಳು ಈಗಷ್ಟೇ ಒಂದೊಂದಾಗಿ ತುರ್ತು ಬಳಕೆಗೆ ಅನುಮತಿ ಪಡೆದುಕೊಳ್ಳುತ್ತಿವೆ. ಅದರ ನಡುವೆಯೇ ವೈರಸ್‌ನ ರೂಪಾಂತರ ತಳಿ ಹರಡುತ್ತಿದ್ದು, ಮತ್ತಷ್ಟು ಬಗೆಯ ರೂಪಾಂತರಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಈಗ ಮತ್ತೊಂದು ಮಾರಕ ವೈರಸ್ ಜಗತ್ತಿಗೆ ಎರವಾಗಬಹುದು ಎಂಬ ಆತಂಕ ಶುರುವಾಗಿದೆ. ಅದರ ಹೆಸರು 'ಡಿಸೀಸ್ ಎಕ್ಸ್'. ಈ ಸೋಂಕು ಕೊರೊನಾ ವೈರಸ್‌ನಷ್ಟೇ ವೇಗವಾಗಿ ಹರಡುವಷ್ಟು ಪ್ರಬಲವಾಗಿದ್ದು, ಎಬೋಲಾ ವೈರಸ್‌ನಂತೆಯೇ ಮಾರಣಾಂತಿಕವಾಗಿರಬಲ್ಲದು. 1976ರಲ್ಲಿ ಎಬೋಲಾ ವೈರಸ್‌ಅನ್ನು ಕಂಡುಹಿಡಿದ ವಿಜ್ಞಾನಿಯೇ ಈ 'ಡಿಸೀಸ್ ಎಕ್ಸ್‌' ಅಪಾಯದ ಬಗ್ಗೆ ಎಚ್ಚರಿಕೆಯ ಗಂಟೆ ಮೊಳಗಿಸಿದ್ದಾರೆ.

ಕೊರೊನಾಗಿಂತಲೂ ಮೊದಲು ವೈದ್ಯಕೀಯ ಲೋಕಕ್ಕೆ ಎಬೋಲಾ ಸವಾಲುಕೊರೊನಾಗಿಂತಲೂ ಮೊದಲು ವೈದ್ಯಕೀಯ ಲೋಕಕ್ಕೆ ಎಬೋಲಾ ಸವಾಲು

ಭವಿಷ್ಯದಲ್ಲಿ ಸನಿಹದಲ್ಲಿಯೇ ಅನೇಕ ಮಾರಣಾಂತಿಕ ಕಾಯಿಲೆಗಳು ಎದುರಾಗುವ ಬಗ್ಗೆ ಮನುಕುಲ ಎಚ್ಚರಿಕೆ ವಹಿಸಬೇಕು ಎಂದು ಪ್ರೊಫೆಸರ್ ಜೀನ್ ಜಾಕ್ವೆಸ್ ಮುಯೆಂಬೆ ಟಮ್ಫಮ್ ಹೇಳಿದ್ದಾರೆ. 'ಡಿಸೀಸ್ ಎಕ್ಸ್' ಎನ್ನುವುದು ಕಾಲ್ಪನಿಕವಾಗಿರಬಹುದು. ಆದರೆ ಅದು ತೀವ್ರ ಮಾರಣಾಂತಿಕವಾಗಿರಬಹುದು ಮತ್ತು ಮತ್ತೊಂದು ಬೃಹತ್ ಸಾಂಕ್ರಾಮಿಕಕ್ಕೆ ಕಾರಣವಾಗಬಹುದು. ಜಗತ್ತಿನಾದ್ಯಂತ ಕೋಲಾಹಲಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಮುಂದೆ ಓದಿ.

ಕೊರೊನಾ ಜೊತೆ ಮತ್ತೆ ವಕ್ಕರಿಸಿದ ಎಬೋಲಾ: ಆಫ್ರಿಕಾದಲ್ಲಿ ಚಿಂತಾಜನಕ ಸ್ಥಿತಿಕೊರೊನಾ ಜೊತೆ ಮತ್ತೆ ವಕ್ಕರಿಸಿದ ಎಬೋಲಾ: ಆಫ್ರಿಕಾದಲ್ಲಿ ಚಿಂತಾಜನಕ ಸ್ಥಿತಿ

ಆಫ್ರಿಕಾ ಕಾಡುಗಳಲ್ಲಿವೆ ವೈರಸ್‌ಗಳು

ಆಫ್ರಿಕಾ ಕಾಡುಗಳಲ್ಲಿವೆ ವೈರಸ್‌ಗಳು

ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳಲ್ಲಿ ಹೊಸ ಹಾಗೂ ಭಯಾನಕವಾದ ವೈರಸ್‌ಗಳು ಸೃಷ್ಟಿಯಾಗುತ್ತಿವೆ. ಮತ್ತಷ್ಟು ಕಾಯಿಲೆಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತವೆ. ಇವು ಜೀವಕ್ಕೆ ಅಪಾಯಕಾರಿಯಾಗುವಷ್ಟು ಪ್ರಬಲವಾಗಿವೆ ಎಂದು ತಿಳಿಸಿದ್ದಾರೆ.

ಪ್ರಾಣಿಗಳಿಂದ ಮನುಷ್ಯರಿಗೆ

ಪ್ರಾಣಿಗಳಿಂದ ಮನುಷ್ಯರಿಗೆ

ಈ ಹಿಂದೆ ಸಂಭವಿಸಿದ ಹಳೆಯ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ಹಳದಿ ಜ್ವರ, ಇನ್‌ಫ್ಲೂಜೆಂಜಾ, ರೇಬಿಸ್ ಮತ್ತು ಕೊರೊನಾ ವೈರಸ್ ಕೂಡ ಪ್ರಾಣಿಗಳಿಂದ ಮನುಷ್ಯನಿಗೆ ಬರುತ್ತಿವೆ. ಈ ಸಂಕಷ್ಟಗಳು ಸಾಂಕ್ರಾಮಿಕ ಅಥವಾ ಪಿಡುಗಿಗೆ ಕಾರಣವಾಗುತ್ತಿವೆ. ಭವಿಷ್ಯದ ಸಾಂಕ್ರಾಮಿಕಗಳು ಕೋವಿಡ್‌ಗಿಂತಲೂ ಕೆಟ್ಟದಾಗಿರುತ್ತದೆ ಎಂದು ಹೇಳಿದ್ದಾರೆ.

ಸಮರ್ಪಕ ದಾಖಲೆಗೂ ಮುನ್ನ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ: ವಿಜ್ಞಾನಿಗಳ ಆಕ್ಷೇಪಸಮರ್ಪಕ ದಾಖಲೆಗೂ ಮುನ್ನ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ: ವಿಜ್ಞಾನಿಗಳ ಆಕ್ಷೇಪ

ರಕ್ತಸ್ರಾವ ಜ್ವರ ಪ್ರಕರಣ

ರಕ್ತಸ್ರಾವ ಜ್ವರ ಪ್ರಕರಣ

ರಕ್ತಸ್ರಾವ ಜ್ವರದಂತಹ ಲಕ್ಷಣಗಳು ರೋಗಿಯೊಬ್ಬರಲ್ಲಿ ಕಂಡುಬಂದಿದ್ದವು. ಆ ರೋಗಿ ಎಬೋಲಾ ಪರೀಕ್ಷೆಗೆ ಒಳಗಾಗಿದ್ದರು. ಆದರೆ ವೈದ್ಯರು ಅದು 'ಡಿಸೀಸ್ ಎಕ್ಸ್' ಲಕ್ಷಣಗಳಾಗಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಎಬೋಲಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವುದು ಹೊಸ ರೋಗಕಾರಕಗಳು ಕೋವಿಡ್ 19ಕ್ಕಿಂತಲೂ ವೇಗವಾಗಿ ಹರಡಬಲ್ಲದು ಎಂದು ವರದಿ ತಿಳಿಸಿದೆ.

ಶೇ 50-80ರಷ್ಟು ಮರಣ ಪ್ರಮಾಣ

ಶೇ 50-80ರಷ್ಟು ಮರಣ ಪ್ರಮಾಣ

ಕೋವಿಡ್ 19 ಸಾಂಕ್ರಾಮಿಕದ ಬಳಿಕ ಅನಿರೀಕ್ಷಿತ, ಗುರುತಿಸಲಾಗದ ಕಾಯಿಲೆಗಳು ಬರಲಿದ್ದು, ಶೀಘ್ರದಲ್ಲಿಯೇ ವಿಶ್ವವ್ಯಾಪಿ ತೊಂದರೆ ಉಂಟುಮಾಡಲಿದೆ. ಈಗ ಕಾಣಿಸಿಕೊಂಡಿರುವ ರಕ್ತಸ್ರಾವ ಜ್ವರ 'ಡಿಸೀಸ್ ಎಕ್ಸ್' ಕೋವಿಡ್ 19ರಷ್ಟು ವೇಗವಾಗಿ ಹರಡಬಲ್ಲದು. ಆದರೆ ಎಬೋಲಾದ ಶೇ 50 ರಿಂದ ಶೇ 90ರಿಂದ ಮರಣ ಪ್ರಮಾಣ ಹೊಂದಿರಲಿದೆ ಎಂದು ಟಮ್ಫಮ್ ಹೇಳಿದ್ದಾರೆ.

Recommended Video

ಬೆಂಗಳೂರು: ಬಿಬಿಎಂಪಿ ತೆರಿಗೆ ಹೊರೆ ನೀತಿಗೆ ಖಂಡನೆ, ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನಾ ರ್ಯಾಲಿ | Oneinda Kannada

English summary
Prof. Jean Tamfum who discovered Ebola virus warned that another disease named 'Disease X' could hit the world soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X