ನಮ್ಮ ತಂದೆ ಕೊಂದವರನ್ನು ನಾನು, ಪ್ರಿಯಾಂಕಾ ಕ್ಷಮಿಸಿದ್ದೇವೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 11: 'ನನ್ನ ತಂದೆ ಸಾಯುತ್ತಾರೆಂದು ನಮಗೆ ತಿಳಿದಿತ್ತು. ನನ್ನ ಅಜ್ಜಿ ಸಾಯುವರೆಂದೂ ಗೊತ್ತಿತ್ತು' ಎಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ತಂದೆ ರಾಜೀವ್ ಗಾಂಧಿ ಹಂತಕರನ್ನು ಕ್ಷಮಿಸಿರುವುದಾಗಿ ಹೇಳಿದ್ದಾರೆ.

ಸಿಂಗಪುರ ನಂತರ ಮಲೇಷಿಯಾಕ್ಕೆ ಬಂದಿರುವ ರಾಹುಲ್ ಗಾಂಧಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿ, ರಾಜೀವ್ ಗಾಂಧಿ ಹಂತಕರನ್ನು ಎಂದೋ ಸಂಪೂರ್ಣವಾಗಿ ಕ್ಷಮಿಸಿದ್ದೇವೆ ಎಂದರು.

Priyanka and I have forgiven our father's killers : Rahul Gandhi

'ರಾಜಕೀಯದಲ್ಲಿ ನೀವು ಎದುರಾಳಿ ಶಕ್ತಿಗಳನ್ನು ಎದುರಿಸಿದಾಗ, ನೀವು ಯಾವುದಾದರೊಂದರ ಪರವಾಗಿ ನಿಂತುಕೊಂಡಾಗ ನೀವು ಸಾಯುತ್ತೀರಿ. ಅಜ್ಜಿ ಹತ್ಯೆಯಾದಾಗ ನನಗೆ 14 ವರ್ಷ. ನನ್ನ ತಂದೆ ಕೊಲ್ಲಲ್ಪಟ್ಟರು.

ಆದ್ದರಿಂದ ನಮ್ಮ ಸುತ್ತ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ 15 ಜನ ಸುತ್ತುವರಿದಿರುವ ಪರಿಸರದಲ್ಲಿ ನಾವು ವಾಸಿಸುತ್ತಿದ್ದೀರಿ; ಇದು ಒಂದು ಸವಲತ್ತು ಎಂದು ನಾನು ಭಾವಿಸುವುದಿಲ್ಲ. ಬೇಕಾದಷ್ಟು ಸೌಲಭ್ಯಗಳಿವೆ. ಅದನ್ನು ನಾನು ಹೇಳಬಹುದು. ಆದರೆ, ನಾನು ಕಲ್ಲು ಮುಳ್ಳಿನ ಹಾದಿಯಲ್ಲಿಲ್ಲ ಎಂದು ಹೇಳಲು ಸಿದ್ಧವಿಲ್ಲ ಎಂದು ರಾಹುಲ್ ಹೇಳಿದರು.

ಅಪ್ಪನನ್ನು ಕೊಂದವರ ವಿರುದ್ಧ ಅನೇಕ ವರ್ಷಗಳ ನಾವೆಲ್ಲರೂ ಭಾರಿ ಸಿಟ್ಟಿನಲ್ಲಿದ್ದೆವು. ಆದರೆ, ನಂತರ ಪರಿಸ್ಥಿತಿಯನ್ನು ಒಪ್ಪಿಕೊಳ್ಳಬೇಕಾಯಿತು. ರಾಜಕೀಯದಲ್ಲಿ ಇಂಥ ಪರಿಸ್ಥಿತಿ ಎದುರಿಸುವ ಸವಾಲನ್ನು ಸ್ವೀಕರಿಸಿ ನಾವು ಮುನ್ನಡೆಯಲು ನಿರ್ಧರಿಸಿದೆವು ಎಂದು ರಾಹುಲ್ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Priyanka and I have forgiven our father's killers said AICC president Rahul Gandhi while addressing a gathering in Malayasia.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ